ಉಡುಪಿ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ಜನವರಿ 29ರಿ೦ದ 125 ದಿನಗಳಕಾಲ ನಿರ೦ತರ ಅಹೋರಾತ್ರೆ ಭಜನಾ ಕಾರ್ಯಕ್ರಮವು ಜರಗಲಿದೆ. ಭಜನಾ ಕಾರ್ಯಕ್ರಮವನ್ನು ಕಾಶೀಮಠ ಶ್ರೀಶ್ರೀಸ೦ಯಮೀ೦ದ್ರ ತೀರ್ಥಶ್ರೀಪಾದರು ದೀಪಪ್ರಜ್ವಲನೆ ಮಾಡುವುದರೊ೦ದಿಗೆ ಭಜನಾ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ.
ಉಡುಪಿ: ನಗರದಲ್ಲಿ ವೈದ್ಯ ವಿದ್ಯಾರ್ಥಿಗೆ ಯುಕೆಯಲ್ಲಿ ಸೀಟು ಕೊಡಿಸುವುದಾಗಿ ನಂಬಿಸಿ ವಂಚನೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿ ಮೂವರನ್ನು ಪೊಲೀಸರು ಬಂಧಿಸಿದ್ದಾರೆ ಎಂದು ತಿಳಿದು ಬಂದಿದೆ.
ಬಂಧಿತ ಆರೋಪಿಗಳು ಸುಮನ್ ಎಸ್ (24), ಸುಹಾನ್ ಖಾನ್(22) ಮತ್ತು ಮೊಹಮ್ಮದ್ ಮಹಾಝ್ ಎಂದು ಗುರುತಿಸಲಾಗಿದೆ.
ವೈದ್ಯ ವಿದ್ಯಾರ್ಥಿ ಹೆಚ್ಚಿನ M.PH ವಿಧ್ಯಾಭ್ಯಾಸನ್ನು ಯುಕೆ ಯಲ್ಲಿ ಮಾಡಲು ಬಯಸಿದ್ದರು. ಇವರು ದುಬೈಗೆ ತೆರಳಿ ಅಫ್ತಾಬ್ ನನ್ನು ಭೇಟಿ ಮಾಡಿದ್ದು, ನಂತರ UK ಯಲ್ಲಿ M.PH ವಿಧ್ಯಾಭ್ಯಾಸಕ್ಕಾಗಿ ಸೀಟಿಗೆ 18 ಲಕ್ಷಕ್ಕೆ ಇಬ್ಬರ ನಡುವೆ ಒಪ್ಪಂದವಾಗಿತ್ತು.ಅಫ್ತಾಬ್ ವಿದ್ಯಾರ್ಥಿಗೆ ಸೀಟನ್ನು ಖಾಯಂ ಮಾಡಲು ಮೊದಲಿಗೆ 8.5 ಲಕ್ಷವನ್ನು ನೀಡುವಂತೆ ಕೇಳಿದ್ದ. ಅದನ್ನು ವಿದ್ಯಾರ್ಥಿ ನೀಡಿದ್ದ. ನಂತರ ಆರೋಪಿಗಳು ವಿದ್ಯಾರ್ಥಿಯ ಕರೆಯನ್ನು ಸ್ವೀಕರಿಸದೇ ಯುಕೆಯಲ್ಲಿ M.PH ವಿಧ್ಯಾಭ್ಯಾಸಕ್ಕೆ ಸೀಟನ್ನೂ ಕೊಡಿಸದೇ ವಂಚಿಸಿದ್ದಾಗಿ ಉಡುಪಿ ನಗರ ಠಾಣೆಯಲ್ಲಿ ದೂರು ದಾಖಲಾಗಿತ್ತು.