......ನಾಡಿನ ಸಮಸ್ತ ಜನತೆಗೆ,ನಮ್ಮ ಎಲ್ಲಾ ಜಾಹೀರಾತುದಾರರಿಗೆ,ಅಭಿಮಾನಿಗಳಿಗೆ ಕರಾವಳಿಕಿರಣ ಡಾಟ್ ಕಾ೦ ವತಿಯಿ೦ದ "ಯುಗಾದಿ" ಹಬ್ಬದ ಹಾರ್ದಿಕ ಶುಭಾಶಯಗಳು......Iran ನಲ್ಲಿ ಕೊನೆಗೂ ಆಡಳಿತ ಬದಲಾವಣೆ! ಅಮೆರಿಕ, ಇಸ್ರೇಲ್ ಬಯಸಿದ್ದೇ ಒಂದು, ಆಗಿದ್ದು ಇನ್ನೊಂದು!
ವಿಶ್ವ ಗೀತಾ ರಸಪ್ರಶ್ನೆ ಸ್ಪರ್ಧೆ: ವಿನಯ ಕುಮಾರ್- ಪಯೋಜ ಪ್ರಥಮ
ಉಡುಪಿ, ಫೆ.13: ಉಡುಪಿ ಶ್ರೀಕೃಷ್ಣ ಮಠ ಪರ್ಯಾಯ ಪುತ್ತಿಗೆ ಮಠದ ವತಿಯಿಂದ ಗೀತೋತ್ಸವದ ಅಂಗವಾಗಿ ಏರ್ಪಡಿಸಲಾದ ವಿಶ್ವ ಗೀತಾ ರಸಪ್ರಶ್ನೆ ಸ್ಪರ್ಧೆಯ ಸೀನಿಯರ್ ವಿಭಾಗದಲ್ಲಿ ವಿನಯ ಕುಮಾರ್ ಸುರತ್ಕಲ್ ಹಾಗೂ ಜೂನಿಯರ್ ವಿಭಾಗದಲ್ಲಿ ಪಯೋಜ ಕಂಬಲೂರು ಪ್ರಥಮ ಬಹುಮಾನ ಗೆದ್ದುಕೊಂಡಿದ್ದಾರೆ.
ಸೀನಿಯರ್ ವಿಭಾಗದಲ್ಲಿ ಸುಮಿತ್ ಪ್ರಹ್ಲಾದ್ ಚನ್ನಪಟ್ಟಣ ದ್ವಿತೀಯ, ಅನಿಲ್ ಕುಮಾರ್ ಚಿಂತಾಮಣಿ ತೃತೀಯ, ಸೌಮ್ಯ ಸಿ.ಎಸ್. ಮಂಗಳೂರು ಹಾಗೂ ಲಕ್ಷ್ಮೀ ಸತೀಶ್ ಬೆಂಗಳೂರು ನಾಲ್ಕನೇ ಸ್ಥಾನ ಗೆದ್ದುಕೊಂಡರು. ಜೂನಿಯರ್ ವಿಭಾಗದಲ್ಲಿ ಮಾಯಾಂಕ್ ಭಟ್ ಬೆಂಗಳೂರು ದ್ವೀತಿಯ, ಕುಮಾರಿ ಅವ ತಮಂಗ್ ಪಶ್ಚಿಮ ಬಂಗಾಳ ತೃತೀಯ ಮತ್ತು ಶ್ರೀಪಾಲ್ ಹೊಸಬೆಟ್ಟು ಮಂಗಳೂರು ನಾಲ್ಕನೇ ಸ್ಥಾನ ಪಡೆದುಕೊಂಡರು.
ಫೆ.21ರಂದು ರಾಜಾಂಗಣದಲ್ಲಿ ನಡೆಯುವ ಸಮಾರಂಭದಲ್ಲಿ ಆಯ್ದ ವಿಜೇತರಿಗೆ ಪಾರಿತೋಷಕ ಮತ್ತು ನಗದು ಬಹುಮಾನ ನೀಡಲಾಗುವುದು. ಪ್ರಥಮ ದ್ವಿತೀಯ ತೃತೀಯ ಬಹುಮಾನ ವಿಜೇತರು ಕ್ರಮವಾಗಿ 1ಲಕ್ಷ ರೂ.75ಸಾವಿರ ರೂ., 50ಸಾವಿರ ರೂ. ನೀಡಲಾಗುವುದು. ಆಯ್ಕೆಗೊಂಡ ಎಲ್ಲರಿಗೂ ಸಮಾಧಾನಕರ ಬಹುಮಾನಗಳನ್ನು ನೀಡಲಾಗುವುದು ಎಂದು ಪ್ರಕಟಣೆ ತಿಳಿಸಿದೆ.