ಉಡುಪಿಯ ತೆ೦ಕಪೇಟೆಯ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ಭಜನಾ ಶತಮಾನೋತ್ತರ ರಜತ ಮಹೋತ್ಸವದ ಅ೦ಗವಾಗಿ ಜನವರಿ 29ಬುಧವಾರದಿ೦ದ ಜೂನ್ 3ರ ತನಕ 125ದಿನಗಳ ಕಾಲ ನಿರ೦ತರ ಅಹೋರಾತ್ರಿ ಭಜನಾ ಭಜನಾ ಕಾರ್ಯಕ್ರಮವನ್ನು ಬುಧವಾರದ೦ದು ಕಾಶೀ ಮಠಾಧೀಶರಾದ ಶ್ರೀಮದ್ ಶ್ರೀಸ೦ಯಮೀ೦ದ್ರ ತೀರ್ಥಶ್ರೀಪಾದರು ಅದ್ದೂರಿ ಚಾಲನೆ ನೀಡಿದರು......
ಉಡುಪಿಯ ತೆ೦ಕಪೇಟೆಯ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ಭಜನಾ ಶತಮಾನೋತ್ತರ ರಜತ ಮಹೋತ್ಸವದ ಅ೦ಗವಾಗಿ ಜನವರಿ 29ಬುಧವಾರದಿ೦ದ ಜೂನ್ 3ರ ತನಕ 125ದಿನಗಳ ಕಾಲ ನಿರ೦ತರ ಅಹೋರಾತ್ರಿ ಭಜನಾ ಭಜನಾ ಕಾರ್ಯಕ್ರಮವನ್ನು ಬುಧವಾರದ೦ದು ಕಾಶೀ ಮಠಾಧೀಶರಾದ ಶ್ರೀಮದ್ ಶ್ರೀಸ೦ಯಮೀ೦ದ್ರ ತೀರ್ಥಶ್ರೀಪಾದರು ಅದ್ದೂರಿ ಚಾಲನೆ ನೀಡಿದರು......

ಸಗ್ರಿ ಚಕ್ರತೀರ್ಥಶ್ರೀ ಉಮಾಮಹೇಶ್ವರ ದೇವಸ್ಥಾನದ ಬ್ರಹ್ಮಕಲಶೋತ್ಸವದ ಹೊರೆಕಾಣಿಕೆ ಅದ್ದೂರಿಯಿ೦ದ ಸ೦ಪನ್ನ…

ಉಡುಪಿ: ಸಗ್ರಿಚಕ್ರತೀರ್ಥ ಶ್ರೀ ಉಮಾಮಹೇಶ್ವರದೇವಸ್ಥಾನದಲ್ಲಿ ಧ್ವಜಪ್ರತಿಷ್ಠೆ, ರಥಸರ್ಮಪಣೆ, ಸ್ವಾಗತ ಗೋಪುರದ ಉದ್ಘಾಟನೆ, ಬ್ರಹ್ಮಕಲಶೋತ್ಸವ,ರಥೋತ್ಸವ,ಶೈವೋತ್ಸವ ಕಾರ್ಯಕ್ರಮವು ಫೆ.20ರಿ೦ದ 24ರವರೆಗೆ ವಿಜೃ೦ಭಣೆಯಿ೦ದ ಜರಗಲಿದೆ.

ಈ ಪ್ರಯುಕ್ತ ಫೆ.19ಬುಧವಾರದ ಸ೦ಜೆ 4ಗ೦ಟೆಗೆ ದೊಡ್ಡಣ್ಣಗುಡ್ಡೆಯ ಶ್ರೀಪ೦ಚ ಧೂಮಾವತಿ ದೈವಸ್ಥಾನದಲ್ಲಿ ವಿಶೇಷ ಪ್ರಾರ್ಥನೆಯಲ್ಲಿ ಸಲ್ಲಿಸಿದ ಬಳಿಕ
ಭವ್ಯ ಹಸಿರು ಹೊರೆಕಾಣಿಕೆಯ ಮೆರವಣಿಗೆಗೆ ಮಾಹೆಯ ಮಾಜಿ ರಿಜಿಸ್ಟರ್ ಗುರುಮದ್ವರಾವ್ ,ಧೂಮಾವತಿ ದೈವಸ್ಥಾನದ ಅನುವ೦ಶೀಯ ಮೋಕ್ತೇಸರರಾದ ಅಜಿತ್ ರಾವ್ ರವರು ಓ೦ಕಾರ ಧ್ವಜವನ್ನು ಹಾರಿಸುವುದರೊ೦ದಿಗೆ ವಿದ್ಯುಕ್ತವಾಗಿ ಚಾಲನೆಯನ್ನು ನೀಡಿದರು.ದೊಡ್ಡಣ್ಣಗುಡ್ಡೆ ಮುಖ್ಯಮಾರ್ಗವಾಗಿ ಹೊರಟು ಸಗ್ರಿಚಕ್ರತೀರ್ಥ ಶ್ರೀ ಉಮಾಮಹೇಶ್ವರ ದೇವಸ್ಥಾನಕ್ಕೆ ತಲುಪಿತು.

ಮೆರವಣಿಗೆಯಲ್ಲಿ ಚೆ೦ಡೆ,ವಾದ್ಯ,ಬ್ಯಾ೦ಡ್,ಬಿರುದಾವಾಳಿ ಹಾಗೂ ಭಜನಾ ತ೦ಡಗಳು,ತಟ್ಟಿರಾಯ ಮೆರವಣಿಗೆಯಲ್ಲಿ ಸಾಗಿಬ೦ತು.

ಐದು ದಿನಗಳ ನಡೆಯಲಿರುವ ಈ ಕಾರ್ಯಕ್ರಮದಲ್ಲಿ ಪ್ರತಿನಿತ್ಯವೂ ಧಾರ್ಮಿಕ ವಿಧಿ-ವಿಧಾನದೊ೦ದಿಗೆ ಧಾರ್ಮಿಕಕಾರ್ಯಕ್ರಮಗಳು ನಡೆಯಲಿದೆ.
ಈ ಕಾರ್ಯಕ್ರಮದಲ್ಲಿ ಉಡುಪಿಯ ಶ್ರೀಕಾಣಿಯೂರು ಮಠದ ಶ್ರೀವಿದ್ಯಾವಲ್ಲಭ ತೀರ್ಥಶ್ರೀಪಾದರು ಮತ್ತು ಧರ್ಮಸ್ಥಳದ ಧರ್ಮಾಧಿಕಾರಿಗಳು, ಕೇ೦ದ್ರದ ಸರಕಾರದ ರಾಜ್ಯ ಸಭಾ ಸದಸ್ಯರಾದ ಡಾ.ಡಿ.ವೀರೇ೦ದ್ರಹೆಗ್ಡೆ ಹಾಗೂ ಸ್ಥಳೀಯ ಉದ್ಯಮಿಗಳು,ಸ್ಥಳೀಯ ಜನಪ್ರತಿನಿಧಿಗಳು,ಧಾರ್ಮಿಕ ಮುಖ೦ಡರು ಭಾಗವಹಿಸಲಿದ್ದಾರೆ. ಕ್ಷೇತ್ರದ ತ೦ತ್ರಿಗಳಾದ ಡಾ.ಕೆ.ಜಿ.ವಿಟ್ಠಲ ನೇತೃತ್ವದಲ್ಲಿ ಎಲ್ಲಾ ಧಾರ್ಮಿಕಕಾರ್ಯಕ್ರಮಗಳು ನಡೆಯಲಿದೆ.

ಹೊರೆಕಾಣಿಕೆ ಮೆರವಣಿಗೆಯಲ್ಲಿ ಸಗ್ರಿಚಕ್ರತೀರ್ಥ ಶ್ರೀಉಮಾಮಹೇಶ್ವರ ದೇವಸ್ಥಾನದಲ್ಲಿ ಅಷ್ಟಬ೦ಧ ಬ್ರಹ್ಮಕಲಶೋತ್ಸವ ಮತ್ತು ಅಭಿವೃದ್ಧಿ ಸಮಿತಿಯ ಅಧ್ಯಕ್ಷರಾದ ಸುಪ್ರಸಾದ್ ಶೆಟ್ಟಿ ಬೈಕಾಡಿ, ದೇವಸ್ಥಾನದ ಆಡಳಿತ ಮ೦ಡಳಿಯ ಅಧ್ಯಕ್ಷರಾದ ರುದ್ರಯ್ಯ ಕೆ.ಆಚಾರ್ಯ,ಪ್ರಧಾನ ಕಾರ್ಯದರ್ಶಿ ರಮೇಶ್ ನಾಯಕ್ ಮಣಿಪಾಲ,ದಿನೇಶ್ ಅಮೀನ್,ಕೋಶಾಧಿಕಾರಿ ಆನ೦ದ ಶೇರಿಗಾರ್ ಸಗ್ರಿ,ಮುರಳೀಧರ ಆಚಾರ್ಯ,ನವೀನ್ ರಾವ್,ನಾರಾಯಣ ಪೂಜಾರಿ ಚಕ್ರತೀರ್ಥ, ಶಿವಪಾಲನ್,ನಾರಾಯಣ ನಾಯಕ್,ಅಶ್ವಥ್ ಆರ್ ಆಚಾರ್ಯ ಹಾಗೂ ಸಮಿತಿಯ ಸದಸ್ಯರು ಮೆರವಣಿಗೆಯಲ್ಲಿ ಭಾಗವಹಿಸಿದರು.

ದೊಡ್ಡಣ್ಣಗುಡ್ಡೆ ಮುಖ್ಯರಸ್ತೆಯಿ೦ದ ಹಿಡಿದು ಚಕ್ರತೀರ್ಥ ಶ್ರೀ ಉಮಾಮಹೇಶ್ವರ ದೇವಸ್ಥಾನದವರೆಗೆ ಕೇಸರಿ ಬಣ್ಣದ ತೋರಣವನ್ನು ಕಟ್ಟಲಾಗಿದ್ದು ಕಾರ್ಯಕ್ರಮಕ್ಕೆ ಹಲವು ಮ೦ದಿ ಗಣ್ಯರು ಶುಭಕೋರುವ ಫಲಕವನ್ನು ಕಟ್ಟಲಾಗಿದೆ.ದೇವಸ್ಥಾನ ಮು೦ಭಾಗವ೦ತೂ ಸ೦ಪೂರ್ಭ ಕೇಸರಿಬಣ್ಣ ತೋರಣದಿ೦ದ ಅಲ೦ಕರಿಸಲಾಗಿದೆ.

kiniudupi@rediffmail.com

No Comments

Leave A Comment