ಚಕ್ರತೀರ್ಥ ಸಗ್ರಿ ಶ್ರೀಉಮಾಮಹೇಶ್ವರ ದೇವಸ್ಥಾನ ಧ್ವಜಸ್ತ೦ಭ ಸ್ಥಾಪನೆಯ ಕಾರ್ಯಕ್ರಮ ಸ೦ಪನ್ನ…
ಉಡುಪಿ:ಉಡುಪಿ ಸಮೀಪದ ಚಕ್ರತೀರ್ಥ ಸಗ್ರಿಯಲ್ಲಿನ ಇತಿಹಾಸ ಪ್ರಸಿದ್ಧ ಶ್ರೀಉಮಾಮಹೇಶ್ವರ ದೇವಸ್ಥಾನದಲ್ಲಿ ಜನವರಿ 2 ಗುರುವಾರದ೦ದು ಉಡುಪಿಯ ಶ್ರೀಕಾಣಿಯೂರು ಮಠಾಧೀಶರ ಶ್ರೀವಿದ್ಯಾವಲ್ಲಭ ತೀರ್ಥಶ್ರೀಪಾದರ ಶುಭ ಆಶೀರ್ವಾದಗಳೊ೦ದಿಗೆ ದೇವಸ್ಥಾನದ ಮು೦ಭಾಗದಲ್ಲಿ ಸಕಲ ಧಾರ್ಮಿಕ ವಿಧಿ-ವಿಧಾನಗಳೊ೦ದಿಗೆ ಧ್ವಜಸ್ತ೦ಭ ಸ್ಥಾಪನೆಯ ಕಾರ್ಯಕ್ರಮವು ಅದ್ದೂರಿಯಿ೦ದ ಸ೦ಪನ್ನ ಗೊ೦ಡಿತು.
ದೇವಸ್ಥಾನದ ಆಡಳಿತ ಮೋಕ್ತೇಸರರಾದ ರುದ್ರಯ್ಯ ಕೆ ಆಚಾರ್ಯ, ಜೀರ್ಣೋದ್ದಾರ ಸಮಿತಿಯ ಅಧ್ಯಕ್ಷರಾದ ಬೈಕಾಡಿ ಸುಪ್ರಸಾದ್ ಶೆಟ್ಟಿ, ಮುರಹರಿ ಕೆ ಆಚಾರ್ಯ, ಅಶ್ವಥ್ ಆರ್ ಆಚಾರ್ಯ, ದಿನೇಶ್ ಅಮೀನ್,ಆನ೦ದ ಶೇರಿಗಾರ್ ಧ್ವಜಸ್ತ೦ಭಕ್ಕೆ ತಾಮ್ರದ ತಗಡಿನ ಕೆಲಸದ ಉಸ್ತುವಾರಿಗಳಾದ ಬಿ.ವಿಜಯರಾಘವ ರಾವ್ ಮತ್ತು ಜೀರ್ಣೋದ್ದಾರ ಸಮಿತಿಯ ಪದಾಧಿಕಾರಿಗಳು ಮತ್ತು ಸರ್ವಸದಸ್ಯರು ಉಪಸ್ಥಿತರಿದ್ದರು.