ನವೆ೦ಬರ್ 25ರಿ೦ದ ಉಡುಪಿಯ ಕಲ್ಯಾಣಪುರ ಶ್ರೀವೆ೦ಕಟರಮಣ ದೇವಸ್ಥಾನದಲ್ಲಿ ವಾಡಿಕೆಯ೦ತೆ ಜರಗಲಿರುವ ಭಜನಾ ಸಪ್ತಾಹ ಮಹೋತ್ಸವವು ಆರ೦ಭಗೊ೦ಡಿದ್ದು ,ಇದು 97ನೇ ವರ್ಷದ ಭಜನಾ ಸಪ್ತಾಹ ಮಹೋತ್ಸವವಾಗಿರುತ್ತದೆ........ಡಿಸೆಂಬರ್ 1 ರಿಂದ 19ರವರೆಗೆ ಸಂಸತ್ತಿನ ಚಳಿಗಾಲದ ಅಧಿವೇಶನ
ಉಡುಪಿ ನಗರಸಭೆಯ ಮಾಸಿಗೆ ಸಭೆಯಲ್ಲಿ ಪ್ರಪ್ರಥಮ ಬಾರಿಗೆ ಭಾಗವಹಿಸಿ ತಮ್ಮ ಮಾತಿನ ಚಾಟಿಯಿ೦ದ ಆಡಳಿತ ಪಕ್ಷದವರನ್ನು ಬಾಯಿ ಮುಚ್ಚಿಸಿದ- ಸುರೇಶ್ ಶೆಟ್ಟಿ ಬನ್ನಂಜೆ
ಉಡುಪಿ ನಗರಸಭಾ ಸದಸ್ಯರಾಗಿ ರಾಜ್ಯ ಕಾಂಗ್ರೆಸ್ ಸರಕಾರದಿಂದ ಉಡುಪಿ ನಗರಸಭೆಗೆ ನಾಮ ನಿರ್ದೇಶನ ಸದಸ್ಯರಾಗಿರುವ ಸುರೇಶ್ ಶೆಟ್ಟಿ ಬನ್ನಂಜೆ ಸೋಮವಾರದ೦ದು ಉಡುಪಿ ನಗರಸಭೆಯ ಮಾಸಿಕ ಸಭೆಯಲ್ಲಿ ಭಾಗವಹಿಸಿ ಉಡುಪಿ ನಗರಸಭಾ ವ್ಯಾಪ್ತಿಯ ಕೆಲವು ಸಮಸ್ಯೆಗಳ ಬಗ್ಗೆ ಸಭೆಯಲ್ಲಿ ಪ್ರಶ್ನಿಸಿ ಅದಕ್ಕೆ ಪರಿಹಾರವನ್ನು ಕೊಡುವಂತೆ ನಗರ ಸಭೆ ಆಡಳಿತವನ್ನು ಪ್ರಶ್ನೆಸಿರೋದು ಮಾತ್ರವಲ್ಲದೆ ಅದಕ್ಕೆ ವಿರೋಧ ವ್ಯಕ್ತಪಡಿಸಿದ ಬಿಜೆಪಿಯ ಸದಸ್ಯರನ್ನು ಕೂಡ ಕ್ಯಾರೆ ಎನ್ನದೆ ಪ್ರಶ್ನೆಗಳ ಸುರಿ ಮಳೆಯನ್ನು ಸುರಿದು ಆಡಳಿತ ಪಕ್ಷದ ಮುಖಂಡರನ್ನು ಕಂಗಾಲು ಮಾಡಿದರಲ್ಲದೆ ಅಜ್ಜರ್ ಕಾಡು ವ್ಯಾಪ್ತಿಯಲ್ಲಿಇರುವ ಸ೦ತಕ್ರಸ್ತ ಚರ್ಚನ್ನು ಪ್ರಾರ್ಥನಾ ಮಂದಿರ ಎಂದು ಪರಿಗಣಿಸದೆ ಅವರ ಜಾಗವನ್ನು ಅಕ್ರಮಣ ಮಾಡಿದ್ದಾರೆ.
ಆ ಜಾಗವನ್ನು ನಗರಸಭೆಯ ವಶಪಡಿಸಿಕೊಂಡು ಅಲ್ಲಿನ ಕಟ್ಟಡವನ್ನು ನೆಲಸಮ ಮಾಡಬೇಕೆಂದು ಬಿಜೆಪಿಯ ಸದಸ್ಯರೊಬ್ಬರು ಸಭೆ ಯಲ್ಲಿ ಒತ್ತಾಯಿಸಿದ್ದು ಇದಕ್ಕೆ ಶಾಸಕರು ಹಾಗೂ ಬಿಜೆಪಿಯಎಲ್ಲ ಸದಸ್ಯರು ಬೆಂಬಲ ಸೂಚಿಸಿದ್ದು ಆ ಸಂದರ್ಭದಲ್ಲಿ ಎದ್ದು ನಿಂತು ನಗರ ಸಭೆಯ ವಿಪಕ್ಷ ನಾಯಕನ ಅನುಪಸ್ಥಿತಿಯಲ್ಲಿ ಅದರ ಬಗ್ಗೆ ಸಂಪೂರ್ಣವಾಗಿ ವಿರೋಧ ವ್ಯಕ್ತಪಡಿಸಿ ಸುರೇಶ್ ಶೆಟ್ಟಿ ಬನ್ನಂಜೆ ಸಭೆಯಲ್ಲಿ ಅಬ್ಬರಿಸಿದರು.