ಜನವರಿ 18ರಿ೦ದ ಶೀರೂರು ಮಠಾಧೀಶರಾದ ಶ್ರೀವೇದವರ್ಧನ ಶ್ರೀಪಾದರ ಪ್ರಥಮ ಪರ್ಯಾಯ ಆರ೦ಭ-ಅದ್ದೂರಿಯ ಧಾನ್ಯ, ಶಿಖರ ಮುಹೂರ್ತ ಸ೦ಪನ್ನ…..ಉಡುಪಿ ಮೋಟಾರ್ಸ್ ನಲ್ಲಿ ಯಮಹಾ ಕಂಪೆನಿಯ ನೂತನ ರೆಟ್ರೋ ಮೊಡೆಲ್ ಬೈಕ್ ‘XSR 155 ಮಾರುಕಟ್ಟೆಗೆ ಬಿಡುಗಡೆ
ಉಡುಪಿ: ಉದ್ಯಾವರ ಬಳಿ ಭೀಕರ ರಸ್ತೆ ಅಪಘಾತ ಬೆಂಕಿಯಿಂದ ಹೊತ್ತಿ ಉರಿದ ಲಾರಿ -ಬೈಕ್ ಸವಾರ ಮೃತ್ಯು
ಉಡುಪಿ: ಉದ್ಯಾವರ ಗುಡ್ಡೆಅಂಗಡಿ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಇಂದು ನಸುಕಿನ ವೇಳೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಈಚರ್ ಲಾರಿ ಹೊತ್ತಿ ಉರಿದಿದ್ದು ಬೈಕ್ ಸವಾರ ಮೃತಪಟ್ಟ ವರದಿಯಾಗಿದೆ.
ಮೃತರನ್ನು ಬೈಕ್ ಸವಾರ ಕೊರಂಗ್ರಪಾಡಿ ನಿವಾಸಿ ಅವಿನಾಶ್ ಆಚಾರ್ಯ( 19) ಎಂದು ಗುರುತಿಸಲಾಗಿದೆ
ಗುಜರಾತ್ ಕಡೆಯಿಂದ ಕೇರಳ ಕಡೆಗೆ ಬರುತ್ತಿದ್ದ ಈಚರ್ ಲಾರಿ ಎದುರಿನಲ್ಲಿ ಹೋಗುತ್ತಿದ್ದ ಬೈಕಿಗೆ ಡಿಕ್ಕಿ ಹೊಡೆಯಿತ್ತೆನ್ನಲಾಗಿದೆ. ಇದರಿಂದ ರಸ್ತೆಗೆ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದ ವಾರ ಅವಿನಾಶ್ ಆಸ್ಪತ್ರೆಗೆ ಸಾಗಿಸುವ ದಾರಿ ಮಧ್ಯೆ ಮೃತಪಟ್ಟರು ಎಂದು ತಿಳಿದುಬಂದಿದೆ.
ಇದೇ ವೇಳೆ ಈ ಲಾರಿಯು ಬೈಕನ್ನು ರಸ್ತೆಯಲ್ಲಿ ಎಳೆದುಕೊಂಡು ಹೋದ ಪರಿಣಾಮ ಬೆಂಕಿ ಕಾಣಿಸಿಕೊಂಡಿತ್ತು. ಈ ಬೆಂಕಿ ಲಾರಿಗೆ ತಗಲಿದ್ದು ಬಳಿಕ ಬೆಂಕಿಯ ಕೆನ್ನಾಲಿಗೆ ಇಡೀ ಲಾರಿ ಮತ್ತು ಚಕ್ರ ವಾಹನವನ್ನು ಸುಟ್ಟು ಭಸ್ಮ ಮಾಡಿದೆ. ಸ್ಥಳಕ್ಕೆ ಉಡುಪಿ ಸಂಚಾರ ಪೋಲೀಸರು ಆಗಮಿಸಿ ಪರಿಶೀಲ ನಡೆಸಿದ್ದಾರೆ.