ಉಡುಪಿ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ಜನವರಿ 29ರಿ೦ದ 125 ದಿನಗಳಕಾಲ ನಿರ೦ತರ ಅಹೋರಾತ್ರೆ ಭಜನಾ ಕಾರ್ಯಕ್ರಮವು ಜರಗಲಿದೆ. ಭಜನಾ ಕಾರ್ಯಕ್ರಮವನ್ನು ಕಾಶೀಮಠ ಶ್ರೀಶ್ರೀಸ೦ಯಮೀ೦ದ್ರ ತೀರ್ಥಶ್ರೀಪಾದರು ದೀಪಪ್ರಜ್ವಲನೆ ಮಾಡುವುದರೊ೦ದಿಗೆ ಭಜನಾ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ.

ದಕ್ಷಿಣ ಕೊರಿಯಾ ಅಧ್ಯಕ್ಷ ಯೂನ್ ಸುಕ್ ಯೋಲ್ ವಿರುದ್ಧ ಬಂಧನ ವಾರಂಟ್ ಜಾರಿ

ಸಿಯೋಲ್:ಡಿ.31: ದಕ್ಷಿಣ ಕೊರಿಯಾ ನ್ಯಾಯಾಲಯವು ಅಧ್ಯಕ್ಷ ಯೂನ್ ಸುಕ್ ಯೋಲ್ ವಿರುದ್ಧ ಬಂಧನ ವಾರಂಟ್ ಜಾರಿಗೊಳಿಸಿ ಆದೇಶ ಹೊರಡಿಸಿದೆ.

ಡಿಸೆಂಬರ್ 3 ರಂದು ಸಮರ ಕಾನೂನನ್ನು ಹೇರುವ ಅವರ ನಿರ್ಧಾರದ ಮೇಲೆ ಅಧಿಕಾರದಿಂದ ಅಮಾನತುಗೊಳಿಸಲಾಯಿತು. ಅಮಾನತುಗೊಂಡಿರುವ ಅಧ್ಯಕ್ಷ ಯೂನ್ ಸುಕ್ ಯೋಲ್ ವಿರುದ್ಧ ದಕ್ಷಿಣ ಕೊರಿಯಾ ನ್ಯಾಯಾಲಯವು ಬಂಧನ ವಾರಂಟ್ ಮತ್ತು ಸರ್ಚ್ ವಾರೆಂಟ್ ಜಾರಿಗೊಳಿಸಿದೆ.

ಸಿಯೋಲ್ ವೆಸ್ಟರ್ನ್ ಡಿಸ್ಟ್ರಿಕ್ಟ್ ಕೋರ್ಟ್ ವಾರಂಟ್ ಗೆ ಅನುಮೋದನೆ ನೀಡಿದೆ. ದಕ್ಷಿಣ ಕೊರಿಯಾದಲ್ಲಿ ಹಾಲಿ ಅಧ್ಯಕ್ಷರಿಗೆ ಹೊರಡಿಸಲಾದ ಮೊದಲ ಬಂಧನ ವಾರಂಟ್ ಇದಾಗಿದೆ. ದಕ್ಷಿಣ ಕೊರಿಯಾದಲ್ಲಿ ಮೊದಲ ಬಾರಿಗೆ ಸಮರ ಕಾನೂನನ್ನು ಘೋಷಣೆ ಮಾಡಲಾಗಿತ್ತು.

ಅಪಾರ ಒತ್ತಡದ ಬಳಿಕ ಸಮರ ಕಾನೂನು ಘೋಷಣೆಯನ್ನ ಹಿಂಪಡೆಯಲಾಯಿತು. ರಾಷ್ಟ್ರ ವಿರೋಧಿ ಶಕ್ತಿಗಳನ್ನು ನಾಶಮಾಡಲು ಮಾರ್ಷಲ್ ಕಾನೂನನ್ನು ಘೋಷಿಸಲಾಗುತ್ತಿದೆ ಎಂದು ಅವರು ತಿಳಿಸಿದ್ದರು. ಈ ಆದೇಶದಿಂದ ದೇಶವು ತಾತ್ಕಾಲಿಕ ಮಿಲಿಟರಿ ನಿಯಂತ್ರಣಕ್ಕೆ ಬರುತ್ತಿತ್ತು.

ದಕ್ಷಿಣ ಕೊರಿಯಾದಲ್ಲಿ ಮಾರ್ಷಲ್ ಕಾನೂನು ಜಾರಿ ಎಂದರೆ ತುರ್ತು ಪರಿಸ್ಥಿತಿ ಘೋಷಣೆ ಎಂದರ್ಥ. ಈ ಸಮಯದಲ್ಲಿ ಎಲ್ಲಾ ಆಡಳಿತವು ಮಿಲಿಟರಿ ಕೈಯಲ್ಲಿರುತ್ತದೆ. ಚುನಾಯಿತ ಸರ್ಕಾರಕ್ಕೆ ತನ್ನ ಕೆಲಸ ಮಾಡಲು ಸಾಧ್ಯವಾಗದೇ ಇರುವುದೇ ಇದಕ್ಕೆ ಕಾರಣ ಎಂದು ಹೇಳಲಾಗಿದೆ.

No Comments

Leave A Comment