ಉಡುಪಿ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ಜನವರಿ 29ರಿ೦ದ 125 ದಿನಗಳಕಾಲ ನಿರ೦ತರ ಅಹೋರಾತ್ರೆ ಭಜನಾ ಕಾರ್ಯಕ್ರಮವು ಜರಗಲಿದೆ. ಭಜನಾ ಕಾರ್ಯಕ್ರಮವನ್ನು ಕಾಶೀಮಠ ಶ್ರೀಶ್ರೀಸ೦ಯಮೀ೦ದ್ರ ತೀರ್ಥಶ್ರೀಪಾದರು ದೀಪಪ್ರಜ್ವಲನೆ ಮಾಡುವುದರೊ೦ದಿಗೆ ಭಜನಾ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ.

Kazakhstan Plane Crash: ಅಜರ್ ಬೈಜಾನ್ ವಿಮಾನ ಪತನ, ಕನಿಷ್ಠ 30 ಮಂದಿ ಸಾವು

ನವದೆಹಲಿ: ಕಜಕಿಸ್ತಾನದಲ್ಲಿ ಭೀಕರ ವಿಮಾನ ಅಪಘಾತವಾಗಿದ್ದು, ಸುಮಾರು 70ಕ್ಕೂ ಹೆಚ್ಚು ಪ್ರಯಾಣಿಕರಿದ್ದ ವಿಮಾನ ಪತನವಾಗಿದ್ದು, ಕನಿಷ್ಟ 30 ಮಂದಿ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.

70ಕ್ಕೂ ಹೆಚ್ಚು ಪ್ರಯಾಣಿಕರನ್ನು ಹೊತ್ತ ಅಜರ್‌ಬೈಜಾನ್ ಏರ್‌ಲೈನ್ಸ್ ವಿಮಾನ ಬಕು ನಗರದಿಂದ ರಷ್ಯಾದ ಗ್ರೋಜ್ನಿ ನಗರಕ್ಕೆ ಪ್ರಯಾಣ ಬೆಳೆಸಿತ್ತು. ಆದರೆ ಕಜಕಿಸ್ತಾನದ ಅಕ್ತಾವು ಬಳಿ ವಿಮಾನ ಏಕಾಏಕಿ ಪತನಗೊಂಡಿದೆ.

ಪೈಲಟ್ ನಿಯಂತ್ರಣ ಕಳೆದುಕೊಂಡ ವಿಮಾನ ನೋಡ ನೋಡುತ್ತಲೇ ನೆಲಕ್ಕೆ ಅಪ್ಪಳಿಸಿ ಸ್ಫೋಟಗೊಂಡಿದೆ. ಭೀಕರ ಘಟನೆಯ ದೃಶ್ಯವನ್ನು ಸ್ಥಳೀಯರು ಮೊಬೈಲ್ ನಲ್ಲಿ ಸೆರೆ ಹಿಡಿದಿದ್ದು, ಈ ದೃಶ್ಯ ಇದೀಗ ವೈರಲ್ ಆಗುತ್ತಿದೆ.

ದಟ್ಟ ಮಂಜು; ಕೊನೆಯ ಕ್ಷಣದಲ್ಲಿ ಮಾರ್ಗ ಬದಲಾವಣೆ

ಇನ್ನು ಮೂಲಗಳ ಪ್ರಕಾರ ದಟ್ಟ ಮಂಜಿನ ಕಾರಣ ವಿಮಾನದ ಮಾರ್ಗ ಕೊನೆಯ ಕ್ಷಣದಲ್ಲಿ ಬದಲಾಯಿಸಲಾಗಿತ್ತು. ರಷ್ಯಾದ ಗ್ರೋಜ್ನಿಗೆ ಹೊರಟಿದ್ದ ವಿಮಾನಕ್ಕೆ ಮಾರ್ಗ ಬದಲಾವಣೆ ಸೂಚನೆ ನೀಡಲಾಗಿತ್ತು. ಗ್ರೋಜ್ನಿಯಲ್ಲಿ ದಟ್ಟ ಮಂಜು ಆವರಿಸಿರುವ ಕಾರಣ ವಿಮಾನ ಹಾರಾಟ ಸವಾಲಾಗುವ ಸಾಧ್ಯತೆ ಇದೆ. ಹೀಗಾಗಿ ಮಾರ್ಗ ಬದಲಾವಣೆಗೆ ಸೂಚಿಸಲಾಗಿತ್ತು.

ಆದರೆ ಅಕ್ತಾವು ಬಳಿ ವಿಮಾನ ಆಗಮಸದಲ್ಲೇ ಕೆಲ ಸುತ್ತು ಹೊಡದಿದೆ. ವಿಮಾನ ಲ್ಯಾಂಡಿಂಗ್ ಮಾಡುವ ಪ್ರಯತ್ನ ಮಾಡಿದ್ದಾರೆ ಎನ್ನಲಾಗಿದೆ. ಆದರೆ ಲ್ಯಾಂಡಿಂಗ್ ಸಾಧ್ಯವಾಗಿಲ್ಲ. ನೇರವಾಗಿ ವಿಮಾನ ನೆಲಕ್ಕೆ ಅಪ್ಪಳಿಸಿದೆ. ಇದರ ಪರಿಣಾಮ ವಿಮಾನ ಪತನಗೊಂಡಿದೆ.

25 ಮಂದಿ ರಕ್ಷಣೆ, ಆಸ್ಪತ್ರೆಗೆ ದಾಖಲು

ಇನ್ನು ವಿಮಾನ ಅಪಘಾತದಲ್ಲಿ ಅಚ್ಚರಿ ರೀತಿಯಲ್ಲಿ ಹಲವು ಪ್ರಯಾಣಿಕರು ಪಾರಾಗಿದ್ದು ಸುಮಾರು 25 ಮಂದಿ ಗಾಯಾಳುಗಳನ್ನು ಆಸ್ಪತ್ರೆಗೆ ರವಾನಿಸಲಾಗಿದೆ. ವಿಮಾನ ಪತನವಾದ ಕೂಡಲೇ ಸ್ಥಳೀಯರು ವಿಮಾನದೊಳಗಿದ್ದ 14 ಪ್ರಯಾಣಿಕರನ್ನು ಹೊರಗೆಳೆದಿದ್ದು, ಬಳಿಕ ಇತರರನ್ನು ರಕ್ಷಿಸಿದ್ದಾರೆ ಎನ್ನಲಾಗಿದೆ. ಈ ಪೈಕಿ ಐದು ಮಂದಿ ಗಂಭೀರ ಸ್ಥಿತಿಯಲ್ಲಿದ್ದಾರೆ ಎನ್ನಲಾಗಿದೆ.

ಕಜಕಿಸ್ತಾನ ತುರ್ತು ಸಚಿವಾಲಯ ವಿಮಾನ ಪತನ ಕುರಿತು ಮಾಹಿತಿ ನೀಡಿದ್ದು, ಅಜರ್‌ಬೈಜಾನ್ ಏರ್‌ಲೈನ್ಸ್ ಅಕ್ತಾವುನಲ್ಲಿ ಪತನಗೊಂಡಿದೆ. 72 ಪ್ರಯಾಣಿಕರು ಈ ವಿಮಾನದಲ್ಲಿದ್ದರು. ಭೀಕರ ಪತನ ಇದಾಗಿರುವ ಕಾರಣ ಪ್ರಯಾಣಿಕರು ಸ್ಥಿತಿ ತಿಳಿದಿಲ್ಲ. ರಕ್ಷಣಾ ಕಾರ್ಯಗಳು ನಡೆಯುತ್ತಿದೆ. 52 ರಕ್ಷಣಾ ತಂಡದ ಸದಸ್ಯರು ಕಾರ್ಯಾಚರಣೆ ನಡೆಸುತ್ತಿದ್ದಾರೆ. 11 ಯಂತ್ರಗಳನ್ನು ಬಳಸಿಕೊಳಲಾಗಿದೆ ಎಂದು ಮಾಹಿತಿ ನೀಡಿದೆ.

ವಿಮಾನ ಹೈಜಾಕ್ ಶಂಕೆ

ಇನ್ನು ವಿಮಾನ ಪತನಕ್ಕೆ ಕಾರಣಗಳು ತಿಳಿದುಬಂದಿಲ್ಲ. ಮೇಲ್ನೋಟಕ್ಕೆ ದಟ್ಟ ಮಂಜು ಅಥವಾ ತಾಂತ್ರಿಕ ದೋಷ ಕಾರಣ ಎಂದು ಹೇಳಲಾಗುತ್ತಿದ್ದರೂ ವಿಮಾನ ಹೈಜಾಕ್ ಮಾಡಿರುವ ಸಾಧ್ಯತೆ ಕೂಡ ಇದೆ ಎಂದು ಹೇಳಲಾಗುತ್ತಿದೆ. ಈ ಬಗ್ಗೆಯೂ ಕೂಲಂಕುಷ ತನಿಖೆ ನಡೆಸಲಾಗುತ್ತದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

No Comments

Leave A Comment