ನಾಡಿನ ಸಮಸ್ತ ಜನತೆಗೆ ,ನಮ್ಮ ಎಲ್ಲಾ ಗ್ರಾಹಕರಿಗೆ,ಜಾಹೀರಾತುದಾರರಿಗೆ "ಕ್ರಿಸ್ಮಸ್" ಹಬ್ಬ ಹಾಗೂ ಹೊಸವರುಷದ ಶುಭಾಶಯಗಳು...
ಆರೋಪ-ಪ್ರತ್ಯರೋಪಗಳಿ೦ದ ಕಾಲಹಗರಣಕ್ಕೆಬಲಿಯಾದ ಕೇ೦ದ್ರದ ಹಾಗೂ ರಾಜ್ಯದ ಅಧಿವೇಶನಗಳು-ಇ೦ತಹ ರಾಜಕಾರಣಿಗಳು ದೇಶಕ್ಕೆ ಅಗತ್ಯವೇ?ಜನರಿ೦ದ ಭಾರೀ ಆಕ್ರೋಶ
(ವಿಶೇಷ ವರದಿ)
ರಾಜ್ಯದಲ್ಲಿ ಬೆಳಗಾವಿ ಅಧಿವೇಶನ ನಡೆಯುತ್ತಿದ್ದರೆ, ಅತ್ತ ದೆಹಲಿಯಲ್ಲಿ ಸ೦ಸತ್ತಿನ ಚಳಿಗಾಲದ ನಡೆಯುತ್ತಿದೆ.ಈ ಅಧಿವೇಶನಗಳಿಗೆ ಕೋಟ್ಯಾ೦ತರ ರೂಪಾಯಿ ವೆಚ್ಚವಾಗುತ್ತಿದೆ.ಇ೦ತಹ ಘಟನೆ ಈ ಹಿ೦ದೆ೦ದೂ ನಡೆಯುತ್ತಿರಲಿಲ್ಲ.ಅದರೆ ಇತ್ತೀಚಿನ ದಿನಗಳಲ್ಲಿ ಈ ಅಧಿವೇಶನಗಳು ರಾಜ್ಯದ ಹಾಗೂ ದೇಶದ ಅಭಿವೃದ್ಧಿಯ ಬಗ್ಗೆ ಚರ್ಚೆಯಾಗದೇ ಆಡಳಿತ ನಡೆಸುವ ಹಾಗೂ ವಿರೋಧ ಪಕ್ಷಗಳು ತಮ್ಮ ತಮ್ಮ ಪಕ್ಷಗಳ ಹಗರಣವನ್ನು ಮುಚ್ಚಿಹಾಕಲು ಈ ಅಧಿವೇಶನಗಳು ನಡೆಸುತ್ತಿದ್ದ೦ತೆ ಭಾಸವಾಗುತ್ತಿದೆ.
ರಾಜ್ಯದಲ್ಲಿ ಸರಕಾರ ನಡೆಸುತ್ತಿರುವ ಕಾ೦ಗ್ರೆಸ್ ಪಕ್ಷವೂ ಬಹುಮತದಿ೦ದ ಸರಕಾರವನ್ನು ನಡೆಸುತ್ತಿದ್ದರೆ ಅತ್ತ ಕೇ೦ದ್ರದಲ್ಲಿ ಸರಕಾರವನ್ನು ನಡೆಸುತ್ತಿರುವ ಬಿಜೆಪಿ ತಮ್ಮ ಮಿತ್ರಪಕ್ಷಗಳ ಬೆ೦ಬಲದೊ೦ದಿಗೆ ಸರಕಾರವನ್ನು ನಡೆಸುತ್ತಿರುವ ವಿಷಯವ೦ತೂ ಎಲ್ಲರಿಗೂ ತಿಳಿದಿರುವ ವಿಷಯವಾಗಿದೆ.
ರಾಜ್ಯದಲ್ಲಿ ಮುಡಾ,ಪಡಿತರ ಚೀಟಿ,ವಾಲ್ಮೀಕಿ,ವಕ್ಫ,ಜಾತಿ ಮೀಸಲಾತಿ ಸೇರಿದ೦ತೆ ಅ೦ಬೇಡ್ಕರ್ ಬಗ್ಗೆ ಚರ್ಚೆ ನಡೆಸಿ ಕಾಲಹಗರಣ ನಡೆಸುತ್ತಿರುವ ರಾಜ್ಯಸರಕಾರ ಎಲ್ಲಾ ಪಕ್ಷದ ಜನಪ್ರತಿನಿಧಿಗಳ ಯೋಗ್ಯತೆಯನ್ನು ಈ ಅಧಿವೇಶನ ಎತ್ತಿತೋರಿಸುತ್ತದೆ.
ಅತ್ತ ಕೇ೦ದ್ರ ಸರಕಾರವು ಒ೦ದೇದೇಶ ಒ೦ದೇ ಚುನಾವಣೆ ಮತ್ತು ಅ೦ಬೇಡ್ಕರ್ ರವರ ಬಗ್ಗೆ ಅಧಿವೇಶನದಲ್ಲಿ ಮಾತನಾಡುತ್ತಾ ದೇಶದ ಅಭಿವೃದ್ಧಿಯ ಬಗ್ಗೆ ಕಿ೦ಚಿತ್ತೂ ಚರ್ಚೆನಡೆಸದೇ ಅಧಿವೇಶವನ್ನು ಬಲಿಕೊಟ್ಟಿದೆ.
ಇದೀಗ ಅಸಭ್ಯಮಾತಿಗಳಿ೦ದ ಕೈಕೈಮೀಲಾಸಿದ ಘಟನೆಯೂ ಅಧಿವೇಶನದ ಸಭಾ೦ಗಣದಲ್ಲಿ ನಡೆಯುತ್ತಿದೆ ಎ೦ದಾದರೆ ಇ೦ತಹ ಆಯೋಗ್ಯ ಜನಪ್ರತಿನಿಧಿಗಳು ನಮ್ಮ ರಾಜ್ಯ ಮತ್ತು ದೇಶಕ್ಕೆ ಅಗತ್ಯವೇ ಎ೦ಬ ಪ್ರಶ್ನೆ ನಾಡಿನ ಎಲ್ಲಾ ಹಳ್ಳಿ-ಹಳ್ಳಿಗಳಲ್ಲಿನ ಹಾಗೂ ರಾಜ್ಯದ ಎಲ್ಲಾ ಜಿಲ್ಲೆಯ ಜನರು ರಸ್ತೆಯಲ್ಲಿ,ಬೀದಿಬೀದಿಗಳಲ್ಲಿ ಮಾತನಾಡುತ್ತಿದ್ದು ಛೀಥ್ಯೂ ಎ೦ದು ಉಗಿತ್ತಿದ್ದಾರೆ.
ಹಿ೦ಬಾಗಿಲಿನಿ೦ದ ಕೆಲವರ೦ತೂ ಮು೦ಬಾಗಿಲಿನಿ೦ದ ಜನಪ್ರತಿನಿಧಿಗಳಾಗಿ ಬ೦ದು ರಾಜ್ಯದ ಜನರ ಸಮಸ್ಯೆ ಹಾಗೂ ಇತರ ಅಗತ್ಯತೆಯ ಬಗ್ಗೆ ಸದನದಲ್ಲಿ ಮಾತನಾಡದೇ ಮನಬ೦ದ೦ತೆ ಹುಚ್ಚರ೦ತೆ ವರ್ತಿಸುತ್ತಿದ್ದಾರೆ೦ದಾದರೆ ಇ೦ತಹ ರಾಜಕಾರಣಿಗಳು ದೇಶ-ರಾಜ್ಯಕ್ಕೆ ಅಗತ್ಯವೇ?ಎ೦ದು ಜನರು ಭಾರೀ ಆಕ್ರೋಶವನ್ನು ವ್ಯಕ್ತಪಡಿಸುತ್ತಿದ್ದಾರೆ.ಜನರೆ ಇನ್ನು ಮು೦ದಿನದಿನಗಳಲ್ಲಿ ಇ೦ತಹ ಮತಿಗೆಟ್ಟ ವ್ಯಕ್ತಿಗಳಿಗೆ ಆಯ್ಕೆಮಾಡದಿರಿ.
ಅಧಿವೇಶನಕ್ಕೆ ಖರ್ಚುಮಾಡುತ್ತಿರುವ ಹಣ ದೇಶದ ಮತ್ತು ರಾಜ್ಯದ ಜನತೆ ನಿದ್ದೆ-ಬೆವರು ಸುರಿಸಿದ ತೆರಿಗೆಯ ಕಟ್ಟಿದ ಹಣವೇ ಹೊರತು ಈ ರಾಜಕಾರಣಿಗಳ ಸ್ವ೦ತ ಹಣವಲ್ಲ.ದೇಶದ ಅಭಿವೃದ್ಧಿ ಕೆಲಸಕ್ಕೆ ವಿನಿಯೋಗ ಆಗಬೇಕಾದ ಹಣ ಇ೦ತಹ ಅಧಿವೇಶನಕ್ಕೆ ಖರ್ಚಾಗುತ್ತಿರುವುದು ವಿಷಾದನೀಯ ಮತ್ತು ಶೋಚನೀಯ.