ಉಡುಪಿ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ಜನವರಿ 29ರಿ೦ದ 125 ದಿನಗಳಕಾಲ ನಿರ೦ತರ ಅಹೋರಾತ್ರೆ ಭಜನಾ ಕಾರ್ಯಕ್ರಮವು ಜರಗಲಿದೆ. ಭಜನಾ ಕಾರ್ಯಕ್ರಮವನ್ನು ಕಾಶೀಮಠ ಶ್ರೀಶ್ರೀಸ೦ಯಮೀ೦ದ್ರ ತೀರ್ಥಶ್ರೀಪಾದರು ದೀಪಪ್ರಜ್ವಲನೆ ಮಾಡುವುದರೊ೦ದಿಗೆ ಭಜನಾ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ.
ಮಣಿಪಾಲ: ವೇಶ್ಯಾವಾಟಿಕೆ ನಡೆಸುತ್ತಿದ್ದ ಅರ್ಪಾಟ್‌ಮೆಂಟ್‌ಗೆ ಖಾಕಿ ರೇಡ್ : ಮಹಿಳೆ ಸಹಿತ ಇಬ್ಬರು ಅರೆಸ್ಟ್
ಮಣಿಪಾಲ: ವೇಶ್ಯಾವಾಟಿಕೆ ನಡೆಸುತ್ತಿರುವ ಬಗ್ಗೆ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಮಣಿಪಾಲ ಪೊಲೀಸರು ಮಹಿಳೆ ಸಹಿತ ಇಬ್ಬರನ್ನು ವಶಕ್ಕೆ ಪಡೆದಿದ್ದಾರೆ.
ಶನಿವಾರ ಪೆರಂಪಳ್ಳಿಯ ಅರ್ಪಾಟ್‌ಮೆಂಟ್‌ನಲ್ಲಿ ವೇಶ್ಯಾವಾಟಿಕೆ ನಡೆಸುತ್ತಿರುವ ಮಾಹಿತಿನ್ವಯ ದಾಳಿ ನಡೆಸಿದ ಮಣಿಪಾಲ ಠಾಣೆಯ ಪಿ.ಐ ದೇವರಾಜ್ ಟಿ.ವಿ ನೇತೃತ್ವದಲ್ಲಿ ಪಿಎಸ್‌ಐ ಅನೀಲ್, ಎಎಸ್‌ಐ ವಿವೇಕ್ ಹಾಗೂ ಸಿಬ್ಬಂದಿಗಳಾದ ವಿದ್ಯಾ, ಇಮ್ರಾನ್, ಪ್ರಸನ್, ಮಂಜುನಾಥ ರವರನ್ನೊಳಗೊಂಡ ತಂಡ ದಾಳಿ ಮಾಡಿ ರಘುನಂದನ್ (40) ಕೊಪ್ಪ ಚಿಕ್ಕಮಗಳೂರು ಜಿಲ್ಲೆ ಹಾಗೂ ಅಮೀನಾ ಬೇಗಂ (55) ಹರಿಹರ, ದಾವರಣಗೆರೆ ಜಿಲ್ಲೆ ಇವರನ್ನು ಬಂಧಿಸಿದ್ದಾರೆ.
ಆರೋಪಿಗಳು ವೇಶ್ಯಾವಾಟಿಕೆ ವ್ಯವಹಾರ ನಡೆಸಲು ಬಳಸಿಕೊಂಡಿದ್ದ ಬೆಂಗಳೂರು ಮೂಲದ ಓರ್ವ ಮಹಿಳೆಯನ್ನು ರಕ್ಷಿಸಲಾಯಿತು. ಪ್ರಕರಣದ ಪ್ರಮುಖ ಆರೋಪಿ ಹಾಸನ ಜಿಲ್ಲೆಯ ಹಿರೀಸಾವೆ ಗ್ರಾಮದ ರವೀಶ್ ಎಂಬ ಆರೋಪಿ ಬಂಧನಕ್ಕೆ ಮಣಿಪಾಲ ಠಾಣಾ ಪಿ.ಐ ದೇವರಾಜ್ ಟಿ ವಿ ನೇತೃತ್ವದ ತಂಡ ತನಿಖೆ ಮುಂದುವರೆಸಿದೆ.
ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.