ಜನವರಿ 18ರಿ೦ದ ಶೀರೂರು ಮಠಾಧೀಶರಾದ ಶ್ರೀವೇದವರ್ಧನ ಶ್ರೀಪಾದರ ಪ್ರಥಮ ಪರ್ಯಾಯ ಆರ೦ಭ-ಅದ್ದೂರಿಯ ಧಾನ್ಯ, ಶಿಖರ ಮುಹೂರ್ತ ಸ೦ಪನ್ನ…..ಉಡುಪಿ ಮೋಟಾರ್ಸ್ ನಲ್ಲಿ ಯಮಹಾ ಕಂಪೆನಿಯ ನೂತನ ರೆಟ್ರೋ ಮೊಡೆಲ್ ಬೈಕ್ ‘XSR 155 ಮಾರುಕಟ್ಟೆಗೆ ಬಿಡುಗಡೆ

ದಯಾನಾಯಕ್ ನೇತೃತ್ವದ ತಂಡದ ಕಾರ್ಯಾಚರಣೆ : ದಾದರ್‌ ಅತಿಥಿ ಗ್ರಹದಿಂದ ದ 10 ಕೋ. ರೂ. ಮೌಲ್ಯದ ಎಂಡಿ ಡ್ರಗ್ಸ್ ವಶ : ಇಬ್ಬರು ಅರೆಸ್ಟ್

ಮುಂಬಯಿ: ನಗರ ಪೊಲೀಸರ ಕೈಂ ಬ್ರಾಂಚ್ ಅಧಿಕಾರಿಗಳ ತಂಡ ನಡೆಸಿದ ಕಾರ್ಯಾಚರಣೆಯಲ್ಲಿ ಇಬ್ಬರು ವ್ಯಕ್ತಿಗಳನ್ನು ಬಂಧಿಸಿ, ಅವರಿಂದ x 10.08 ಕೋಟಿ ರೂ. ಎಂಡಿ ಡ್ರಗ್ಸ್‌ನ್ನು ವಶ ಪಡಿಸಿಕೊಂಡಿದ್ದಾರೆ ಎಂದು ತಿಳಿಯಲಾಗಿದೆ.

ನಿರ್ದಿಷ್ಟ ಮಾಹಿತಿಯ ಆಧಾರದ ಮೇಲೆ, ಅಪರಾಧ ವಿಭಾಗದ ಬಾಂದ್ರಾ ಘಟಕ 9ರ ಸೀನಿಯರ್ ಇನ್‌ ಸ್ಪೆಕ್ಟರ್‌ ಎನ್ ಕೌoಟರ್ ಸ್ಪೆಶಲಿಸ್ಟ್ ದಯಾ ನಾಯಕ್ ನೇತೃತ್ವದ ಅಧಿಕಾರಿಗಳ ತಂಡವು ಸಂಜೆ ದಾದರ್ (ಪೂರ್ವ) ನ ಸ್ವಾಮಿನಾರಾಯಣ್ ದೇವಸ್ಥಾನದ ಬಳಿ ಇರುವ ಖಾಸಗಿ ಅತಿಥಿ ಗೃಹದಲ್ಲಿ ಈ ಕಾರ್ಯಾಚರಣೆ ನಡೆಸಿದ್ದಾಗಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಇಬ್ಬರು ಆರೋಪಿಗಳು ತಡರಾತ್ರಿ ಎಂ ಡಿ ಸರಕಿನ ಜೊತೆಗೆ ಅಲ್ಲಿಗೆ ಬಂದಿದ್ದರು. ಅವರಲ್ಲಿ ಒಬ್ಬರು ಬಳಿಕ ಪೊಲೀಸ್ ಉಪಸ್ಥಿತಿಯನ್ನು ಗ್ರಹಿಸಿ ಪಲಾಯನ ಮಾಡಲು ಪ್ರಯತ್ನಿಸಿ ಪೊಲೀಸರ ಕೈಗೆ ಸಿಕ್ಕಿಬಿದ್ದರು. ಆರೋಪಿಗಳನ್ನು ‘ಎನ್‌ಕೌಂಟರ್‌ಸ್ಪೆಷಲಿಸ್ಟ್’ ಇನ್ಸ್ ಪೆಕ್ಟರ್ ದಯಾ ನಾಯಕ್ ನೇತೃತ್ವದ ತಂಡ ಬಂಧಿಸಿದರು ಎಂದು ಅಧಿಕಾರಿಗಳು  ಹೇಳಿದ್ದಾರೆ. ಆರೋಪಿಗಳಿಂದ ಸುಮಾರು 5.4 ಕೆಜಿ ಎಂ ಡಿ ವಶಪಡಿಸಿಕೊಳ್ಳಲಾಗಿದೆ. ಇದು ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ 10.08 ಕೋಟಿ ರೂ. ಮೌಲ್ಯವನ್ನು ಹೊಂದಿವೆ.

ಇಬ್ಬರು ಆರೋಪಿಗಳನ್ನು ಗೋವಂಡಿ ನಿವಾಸಿ ಜಹಾಂಗೀರ್ ಶಾಹಾ ಆಲಂ ಶೇಖ್ (29) ಮತ್ತು ಪಶ್ಚಿಮ ಬಂಗಾಳದ ಮಾಲಾಕ್ಕೆ ಸೇರಿದ ಸೆನೌಲ್ ಜುಲಮ್ ಸೆಖ್ (28) ಎಂದು ಗುರುತಿಸಲಾಗಿದೆ ಎಂದು ದಯಾ ನಾಯಕ್ ತಿಳಿಸಿದ್ದಾರೆ.

ಆರೋಗ್ಯಗಳ ವಿರುದ್ಧದ ಮಾದಕವಸ್ತುಗಳು ಮತ್ತು ಸೈಕೋಟ್ರೋಪಿಕ್ ವಸ್ತುಗಳು (ಎನ್‌ಡಿಪಿಎಸ್) ಕಾಯ್ದೆಯ ಸಂಬಂಧಿತ ಸೆಕ್ಷನ್‌ಗಳ ಅಡಿಯಲ್ಲಿ ಮಾಟುಂಗಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
No Comments

Leave A Comment