ಮಂಗಳೂರು: ನಗರದ ಸಮೀಪ ಅರ್ಕುಳ ಬಳಿ ರಸ್ತೆ ಅಪಘಾತದಲ್ಲಿ ಯುವ ಕಲಾವಿದ, ಬಿಎಸ್‌ಡಬ್ಲ್ಯೂ ವಿದ್ಯಾರ್ಥಿ ಸ್ಥಳದಲ್ಲೇ ಅಸುನೀಗಿದ ಘಟನೆ ಸಂಭವಿಸಿದೆ.

ವಿಟ್ಲ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿ ಪ್ರವೀತ್ ಕುಮಾ‌ರ್ (22) ಮೃತಪಟ್ಟ ವಿದ್ಯಾರ್ಥಿ ಎಂದು ತಿಳಿಯಲಾಗಿದೆ.ಬೆಳ್ತಂಗಡಿ ದೇಲಂತಬೆಟ್ಟು ನಿವಾಸಿ, ಪ್ರವೀತ್ ಯಕ್ಷಗಾನ ಕಲಾವಿದನಾಗಿದ್ದಾನೆ.

ಅರ್ಕುಳ ಸಮೀಪ ಬೈಕ್‌ ರಸ್ತೆಗೆ ಬಿದ್ದಿದ್ದು ಈ ವೇಳೆ ಐಸ್ ಕ್ರೀಮ್ ಸಾಗಿಸುತ್ತಿದ್ದ ವಾಹನ ಯುವಕನ ಮೇಲೆ ಹರಿದಿದೆ. ಪರಿಣಾಮ ಆತ ಸ್ಥಳದಲ್ಲೇ ಮೃತಪಟ್ಟಿದ್ದಾನೆ ಎಂದು ತಿಳಿದು ಬಂದಿದೆ. ವರ್ಷಾಂತ್ಯದಲ್ಲಿ ದಾರುಣ ಘಟನೆ ನಡೆದಿದೆ. ಕುಟುಂಬಸ್ಥರನ್ನು ಶೋಕಸಾಗರದಲ್ಲಿ ಮುಳುಗಿಸಿದೆ.

ಘಟನೆ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.