ಅಮೆರಿಕ ಸುಪ್ರೀಂ ಕೋರ್ಟ್ ತೀರ್ಪಿಗೆ ಸೆಡ್ಡು ಹೊಡೆದ ಟ್ರಂಪ್; ಜಾಗತಿಕ ಸುಂಕ ಶೇ. 10 ರಿಂದ 15ಕ್ಕೆ ಹೆಚ್ಚಿಸಿ ಆದೇಶ!...ಕಲ್ಲು ತೂರಾಟ ಕೇಸ್​: ಇಬ್ಬರು ಹಿಂದೂ ಕಾರ್ಯಕರ್ತರ ಬಂಧನ; ಮುತಾಲಿಕ್, ಕೆರೆಹಳ್ಳಿಗೆ ನಿರ್ಬಂಧ...

ಕೆಎಸ್​ಆರ್​ಟಿಸಿ ಬಸ್ ಚಾಲಕನಿಗೆ ಫಿಟ್ಸ್, ಸರಣಿ ಅಪಘಾತ: 40ಕ್ಕೂ ಹೆಚ್ಚು ಪ್ರಯಾಣಿಕರು ಜಸ್ಟ್​ ಮಿಸ್

ಬೆಂಗಳೂರು, ಡಿಸೆಂಬರ್​ 29: ಕೆಎಸ್​ಆರ್​ಟಿಸಿ ಬಸ್ ಚಾಲನೆ ವೇಳೆ ಚಾಲಕನಿಗೆ ಫಿಟ್ಸ್​​ ಕಾಣಿಸಿಕೊಂಡ ಪರಿಣಾಮ ಸರಣಿ ಅಪಘಾತ ಸಂಭವಿಸಿರುವಂತಹ ಘಟನೆ ಡಿ. 25 ರಂದು ಮಧ್ಯಾಹ್ನ 3 ಗಂಟೆ ಸುಮಾರಿಗೆ ಮಡಕಶಿರದ ಮಾರುತಿ‌ನಗರದ ಬಳಿ ನಡೆದಿದೆ. ಬಸ್​​ನಲ್ಲಿ 40ಕ್ಕೂ ಹೆಚ್ಚು ಪ್ರಯಾಣಿಕರಿದ್ದರು ಎನ್ನಲಾಗಿದ್ದು, ಸ್ಪಲ್ಪ ಯಾಮಾರಿದ್ದರೆ ಹತ್ತಾರು ಅಮಾಯಕರ ಪ್ರಾಣ ಹೋಗುತ್ತಿತ್ತು. ಘಟನೆಯಲ್ಲಿ ಓರ್ವ ರೈತನಿಗೆ ತೀವ್ರ ಗಾಯವಾಗಿದ್ದು, ಸಾವು ಬದುಕಿನ ನಡುವೆ ಹೋರಾಡುತ್ತಿದ್ದಾರೆ. ಅಪಘಾತದ ವಿಡಿಯೋ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ನೆಲಮಂಗಲ ಡಿಪೋ, ಚಿತ್ರದುರ್ಗ ವಿಭಾಗಕ್ಕೆ ಸೇರಿದ KA-57F4409 ನಂಬರ್​ ಕೆಎಸ್​ಆರ್​ಟಿಸಿ ಬಸ್ ಪಾವಗಡ ಟು ಬೆಂಗಳೂರಿಗೆ ಸಂಚರಿಸುತ್ತಿತ್ತು. ಚಾಲಕ ಫಿಟ್ಸ್ ಕಾಯಿಲೆಯಿಂದ ಬಳಲುತ್ತಿದ್ದನಂತೆ. ಅಪಘಾತದ ವೇಳೆ ಚಾಲಕನಿಗೆ ಫಿಟ್ಸ್ ಬಂದಿತ್ತಂತೆ. ಈ ವೇಳೆ ರಸ್ತೆ ಪಕ್ಕ ನಿಂತಿದ್ದ ವ್ಯಕ್ತಿಗೆ ಡಿಕ್ಕಿ ಹೊಡೆದು, ಒಂದು ಗೂಡ್ಸ್ ಆಟೋ ಮತ್ತು ಬೈಕ್​ಗೆ ಕೆಎಸ್​ಆರ್​ಟಿಸಿ ಬಸ್ ಡಿಕ್ಕಿ ಹೊಡೆದಿದೆ.

No Comments

Leave A Comment