ಜನವರಿ 16ರ ಮಧ್ಯರಾತ್ರೆಯಿ೦ದ 17ರ ಮಧ್ಯರಾತ್ರೆಯವರೆಗೆ ಜಿಲ್ಲೆಯಲ್ಲಿ ಮಧ್ಯ ಮಾರಾಟ ಬ೦ದ್ ಮಾಡುವ೦ತೆ ಶೀರೂರುಮಠದ ಭಕ್ತರು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಎಸ್ಪಿ,ಮತ್ತು ಅಬಕಾರಿ ಜಿಲ್ಲಾಧಿಕಾರಿಯವರಲ್ಲಿ ವಿನ೦ತಿಸಿಕೊ೦ಡಿದ್ದಾರೆ...
ಧರ್ಮಾಧಾರಿತ ರಾಜಕಾರಣ: ವಿಶ್ವಾರ್ಪಣಂ ಕಾರ್ಯಕ್ರಮದಲ್ಲಿ ಪಲಿಮಾರುಶ್ರೀ ಆಶಯ (45pic)
ಉಡುಪಿ, ಜ.4:ಭಾರತದಲ್ಲಿ ಸನಾತನ ಧರ್ಮದ ತಳಹದಿಯಲ್ಲಿ ರಾಜಕೀಯ ನಡೆಯಬೇಕು ಎಂದು ಪಲಿಮಾರು ಹಿರಿಯ ಯತಿ ಶ್ರೀ ವಿದ್ಯಾಧೀಶತೀರ್ಥ ಶ್ರೀಪಾದರು ಆಶಯ ವ್ಯಕ್ತಪಡಿಸಿದರು.
ಅದಮಾರು ಮಠ ಆಶ್ರಯದ ಶ್ರೀಕೃಷ್ಣ ಸೇವಾ ಬಳಗ ನೇತೃತ್ವದಲ್ಲಿ ವಿಶ್ವಾರ್ಪಣಂ ಕಾರ್ಯಕ್ರಮದಂಗವಾಗಿ ಶನಿವಾರ ಪೂರ್ಣಪ್ರಜ್ಞ ಸಭಾಂಗಣದಲ್ಲಿ ನಡೆದ ಗುರುವಂದನ ಕಾರ್ಯಕ್ರಮದಲ್ಲಿ ಅದಮಾರು ಶ್ರೀ ವಿಶ್ವಪ್ರಿಯತೀರ್ಥ ಶ್ರೀಪಾದರಿಂದ ಸನ್ಮಾನ ಸ್ವೀಕರಿಸಿ ಅನುಗ್ರಹ ಸಂದೇಶ ನೀಡಿದರು.
ಓಟಿಗಾಗಿ ರಾಜಕಾರಣ ಮಾಡುವುದರಿಂದ ದೇಶ ಛಿದ್ರವಾಗುತ್ತದೆ. ಕಷ್ಟಪಟ್ಟು ಸಂಪಾದಿಸುವಂತೆ ಶ್ರೀಕೃಷ್ಣ ಗೀತೆಯಲ್ಲಿ ಶ್ರಮಜೀವನದ ಬಗ್ಗೆ ಉಲ್ಲೇಖಿಸಿದ್ದು, ಉಚಿತ ಯೋಜನೆಗಳು ದೇಶದ ಆರ್ಥಿಕತೆ ಮತ್ತು ಅಭಿವೃದ್ಧಿಗೆ ಅಪಾಯಕಾರಿ ಎಂದರು.
ಭಾರತಾಂಬೆಗೆ ಕಿರೀಟ…
ಸನಾತನ ಧರ್ಮವನ್ನು ಎತ್ತಿಹಿಡಿಯುವ ಕೆಲಸವಾಗಬೇಕು. ತ್ಯಾಗ, ಅಹಿಂಸೆ, ಔದಾರ್ಯದಿಂದಾಗಿ ನಾವು ಕಳೆದುಕೊಂಡಿದ್ದೇ ಹೆಚ್ಚು. ಧರ್ಮದ ಅವರಿವಿರುವ ರಾಜಕಾರಣಿಗಳಿಂದಾಗಿ ಕಳೆದ 7 ದಶಕಗಳಿಂದ ಕಳೆದುಕೊಂಡಿದ್ದ ಕಾಶ್ಮೀರವನ್ನು ಮರಳಿ ಪಡೆಯುವಂತಾಗಿದ್ದು, ಭಾರತಾಂಬೆ ಸುವರ್ಣ ಕಿರೀಟದಿಂದ ಶೋಭಿಸುತ್ತಿದ್ದಾಳೆ. ಇನ್ನುಳಿದ ಪಿಓಕೆ ಶೀಘ್ರ ಭಾರತದ ವಶವಾಗಬೇಕು. ಅದಕ್ಕಾಗಿ ಮೋದಿ, ಯೋಗಿಯಂಥವರು ಆಡಳಿತ ವಹಿಸಿಕೊಳ್ಳಬೇಕು ಎಂದು ಪಲಿಮಾರು ಶ್ರೀಗಳು ಹೇಳಿದರು.
ಪ್ರಶ್ನಿಸುವ ಗುಣ ಬೇಕು…
ಆಶೀರ್ವಚನ ನೀಡಿದ ಶ್ರೀ ವಿಶ್ವಪ್ರಿಯತೀರ್ಥ ಶ್ರೀಪಾದರು, ಭಾರತ ವಿಶ್ವಗುರುವಾಗಲು ಗುರುಗಳ ಅನುಸರಣೆ ಅಗತ್ಯ. ಮಕ್ಕಳಲ್ಲಿ ನಮ್ಮ ಸಂಸ್ಕೃತಿ ಬಿತ್ತಿ, ಅವರಲ್ಲಿ ಪ್ರಶ್ನಿಸುವ ಗುಣ ಮೇಳೈಸಬೇಕು.ಅಹಿಂಸೆ ಅತಿಯಾದರೆ ಅಪಾಯ. ನಮ್ಮ ಬದುಕು, ಗಳಿಕೆಯ ಒಂದಂಶ ದೇಶ ಹಿತಕ್ಕಾಗಿರಬೇಕು ಎಂದರು.
ಯುಗಾದಿಯಿಂದ ಭಾರತೀಯ ಹೊಸ ವರ್ಷಾಚರಣೆ ಶುರುವಾಗಬೇಕು. ಗಾಂಧಿಯನ್ನು ಪಿತಾಮಹ ಎಂದು ಒಪ್ಪಲಾಗದು ಎಂದರು.ತಮ್ಮ ಹಾಗೂ ಪಲಿಮಾರು ಶ್ರೀಗಳ ಆಶ್ರಮ ದಿನಗಳನ್ನು ಮೆಲುಕು ಹಾಕಿದರು.
ಅದಮಾರು ಕಿರಿಯ ಶ್ರೀ ಈಶಪ್ರಿಯತೀರ್ಥ ಶ್ರೀಪಾದರು ಹಾಗೂ ಪಲಿಮಾರು ಕಿರಿಯ ಶ್ರೀ ವಿದ್ಯಾರಾಜೇಶ್ವರತೀರ್ಥ ಶ್ರೀಪಾದರು ಮಾತನಾಡಿದರು.
ಸನ್ಮಾನ…
ಈ ಸಂದರ್ಭದಲ್ಲಿ ಯಕ್ಷಗಾನ ಕಲಾವಿದ ಶ್ರೀಧರ ಮಹಾಬಲೇಶ್ವರ ಷಡಕ್ಷರಿ ಕುಮಟಾ ಅವರಿಗೆ ನರಹರಿತೀರ್ಥ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಓಂಪ್ರಕಾಶ ಭಟ್ ಸನ್ಮಾನಪತ್ರ ವಾಚಿಸಿದರು.
ಉಡುಪಿ ಆದರ್ಶ ಆಸ್ಪತ್ರೆ ಆಡಳಿತ ನಿರ್ದೇಶಕ ಡಾ.ಜಿ.ಎಸ್.ಚಂದ್ರಶೇಖರ್ ಅವರಿಗೆ ಸೇವಾರತ್ನಾಕರ ಪ್ರಶಸ್ತಿ, ಡಾ. ವಿನೀತ್ ಆನಂದ್ ಭದ್ರಾವತಿ ಅವರಿಗೆ ಜೀವಸೇವಾರತ್ನ ಪ್ರಶಸ್ತಿ ಮತ್ತು ಉದ್ಯಮಿ ಮುರಳೀಧರ ಹತ್ವಾರ್ ಬೇಲೂರು ಅವರಿಗೆ ಜನಹರಿಸೇವಾಸಕ್ತ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು. ಪಡುಬಿದ್ರಿ ಡಾ. ರಾಘವೇಂದ್ರ ರಾವ್ ಸನ್ಮಾನಪತ್ರ ವಾಚಿಸಿದರು. ಶ್ರೀಧರ ಮಹಾಬಲ ಷಡಕ್ಷರಿ ಮತ್ತು ಡಾ.ಜಿ.ಎಸ್.ಚಂದ್ರಶೇಖರ್ ಮಾತನಾಡಿದರು. ಬೆಂಗಳೂರಿನ ಶೇಷಗಿರಿ ಕೆ.ಎಂ. ಪಲಿಮಾರು ಶ್ರೀಪಾದರ ಬಗ್ಗೆ ಮಾತನಾಡಿದರು.
ಶ್ರೀಕೃಷ್ಣ ಸೇವಾಬಳಗದ ಗೋವಿಂದರಾಜ್ ಸ್ವಾಗತಿಸಿ, ನಾಗರಾಜ ತಂತ್ರಿ ನಿರೂಪಿಸಿದರು. ಶ್ರೀಕಾಂತ ಶೆಟ್ಟಿ ಅವರು ಮೀನಾಕ್ಷಿ ಅವರನ್ನು ಪರಿಚಯಿಸಿದರು. ಪ್ರೊ. ನಂದನ ಪ್ರಭು ವಂದಿಸಿದರು.ಗೋಪೂಜೆಯೊಂದಿಗೆ ಕಾರ್ಯಕ್ರಮ ಆರಂಭಗೊಂಡಿತು. ನಂದಿನಿ ಪುಣೆ ಅವರಿಂದ ಸಂಗೀತ ಕಾರ್ಯಕ್ರಮ ನಡೆಯಿತು.