
ಫೆ.25ರಿ೦ದ ಮಾ.4ರವರೆಗೆ ಉಡುಪಿಯ ಮಹತೋಭಾರ ಶ್ರೀಅನ೦ತೇಶ್ವರ ದೇವಸ್ಥಾನದ ವಾರ್ಷಿಕ ರಥೋತ್ಸವ ಹಾಗೂ ಶಿವರಾತ್ರಿ ಮಹೋತ್ಸವ
ಉಡುಪಿ:ಇತಿಹಾಸ ಪ್ರಸಿದ್ಧವಾದ ಉಡುಪಿಯ ಶ್ರೀ ಅನ೦ತೇಶ್ವರ ಸನ್ನಿಧಿಯಲ್ಲಿ ದೇವಸ್ಥಾನದ ವಾರ್ಷಿಕ ರಥೋತ್ಸವ ಹಾಗೂ ಶಿವರಾತ್ರಿ ಮಹೋತ್ಸವ ಕಾರ್ಯಕ್ರಮವು ಫೆ.25ರಿ೦ದ ಮಾ.4ರವರೆಗೆ ಜರಗಲಿದೆ.
ಪರ೦ಪರಾತವಾಗಿ ಶುಭಸ೦ಪ್ರಾದಾಯಾನುಸಾರವಾಗಿ ಧಾರ್ಮಿಕ,ಸಾ೦ಸ್ಕೃತಿಕ ಕಾರ್ಯಕ್ರಮ ಸಮನ್ವಯದೊ೦ದಿಗೆ ನೆರವೇರಲಿದೆ.ಈ ಎ೦ಟು ದಿನಗಳ ಕಾಲ ನಡೆಯುವ ಶ್ರೀ ಸ್ವಾಮಿಯ ಸ೦ಭ್ರಮದ ಕಾರ್ಯಕ್ರಮಗಳಲ್ಲಿ ತಾವೆಲ್ಲರೂ ಸಹಭಾಗಿಗಳಾಗಿ, ಶ್ರೀದೇವರ ಸಿರಿಮುಡಿ ,ಗ೦ಧ ಪ್ರಸಾದವನ್ನು ಸ್ವೀಕರಿಸಿ ಶ್ರೀಭಗವದನುಗ್ರಹಕ್ಕೆ ಪಾತ್ರರಾಗಬೇಕಾಗಿ ದೇವಸ್ಥಾನ ಶ್ರೀಸುಗುಣೇ೦ದ್ರ ತೀರ್ಥಶ್ರೀಪಾದರು ಆಡಳಿತ ಮೊಕ್ತೇಸರರು ಮತ್ತು ಧರ್ಮದರ್ಶಿ ಮ೦ಡಳಿ ಪತ್ರಿಕಾಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಧಾರ್ಮಿಕ ಕಾರ್ಯಕ್ರಮ ಫೆ.25ರ ಮ೦ಗಳವಾರದ೦ದು ರಾತ್ರಿ-ಬಲಿ,ಮೃತ್ತಿಕಾ ಸ೦ಗ್ರಹ,ಅ೦ಕುರಾರೋಹಣ,
ಫೆ.26ರ೦ದು ಮಹಾಶಿವರಾತ್ರಿ ಪಾತ್ರ:-ಧ್ವಜಾರೋಹಣ,ಅಗ್ನಿ ಜನನ,ಪ್ರಧಾನ ಹೋಮ,ಕಲಶಾಭಿಷೇಕ ಮಧ್ನಾಹ್ನ -ಮಹಾಪೂಜೆ,ರಾತ್ರಿ-ಶಿವರಾತ್ರಿ ವಿಶೇಷ ಪೂಜೆ,ಬಲಿ,ಘ೦ಟೆ 10.00ಕ್ಕೆ ಮಹಾರ೦ಗ ಪೂಜೆ.
ಫೆ.27ರ ಗುರುವಾರದ೦ದು ಪಾತ್ರ:-ಪ್ರಧಾನ ಹೋಮ,ಕಲಶಾಭಿಷೇಕ,ಮಹಾಪೂಜೆ,ರಾತ್ರಿ-ಬಲಿ,ಕಟ್ಟೆಪೂಜೆ.
ಫೆ.28ರ ಶುಕ್ರವಾರದ೦ದು ಪಾತ್ರ:-ಪ್ರಧಾನ ಹೋಮ,ಕಲಶಾಭಿಷೇಕ,ಮಹಾಪೂಜೆ,ರಾತ್ರಿ-ಬಲಿ,ಕಟ್ಟೆಪೂಜೆ.
ಮಾ.1ರ೦ದು ಶನಿವಾರದ೦ದು ಪಾತ್ರ:-ಪ್ರಧಾನ ಹೋಮ,ಕಲಶಾಭಿಷೇಕ,ಮಹಾಪೂಜೆ,ರಾತ್ರಿ-ಬಲಿ,ಕಟ್ಟೆಪೂಜೆ.
ಮಾ.2ರ೦ದು ರವಿವಾರದ೦ದು ಪಾತ್ರ:-ಪ್ರಧಾನ ಹೋಮ,ಕಲಶಾಭಿಷೇಕ,ಮಹಾಪೂಜೆ,11.45ಕ್ಕೆ ರಥರೋಹಣ- “ಮಹಾರಥೋತ್ಸವ”ಸ೦ಜೆ 5.30ಕ್ಕೆ ರಥೋತ್ಸವ,ಓಲಗಮ೦ಟಪ ಪೂಜೆ,ರಾತ್ರಿ-ಭೂತ ಬಲಿ,ಶಯನ ಮ೦ಟಪಪೂಜೆ,ಶಯನೋತ್ಸವ,ಕವಾಟ ಬ೦ಧನ ಕಾರ್ಯಕ್ರಮ ಜರಗಲಿದೆ.
ಮಾ.3ರ೦ದು ಸೋಮವಾರದ೦ದು ಪಾತ್ರ:-ಕವಾಟೋದ್ಘಾಟನೆ,ಪ್ರಧಾನ ಹೋಮ,ಕಲಶಾಭಿಷೇಕ,ಮಹಾಪೂಜೆ,ರಾತ್ರಿ-ಬಲಿ,ಕಟ್ಟೆಪೂಜೆ.ಅವಭೃಥ ಸ್ನಾನ,ಪೂರ್ಣಾಹುತಿ,ಧ್ವಜಾವರೋಹಣ,ಮ೦ತ್ರಾಕ್ಷತೆ ಕಾರ್ಯಕ್ರಮ.
ಮಾ.4ರ೦ದು ಪಾತ್ರ:-ಮಹಾಸ೦ಪ್ರೋಕ್ಷಣೆ,ಮಧ್ಯಾಹ್ನ-ಮಹಾ ಪೂಜೆ
-:ಸಾ೦ಸ್ಕೃತಿ ಕಾರ್ಯಕ್ರಮ:-