ನವೆ೦ಬರ್ 25ರಿ೦ದ ಉಡುಪಿಯ ಕಲ್ಯಾಣಪುರ ಶ್ರೀವೆ೦ಕಟರಮಣ ದೇವಸ್ಥಾನದಲ್ಲಿ ವಾಡಿಕೆಯ೦ತೆ ಜರಗಲಿರುವ ಭಜನಾ ಸಪ್ತಾಹ ಮಹೋತ್ಸವವು ಆರ೦ಭಗೊ೦ಡಿದ್ದು ,ಇದು 97ನೇ ವರ್ಷದ ಭಜನಾ ಸಪ್ತಾಹ ಮಹೋತ್ಸವವಾಗಿರುತ್ತದೆ........ಡಿಸೆಂಬರ್ 1 ರಿಂದ 19ರವರೆಗೆ ಸಂಸತ್ತಿನ ಚಳಿಗಾಲದ ಅಧಿವೇಶನ

ಭೋಪಾಲ್‌: ಪತ್ನಿಗೆ ಗುಂಡಿಕ್ಕಿ ಹತ್ಯೆ ಮಾಡಿ, ತಾನೂ ಆತ್ಮಹತ್ಯೆಗೆ ಶರಣಾದ ಸಿಆರ್‌ಪಿಎಫ್ ಯೋಧ

ಭೋಪಾಲ್: ಭೋಪಾಲ್‌ನ ಮಿಸ್ರೋಡ್ ಪ್ರದೇಶದಲ್ಲಿ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದ ಕೇಂದ್ರ ಮೀಸಲು ಪೊಲೀಸ್ ಪಡೆ(CRPF)ಯ ಯೋಧನೊಬ್ಬ ಬುಧವಾರ ಮಧ್ಯರಾತ್ರಿ ತನ್ನ ಪತ್ನಿಯನ್ನು ಗುಂಡಿಕ್ಕಿ ಕೊಂದು, ಬಳಿಕ ಅದೇ ರೈಫಲ್ ನಿಂದ ತಾನೂ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಪೊಲೀಸರು ಗುರುವಾರ ತಿಳಿಸಿದ್ದಾರೆ.

ಭೋಪಾಲ್ ಪೊಲೀಸ್ ನಿಯಂತ್ರಣ ಕೊಠಡಿ ಮತ್ತು ಡಯಲ್ 100 ತುರ್ತು ಸೇವೆಗೆ ಇಂದು ಬೆಳಗಿನ ಜಾವ 1:30 ರ ಸುಮಾರಿಗೆ ಕರೆ ಬಂದಿದೆ. ತನ್ನನ್ನು ತಾನು ಸಿಆರ್‌ಪಿಎಫ್ ಯೋಧ ರವಿಕಾಂತ್ ವರ್ಮಾ ಎಂದು ಹೇಳಿಕೊಂಡು ಕರೆ ಮಾಡಿದ್ದ ವ್ಯಕ್ತಿ, ತನ್ನ ಪತ್ನಿ ರೇಣು ವರ್ಮಾ ಅವರನ್ನು ಗುಂಡಿಕ್ಕಿ ಕೊಂದಿರುವುದಾಗಿ ಪೊಲೀಸರಿಗೆ ಮಾಹಿತಿ ನೀಡಿದ್ದಾನೆ.

ಮಿಸ್ರೋಡ್ ಪೊಲೀಸ್ ಠಾಣೆಯ ತಂಡ ತಕ್ಷಣ ಮನೆಗೆ ಧಾವಿಸಿದೆ. ಅಲ್ಲಿ ದಂಪತಿಗಳು ತಮ್ಮ ಇಬ್ಬರು ಮಕ್ಕಳಾದ ಆರು ವರ್ಷದ ಮಗ ಮತ್ತು ಎರಡೂವರೆ ವರ್ಷದ ಮಗಳೊಂದಿಗೆ ವಾಸಿಸುತ್ತಿದ್ದರು.

ಮನೆಗೆ ಆಗಮಿಸಿದ ನಂತರ, ಅಧಿಕಾರಿಗಳು ಒಂದು ಕೋಣೆಯಲ್ಲಿ ಇಬ್ಬರು ಮಕ್ಕಳು ಅಳುತ್ತಿರುವುದನ್ನು ಕಂಡರು. ಆದರೆ 35 ವರ್ಷದ ರವಿಕಾಂತ್ ವರ್ಮಾ ಮತ್ತು 32 ವರ್ಷದ ರೇಣು ವರ್ಮಾ ಅವರ ರಕ್ತಸಿಕ್ತ ಶವಗಳು ಇನ್ನೊಂದು ಕೋಣೆಯಲ್ಲಿ ಬಿದ್ದಿದ್ದವು. ಶವಗಳ ಬಳಿ INSAS ರೈಫಲ್ ಪತ್ತೆಯಾಗಿದೆ.

ಪ್ರಾಥಮಿಕ ತನಿಖೆಯ ಪ್ರಕಾರ ಸಿಆರ್‌ಪಿಎಫ್ ಯೋಧ ಮೊದಲು ತನ್ನ ಹೆಂಡತಿಯನ್ನು ಗುಂಡಿಕ್ಕೆ ಹತ್ಯೆ ಮಾಡಿದ್ದಾರೆ. ನಂತರ ತಾನೂ ಶೂಟ್ ಮಾಡಿಕೊಂಡು ಸಾವಿಗೆ ಶರಣಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಎರಡೂ ಶವಗಳನ್ನು ಭೋಪಾಲ್‌ನ ಏಮ್ಸ್‌ಗೆ ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ.

ಗುಂಡಿನ ಸದ್ದು ಕೇಳಿ ಮನೆಗೆ ಧಾವಿಸಿದ ನೆರೆಹೊರೆಯವರು, ದಂಪತಿಗಳು ಆಗಾಗ್ಗೆ ಜೋರಾಗಿ ಜಗಳವಾಡುತ್ತಿದ್ದರು ಎಂದು ಪೊಲೀಸರಿಗೆ ತಿಳಿಸಿದ್ದಾರೆ. ಆದಾಗ್ಯೂ, ಈ ಮಾರಕ ಘಟನೆಗೆ ಕಾರಣವೇನು ಎಂಬುದು ಇನ್ನೂ ಸ್ಪಷ್ಟವಾಗಿಲ್ಲ.

No Comments

Leave A Comment