ನಾಡಿನ ಸಮಸ್ತ ಜನತೆಗೆ ,ನಮ್ಮ ಎಲ್ಲಾ ಗ್ರಾಹಕರಿಗೆ,ಜಾಹೀರಾತುದಾರರಿಗೆ "ಕ್ರಿಸ್ಮಸ್" ಹಬ್ಬ ಹಾಗೂ ಹೊಸವರುಷದ ಶುಭಾಶಯಗಳು...
ಕುಂದಾಪುರ: ಕೋಳಿ ಸಾಗಾಟದ ಪಿಕಪ್ ವಾಹನ ಪಲ್ಟಿ; ನೂರಾರು ಕೋಳಿಗಳು ಸಾವು
ಕೋಟ: ಚಾಲಕನ ನಿಯಂತ್ರಣ ತಪ್ಪಿ ಕೋಳಿ ಸಾಗಾಟದ ಪಿಕಪ್ ವಾಹನ ಪಲ್ಟಿಯಾದ ಪರಿಣಾಮ ನೂರಾರು ಕೋಳಿಗಳು ಸಾವನ್ನಪ್ಪಿದ್ದು ಚಾಲಕ ಸಣ್ಣಪುಟ್ಟ ಗಾಯದೊಂದಿಗೆ ಪ್ರಾಣಪಾಯದಿಂದ ಪಾರಾದ ಘಟನೆ ಡಿ. 22 ರಂದು ಭಾನುವಾರ ಮುಂಜಾನೆ ರಾಷ್ಟ್ರೀಯ ಹೆದ್ದಾರಿ-66 ರ ಕೋಟ ಮಣೂರು ರಾಜಲಕ್ಷ್ಮೀ ಸಭಾ ಭವನ ಬಳಿ ನಡೆದಿದೆ.
ಸಾಲಿಗ್ರಾಮದ ಗಿರಿಮುತ್ತು ಸಂಸ್ಥೆಗೆ ಸೇರಿದ ಕೋಳಿಸಾಗಾಟ ವಾಹನವು ಬೈಂದೂರು ಕಡೆಯಿಂದ ಕೋಳಿ ತುಂಬಿಸಿಕೊಂಡು ಸಂತೆಕಟ್ಟೆ ಕಡೆಗೆ ತೆರಳುತ್ತಿತ್ತು ಎನ್ನಲಾಗಿದೆ. ಕೋಟ ಮಣೂರು ಸಮೀಪಿಸುತ್ತಿದ್ದಂತೆ ನಿದ್ದೆ ಮಂಪರಿನಲ್ಲಿದ್ದ ಪಿಕಪ್ ವಾಹನ ಚಾಲಕ ನಿಯಂತ್ರಣ ತಪ್ಪಿ ಸರ್ವಿಸ್ ರಸ್ತೆ ಡಿವೈಡರ್‌ಗೆ ಢಿಕ್ಕಿ ಹೊಡೆದು ಎರಡು ಸುತ್ತು ಪಲ್ಟಿ ಹೊಡೆದು ನಿಂತಿದೆ.
ತಕ್ಷಣವೇ ಕೋಟ ಜೀವನ್ ಮಿತ್ರ ನಾಗರಾಜ್ ಪುತ್ರನ್ ಮತ್ತು ಸ್ಥಳೀಯರು ಸಹಾಯಕ್ಕೆ ಆಗಮಿಸಿ, ಚಾಲಕನನ್ನು ರಕ್ಷಿಸಿ, ಟೋಲ್ ಆಂಬುಲೆನ್ಸ್ ಮೂಲಕ ಬ್ರಹ್ಮಾವರದ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಕೋಟ ಠಾಣೆ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲಿಸಿದ್ದಾರೆ.