ಜನವರಿ 16ರ ಮಧ್ಯರಾತ್ರೆಯಿ೦ದ 17ರ ಮಧ್ಯರಾತ್ರೆಯವರೆಗೆ ಜಿಲ್ಲೆಯಲ್ಲಿ ಮಧ್ಯ ಮಾರಾಟ ಬ೦ದ್ ಮಾಡುವ೦ತೆ ಶೀರೂರುಮಠದ ಭಕ್ತರು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಎಸ್ಪಿ,ಮತ್ತು ಅಬಕಾರಿ ಜಿಲ್ಲಾಧಿಕಾರಿಯವರಲ್ಲಿ ವಿನ೦ತಿಸಿಕೊ೦ಡಿದ್ದಾರೆ...

ಸಂಘರ್ಷಕ್ಕೆ ಕಾರಣವಾಯ್ತು ಮಸೀದಿ ಭೂ ವಿವಾದ: ಮುಸ್ಲಿಂ ಕುಟುಂಬ, ಆಡಳಿತ ಮಂಡಳಿ ಕಿತ್ತಾಟ

ಮಂಗಳೂರು, ಡಿಸೆಂಬರ್​ 28: ಟಿಪ್ಪು ಸುಲ್ತಾನ್ ಕಾಲದ ಖಬರಸ್ತಾನ ಭೂಮಿ ಕಬಳಿಕೆ ಮಾಡಿರುವ ಆರೋಪ ಕೇಳಿಬಂದಿದ್ದು, ಮಸೀದಿ ಆಡಳಿತ ಮಂಡಳಿಯಿಂದ ಪ್ರತಿಭಟನೆ ಮಾಡಲಾಗಿದೆ. ಇದೇ ವೇಳೆ ಭೂಕಬಳಿಕೆ ಆರೋಪ ಹೊತ್ತ ಮಹಿಳೆ ಹಾಗೂ ಕುಟುಂಬದಿಂದ ರಂಪಾಟ ಮಾಡಲಾಗಿದ್ದು, ದೊಣ್ಣೆಯಿಂದ ದಾಳಿ ನಡೆಸಿ ಪ್ರತಿಭಟನಾಕಾರನ ಶರ್ಟ್ ಹರಿದು ಹಾಕಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ನಗರದ ಕದ್ರಿ ಪೊಲೀಸ್ ಠಾಣಾ ವ್ಯಾಪ್ತಿಯ ಬಿಕರ್ನಕಟ್ಟೆಯ ಅಹ್ಸನುಲ್ ಮಸೀದಿಯಲ್ಲಿ ಘಟನೆ ನಡೆದಿದೆ.

ಪ್ರಕರಣದ ಬಗ್ಗೆ ಅಹ್ಸನುಲ್​ ಮಸೀದಿ ಆಡಳಿತ ಮಾತನಾಡಿದ್ದು, ಹಲವು ವರ್ಷಗಳಿಂದ ಮಸೀದಿ ಪಕ್ಕದ 30 ಸೆಂಟ್ಸ್ ಜಾಗ ಖಬರಸ್ತಾನ ಆಗಿತ್ತು. ನೂರಾರು ವರ್ಷಗಳಿಂದ ಪೂರ್ವಜರ ಮೃತದೇಹ ದಫನ ಮಾಡಲಾಗಿದೆ. ನೂರಾರು ಮುಸ್ಲಿಂ ಕುಟುಂಬಗಳ ಶವ ಧಪನ ಮಾಡಿರುವ ಬಗ್ಗೆ ಉಲ್ಲೇಖಿಸಿದ್ದಾರೆ. ಆದರೆ ಅದು ದಫನ ಭೂಮಿ ಅಲ್ಲ, ನಮ್ಮ ಖಾಸಗಿ ಜಾಗವೆಂದು ಉಸ್ಮಾನ್ ಕುಟುಂಬ ಆರೋಪಿಸುತ್ತಿದೆ.

30 ಸೆಂಟ್ಸ್ ಜಾಗ ತಮ್ಮ ಹೆಸರಿನಲ್ಲೇ ಇರುವುದಾಗಿ ಉಸ್ಮಾನ್ ಕುಟುಂಬದ ವಾದವಾಗಿದ್ದು, ಆದರೆ ಜಾಗ ತಮ್ಮದು ಎಂದು ಮಸೀದಿ ಆಡಳಿತ ಮಂಡಳಿ ಹೇಳುತ್ತಿದೆ. ಹೊಡೆದಾಡಿಕೊಳ್ಳುವ ಹಂತಕ್ಕೂ ಮುಸ್ಲಿಂ ಕುಟುಂಬ ಹಾಗೂ ಮಸೀದಿ ಆಡಳಿತ ಮಂಡಳಿಯ ಕಿತ್ತಾಟ ತಲುಪಿದೆ. ಕದ್ರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಜೆಡಿಎಸ್ ಮಾಜಿ ಶಾಸಕ ವಿರುದ್ಧ ಸರ್ಕಾರಿ ಭೂಮಿ ಒತ್ತುವರಿ ಆರೋಪ

ಬೆಂಗಳೂರು ದೇವನಹಳ್ಳಿ ಕ್ಷೇತ್ರದ ಜೆಡಿಎಸ್ ಮಾಜಿ ಶಾಸಕ ಕೋಲಾರದಲ್ಲಿ ಸರ್ಕಾರಿ ಭೂಮಿ ಒತ್ತುವರಿ ಮಾಡಿಕೊಂಡಿರುವ ಆರೋಪ ಕೇಳಿ ಬಂದಿದೆ. ಕೋಲಾರ ಜಿಲ್ಲೆಯ ಕೆಜಿಎಫ್ ತಾಲ್ಲೂಕು ಚಿನ್ನಪಲ್ಲಿ ಬಳಿ ಹತ್ತಾರು ಎಕರೆ ಸರ್ಕಾರಿ ಭೂಮಿ ಒತ್ತುವರಿ ಮಾಡಿರುವ ಆರೋಪ ಕೇಳಿ ಬಂದಿದೆ. ಅಲ್ಲದೆ ಮಾಜಿ ಶಾಸಕ ಸ್ಥಳೀಯರು ಹಾಗೂ ಅಂಬೇಡ್ಕರ್ ಯುವ ವೇದಿಕೆ ಕಾರ್ಯಕರ್ತರಿಂದ ಪ್ರತಿಭಟನೆ ಮಾಡಿ ಮನವಿ ಸಲ್ಲಿಸಿದ್ದಾರೆ.

ದೇವನಹಳ್ಳಿ ಜೆಡಿಎಸ್‌ನ ಮಾಜಿ ಶಾಸಕ ನಿಸರ್ಗ ನಾರಾಯಣಸ್ವಾಮಿ ವಿರುದ್ದ ಸರ್ಕಾರಿ ಭೂಮಿ ಒತ್ತುವರಿ ಆರೋಪ ಇದಾಗಿದ್ದು, ಚಿನ್ನಪಲ್ಲಿ ಸರ್ವೆ ನಂ-20 ರಲ್ಲಿ ಒಂದಷ್ಟು ಜಮೀನು ಖರೀದಿ ಮಾಡಿರುವ ಅವರು ಪಕ್ಕದಲ್ಲೆ ಇರುವ ಸರ್ವೇ ನಂ.21 ರಲ್ಲಿ ಇರುವ ಸರ್ಕಾರಿ ಗೋಮಾಳ ಭೂಮಿ ಮೇಲೂ ಕಣ್ಣು ಹಾಕಿದ್ದಾರೆ. ಸುಮಾರು 76 ಎಕರೆ ಗೋಮಾಳ ಭೂಮಿಯಲ್ಲಿ ಹತ್ತಾರು ಎಕರೆ ಭೂಮಿಯನ್ನ ಒತ್ತುವರಿ ಮಾಡಿಕೊಂಡು ಕಾಂಪೌಂಡ್ ನಿರ್ಮಾಣ ಮಾಡಿಕೊಂಡಿದ್ದಾರೆ ಎಂಬ ಆರೋಪಗಳು ಕೇಳಿ ಬಂದಿತ್ತು.

No Comments

Leave A Comment