ಉಡುಪಿ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ಜನವರಿ 29ರಿ೦ದ 125 ದಿನಗಳಕಾಲ ನಿರ೦ತರ ಅಹೋರಾತ್ರೆ ಭಜನಾ ಕಾರ್ಯಕ್ರಮವು ಜರಗಲಿದೆ. ಭಜನಾ ಕಾರ್ಯಕ್ರಮವನ್ನು ಕಾಶೀಮಠ ಶ್ರೀಶ್ರೀಸ೦ಯಮೀ೦ದ್ರ ತೀರ್ಥಶ್ರೀಪಾದರು ದೀಪಪ್ರಜ್ವಲನೆ ಮಾಡುವುದರೊ೦ದಿಗೆ ಭಜನಾ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ.
ಫಲವನಹಳ್ಳಿ ಅರಣ್ಯ ವಲಯದಲ್ಲಿ 32 ಜೀವಂತ ನಾಡಬಾಂಬ್ ಪತ್ತೆ: ಇಬ್ಬರ ಬಂಧನ
ದಾವಣಗೆರೆ, ಡಿಸೆಂಬರ್ 26: ಜಿಲ್ಲೆಯ ನ್ಯಾಮತಿ ತಾಲೂಕಿನ ಫಲವನಹಳ್ಳಿ ಅರಣ್ಯ ವಲಯ ಸರ್ವೆ ನಂಬರ್ 61ರಲ್ಲಿ 32 ಜೀವಂತ ನಾಡಬಾಂಬ್ಗಳು ಪತ್ತೆ ಆಗಿವೆ. ಅರಣ್ಯ ಇಲಾಖೆ ಅಧಿಕಾರಿಗಳು ಗಸ್ತು ತಿರುಗುತ್ತಿದ್ದಾಗ ನಾಡಬಾಂಬ್ ಪತ್ತೆ ಆಗಿವೆ. ನಾಡಬಾಂಬ್ ಪತ್ತೆ ಬಗ್ಗೆ ಅರಣ್ಯ ಇಲಾಖೆ ಅಧಿಕಾರಿ ಬರ್ಕತ್, ನ್ಯಾಮತಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಕಾಡು ಪ್ರಾಣಿಗಳ ಬೇಟೆಗಾಗಿ ನಾಲ್ವರು ದುಷ್ಕರ್ಮಿಗಳು ನಾಡಬಾಂಬ್ ಇಟ್ಟಿದ್ದರು. ಅರಣ್ಯ ಇಲಾಖೆ ಅಧಿಕಾರಿಗಳನ್ನ ಕಂಡು KA 68 E 5881, KA 31 J 2307 ಸಂಖ್ಯೆಯ 2 ಬೈಕ್ ಬಿಟ್ಟು ನಾಲ್ವರು ಪರಾರಿ ಆಗಿದ್ದಾರೆ. ಗಸ್ತು ತಿರುಗುತ್ತಿದ್ದಾಗ ರಸ್ತೆ ಬದಿ 2 ಬೈಕ್ಗಳನ್ನು ಅರಣ್ಯ ಸಿಬ್ಬಂದಿಗಳು ನೋಡಿದ್ದಾರೆ. ಅನುಮಾನಗೊಂಡು ಕಾಡಿನೊಳಗೆ ಹೋದಾಗ ಬಾಂಬ್ ಇಡಲು ನಾಲ್ವರು ಸ್ಕೆಚ್ ಹಾಕಿರುವುದು ತಿಳಿದುಬಂದಿದೆ.
ಬಾಂಬ್ ಇಡಲು ಬಂದಿದ್ದ ನಾಲ್ವರ ಪೈಕಿ ಇಬ್ಬರ ಗುರುತು ಪತ್ತೆಯಾಗಿದ್ದು, ಮಾದಾಪುರ ಗ್ರಾಮದ ತಿಮ್ಮಪ್ಪ ಮತ್ತು ಗುಡ್ಡಪ್ಪ ಎಂಬುದು ತಿಳಿದುಬಂದಿದೆ. ಇಬ್ಬರನ್ನು ಬಂಧಿಸಿದ ಅರಣ್ಯ ಇಲಾಖೆ ಅಧಿಕಾರಿಗಳು ಕಾನೂನು ಪ್ರಕಾರ ಜೈಲಿಗಟ್ಟಿದ್ದಾರೆ. ಇನ್ನು ಉಳಿದ ಇಬ್ಬರ ಮಾಹಿತಿಯನ್ನು ನ್ಯಾಮತಿ ಪೊಲೀಸರು ಕಲೆ ಹಾಕುತ್ತಿದ್ದಾರೆ. ಈ ಹಿಂದೆಯೂ ಆರೋಪಿಗಳು ಇದೇ ಅರಣ್ಯದಲ್ಲಿ ನಾಡಬಾಂಬ್ ಇಟ್ಟಿದ್ದರು.
ಬೇಟೆಗಾಗಿ ತಯಾರಿಸಿದ್ದ ಮದ್ದು, ಗುಂಡು ಸ್ಫೋಟ: ಮಗ ಸಾವು, ತಂದೆ ಜಸ್ಟ್ ಮಿಸ್
ಅಂದಹಾಗೆ ಇತ್ತೀಚೆಗೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ತಾಲೂಕಿನ ದೊಡ್ಡನಲ್ಲಾಳ ಗ್ರಾಮದ ನಾಗೇಶ್ ಎಂಬುವವರು ರಾತ್ರಿ ವೇಳೆ ಕಾಡು ಹಂದಿ ಸೇರಿದಂತೆ ವನ್ಯಜೀವಿಗಳ ಬೇಟೆಯನ್ನ ಕಸುಬಾಗಿಸಿಕೊಂಡಿದ್ದು, ಅದಕ್ಕಾಗಿ ತನ್ನ ಮನೆಯಲ್ಲಿ ಮದ್ದು, ಗುಂಡು ತಯಾರಿ ಮಾಡುತ್ತಿದ್ದ. ಈ ವೇಳೆ ಮನೆಯಲ್ಲಿದ್ದ 18 ವರ್ಷದ ತನ್ನ ಮಗನನ್ನ ಸಹ ಬಳಸಿಕೊಂಡಿದ್ದು, ಮದ್ದು, ಗುಂಡು ತಯಾರಿ ಮಾಡಿದ್ದಾನೆ.
ಈ ವೇಳೆ ತಯಾರಾಗಿದ್ದ ಮದ್ದು, ಗುಂಡು ಆಕಸ್ಮಿಕವಾಗಿ ತಂದೆ, ಮಗನ ಮುಂದೆಯೇ ಸ್ಫೋಟಗೊಂಡು ಮಗ ಪ್ರವನ್ ಮನೆಯಲ್ಲೇ ಸಾವನ್ನಪಿದ್ದರೆ, ತಂದೆ ನಾಗೇಶ್ ಕಾಲಿಗೂ ಗಂಭೀರವಾಗಿ ಗಾಯವಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಜೊತೆಗೆ ಸ್ಫೋಟದ ರಭಸಕ್ಕೆ ಮನೆಯ ಮೇಲ್ಚಾವಣಿ ಸಹ ಪೀಸ್ ಪೀಸ್ ಆಗಿದ್ದು, ಮನೆಯಲ್ಲಿದ್ದ ವಸ್ತುಗಳೆಲ್ಲಾ ಪುಡಿ ಪುಡಿಯಾಗಿದ್ದವು.