ಉಡುಪಿ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ಜನವರಿ 29ರಿ೦ದ 125 ದಿನಗಳಕಾಲ ನಿರ೦ತರ ಅಹೋರಾತ್ರೆ ಭಜನಾ ಕಾರ್ಯಕ್ರಮವು ಜರಗಲಿದೆ. ಭಜನಾ ಕಾರ್ಯಕ್ರಮವನ್ನು ಕಾಶೀಮಠ ಶ್ರೀಶ್ರೀಸ೦ಯಮೀ೦ದ್ರ ತೀರ್ಥಶ್ರೀಪಾದರು ದೀಪಪ್ರಜ್ವಲನೆ ಮಾಡುವುದರೊ೦ದಿಗೆ ಭಜನಾ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ.
ಶ್ವೇತಾ ಗೌಡ ಜತೆ ವರ್ತೂರ್ ಪ್ರಕಾಶ್ ಎಂಗೇಜ್ಮೆಂಟ್ಗೆ ಸಿದ್ಧತೆ: ತನಿಖೆ ವೇಳೆ ಸ್ಫೋಟಕ ಮಾಹಿತಿ ಬಹಿರಂಗ
ಬೆಂಗಳೂರು, (ಡಿಸೆಂಬರ್ 24): ಶ್ವೇತಾ ಗೌಡ ವಂಚನೆ ಕೇಸ್‌ನಲ್ಲಿ ಸಂಕಷ್ಟದಲ್ಲಿ ಸಿಲುಕಿರುವ ಮಾಜಿ ಸಚಿವ ವರ್ತೂರು ಪ್ರಕಾಶ್ ವಿಚಾರಣೆ ಬಳಿಕ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದೆ. ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಭಾರತಿ ನಗರ ಪೊಲೀಸ್ ಠಾಣೆಗೆ ಹಾಜರಾಗಿದ್ದ ವರ್ತೂರು ಪ್ರಕಾಶ್, ಎಸಿಪಿ ಗೀತಾ ಎದುರು ವಿಚಾರಣೆ ಎದುರಿಸಿದ್ದು, ಇದೇ ವೇಳೆ ಆರೋಪಿ ಶ್ವೇತಾ ಗೌಡ ಕೊಟ್ಟಿದ್ದ ಗಿಫ್ಟ್‌ಗಳನ್ನ ಅಂದ್ರೆ ನಗದು, ಚಿನ್ನಾಭರಣ ಎಲ್ಲವನ್ನೂ ಪೊಲೀಸರಿಗೆ ವಾಪಸ್ ಹಿಂದಿರುಗಿಸಿದ್ದಾರೆ. ಒಟ್ಟು 12.50 ಲಕ್ಷ ರೂ. ನಗದು, 12.46 ಲಕ್ಷ ನಗದು, 100 ಗ್ರಾಂ ಚಿನ್ನಾಭರಣ, 1 ಉಂಗುರ ವಾಪಸ್ ನೀಡಿದ್ದಾರೆ.
ಹಲವು ಸ್ಪೋಟಕ ಮಾಹಿತಿ ಬಹಿರಂಗ
ವಂಚಕಿ ಶ್ವೇತಾ ವಿಚಾರಣೆ ವೇಳೆ ಹಲವು ಸ್ಪೋಟಕ ಮಾಹಿತಿಗಳು ಬಹಿರಂಗವಾಗಿದೆ. ಶ್ವೇತಾಗೌಡ ಹಾಗೂ ವರ್ತೂರು ಪ್ರಕಾಶ್‌ಗೆ ನಿಕಟ ನಂಟಿರುವುದು ಪತ್ತೆಯಾಗಿದೆ. ಇಬ್ಬರೂ ಹಲವು ಬಾರಿ ಚಾಮುಂಡಿ ಬೆಟ್ಟಕ್ಕೆ ಹೋಗಿ ಬಂದಿದ್ದಾರೆ. ಅಚ್ಚರಿ ಅಂದ್ರೆ ವರ್ತೂರು ಪ್ರಕಾಶ್, ಶ್ವೇತಾ ಗೌಡ ಜೊತೆಗೆ ಎಂಗೇಜ್ಮೆಂಟ್ ಮಾಡಿಕೊಳ್ಳಲು ಸಿದ್ಧತೆ ನಡೆಸಿದ್ದು ಎಂದು ತಿಳಿದುಬಂದಿದೆ. ತಿರುಪತಿಯಲ್ಲಿ ಎಂಗೇಜ್ಮೆಂಟ್ ಮಾಡಿಕೊಳ್ಳಲು ಟಿಕೆಟ್ ಸಹ ಬುಕ್ ಮಾಡಿರುವುದು ಬಹಿರಂಗವಾಗಿದೆ. ಇದಕ್ಕೆ ಪೂರಕವಾಗಿ ಶ್ವೇತಾ ಮೊಬೈಲ್‌ನಲ್ಲಿ ಹಲವು ಫೋಟೋ ಸಾಕ್ಷ್ಯಗಳು ಸಿಕ್ಕಿವೆ. 3 ಚಿನ್ನದ ಅಂಗಡಿ ಮಾಲೀಕರ ಜ್ಯುವೆಲ್ಲರಿ ಶಾಪ್‌ಗೆ ಶ್ವೇತಾ ಜೊತೆ ವರ್ತೂರು ಪ್ರಕಾಶ್ ಹೋಗಿರುವುದಕ್ಕೆ ಸಾಕ್ಷಿ ಸಿಕ್ಕಿದೆ. ಅಲ್ಲದೇ ವರ್ತೂರ್ ಪ್ರಕಾಶ್, ಎಂಗೇಜ್ಮೆಂಟ್ ವೇಳೆ ಹಾಕಬೇಕಿದ್ದ ಉಂಗುರದ ಫೋಟೋವನ್ನು ಸಹ ಶ್ವೇತಾಗೆ ಕಳುಹಿಸಿರುವುದು ಪತ್ತೆಯಾಗಿದೆ.
ಗುಲಾಬ್ ಜಾಮೂನ್ ಎಂದು ನಂಬರ್ ಸೇವ್
6 ತಿಂಗಳ ಹಿಂದೆಯಷ್ಟೇ ಶ್ವೇತಾ, ವರ್ತೂರು ಪ್ರಕಾಶ್‌ಗೆ ಫೇಸ್‌ಬುಕ್‌ನಲ್ಲಿ ಪರಿಚಯವಾಗಿದ್ದಳು, ತಾನೇ ರಿಕ್ವೆಸ್ಟ್ ಕಳಿಸಿ ಸ್ನೇಹದ ಬಲೆಗೆ ಬೀಳಿಸಿಕೊಂಡಿದ್ದಳು. ಬಳಿಕ ಮೆಸೆಂಜರ್‌ನಲ್ಲಿ ಚಾಟಿಂಗ್ ಶುರುವಾಗಿ ಇಬ್ಬರೂ ಮೊಬೈಲ್ ನಂಬರ್ ವಿನಿಮಯ ಮಾಡಿಕೊಂಡಿದ್ದಾರೆ. ಬಳಿಕ ವಾಟ್ಸಪ್‌ನಲ್ಲೂ ಚಾಟಿಂಗ್ ಮುಂದುವರಿದಿದೆ. ಶ್ವೇತಾ ವರ್ತೂರು ಪ್ರಕಾಶ್ ನಂಬರ್ ಅನ್ನು ಗುಲಾಬ್ ಜಾಮೂನ್ ಎಂಬ ಹೆಸರಿನಿಂದ ಸೇವ್ ಮಾಡಿಕೊಂಡಿದ್ದಳು ಎನ್ನುವ ವಿಚಾರವೂ ತನಿಖೆ ವೇಳೆ ಬೆಳಕಿಗೆ ಬಂದಿದೆ.
ವರ್ತೂರ್ ಪ್ರಕಾಶ್ ಹೇಳಿದ್ದಿಷ್ಟು
ವಿಚಾರಣೆ ಬಳಿಕ ಮಾತನಾಡಿದ ವರ್ತೂರ್ ಪ್ರಕಾಶ್, ನನಗೆ ಆಕೆ ಸ್ನೇಹಿತೆ ಅಲ್ಲ. ಐದಾರು ತಿಂಗಳ. ಹಿಂದೆ ಪರಿಚಯ ಆಗಿದೆ. ನನ್ನ ಹೆಸರು ಬಳಸಿಕೊಂಡು ಚಿನ್ನಭಾರಣ ಖರೀದಿ ಮಾಡಿಕೊಂಡಿದ್ದಾಳೆ. ನನಗೂ ಮನಸ್ಸಿಗೆ ನೋವಾಗಿದೆ. ಚಿನ್ನದ ಅಂಗಡಿಯವರು 2 ಕೋಟಿ ರೂ. ಚಿನ್ನಭಾರಣ ಕೊಟ್ಟಿದ್ದಾರೆ, ಅದ್ಹೇಗೆ ಕೊಟ್ರು ಗೊತ್ತಿಲ್ಲ. ನನ್ನ ತರ ಕೆಲ ರಾಜಕಾರಣಿಗಳು ಹೆಸರು, ಫೋಟೋ ತೆಗೆದುಕೊಂಡು ವಂಚನೆ ಮಾಡಿದ್ದಾಳೆ. ಪೊಲೀಸರ ವಿಚಾರಣೆ ವೇಳೆ ಎಲ್ಲಾ ಮಾಹಿತಿ ಕೊಟ್ಟಿದ್ದೀನಿ ಎಂದು ಸ್ಪಷ್ಟಪಡಿಸಿದ್ದಾರೆ.
ದೂರುದಾರ ಸಂಜಯ್ ಭಾಪ್ನಾ ಹೇಳಿದ್ದೇನು?
ವರ್ತೂರು ಪ್ರಕಾಶ್ ಆಪ್ತೆ ಶ್ವೇತಾಗೌಡಳಿಂದ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ದೂರುದಾರ ಸಂಜಯ್ ಭಾಪ್ನಾ ಪ್ರತಿಕ್ರಿಯಿಸಿದ್ದು, ವರ್ತೂರು ಪ್ರಕಾಶ್ ಜೊತೆಗೆ ಆಕೆ ನಮ್ಮ ಅಂಗಡಿಗೆ ಬಂದಿದ್ದರು. ನಮ್ಮ ಬಳಿ ಒಡವೆ ತೆಗೆದುಕೊಂಡ ಬಳಿಕ ಪರಿಚಯವಾಗಿದ್ರು. ಚಿನ್ನ ಮಾರಾಟ ಮಾಡಿ ದುಡ್ಡು ತಂದುಕೊಡುತ್ತೇನೆ ಎಂದಿದ್ದರು. ಮೊದಲು ವ್ಯಾಪಾರ ಮಾಡಿದ್ದ ಹಣ ಕೊಟ್ಟಿದ್ದರು. ವರ್ತೂರು ಪ್ರಕಾಶ್ ಮನೆ ಬಳಿಯೂ ಡೆಲಿವರಿ ಕೊಟ್ಟಿದ್ದೆವು. ಶ್ವೇತಾಗೌಡ 2 ಕೆಜಿ 900 ಗ್ರಾಂ ಚಿನ್ನದ ಹಣವನ್ನು ಕೊಟ್ಟಿಲ್ಲ. ಈ ವಿಚಾರವನ್ನು ನಾನು ವರ್ತೂರು ಪ್ರಕಾಶ್ ಬಳಿ ಹೇಳಿದ್ದೆ. ಆಗ ವರ್ತೂರು ಪ್ರಕಾಶ್ ನಮಗೆ ಗೊತ್ತಿಲ್ಲ ಎಂದು ಹೇಳಿದ್ರು ಎಂದು ಸ್ಪಷ್ಟಪಡಿಸಿದ್ದಾರೆ.