ದ.ಕ. ಜಿಲ್ಲೆಯ ಮೂವರಿಗೆ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ರಾಷ್ಟ್ರೀಯ ಪ್ರಶಸ್ತಿ...ಪ್ರಧಾನ ಮಂತ್ರಿ ಯೋಜನೆಗಳಿಗೆ ಮರುನಾಮಕರಣ ಮಾಡದಂತೆ ರಾಜ್ಯಗಳಿಗೆ ಕೇಂದ್ರ ಸರಕಾರದ ಆಗ್ರಹ...VHP ಕಾರ್ಯಕ್ರಮದಲ್ಲಿ ವಿವಾದಾತ್ಮಕ ಹೇಳಿಕೆ: ಸುಪ್ರೀಂಕೋರ್ಟ್ ಕೊಲಿಜಿಯಂ ಮುಂದೆ ನ್ಯಾ. ಶೇಖರ್ ಯಾದವ್ ಹಾಜರಾಗುವ ಸಾಧ್ಯತೆ
ಸಾಲ-ಬಡ್ಡಿಗಿಂತ ದುಪ್ಪಟ್ಟು ಆಸ್ತಿ ಮುಟ್ಟುಗೋಲು ಹಾಕಿಕೊಂಡಿದ್ದೀರಿ, ನಾನೀಗಲು ಆರ್ಥಿಕ ಅಪರಾಧಿಯೇ: ವಿತ್ತ ಸಚಿವೆ ನಿರ್ಮಲಾಗೆ ಮಲ್ಯ ಪ್ರಶ್ನೆ
ನವದೆಹಲಿ: ಸಾಲ-ಬಡ್ಡಿಗಿಂತ 2 ಪಟ್ಟು ಹೆಚ್ಚಿನ ಆಸ್ತಿ ಮುಟ್ಟುಗೋಲು ಹಾಕಿಕೊಂಡಿದ್ದೀರಿ, ನಾನೀಗಲು ಆರ್ಥಿಕ ಅಪರಾಧಿಯಾಗಲು ಹೇಗೆ ಸಾಧ್ಯ ಎಂದು ಉದ್ಯಮಿ ಹಾಗೂ ಮದ್ಯದ ದೊರೆ ವಿಜಯ್ ಮಲ್ಯ ಅವರು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರಿಗೆ ಪ್ರಶ್ನೆ ಮಾಡಿದ್ದಾರೆ.ಲೋಕಸಭೆಯಲ್ಲಿ ಬ್ಯಾಂಕ್‌ಗೆ ವಂಚಿಸಿ ಪರಾರಿಯಾಗಿರುವ ಶ್ರೀಮಂತ ಉದ್ಯಮಿಗಳ ವಿರುದ್ದ ಕೇಂದ್ರ ಸರ್ಕಾರ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ಆದರೆ, ಜನಸಮಾನ್ಯರ ವಿರುದ್ದ ಕಠಿಣ ಕ್ರಮ ಕೈಗೊಳ್ಳುತ್ತಿದೆ ಎಂಬ ಆರೋಪ ಕೇಳಿ ಬಂದಿತ್ತು. ಮೋದಿ ಸರ್ಕಾರ ಶ್ರೀಮಂತರ ಪರವಾಗಿದೆ ಅನ್ನೋ ಆರೋಪ ಮಾಡಲಾಗಿತ್ತು.ಇದಕ್ಕೆ ಉತ್ತರಿಸಿದ ನಿರ್ಮಲಾ ಸೀತಾರಾಮನ್ ಅವರು, ಯಾರನ್ನೂ ಬಿಡುವ ಪ್ರಶ್ನೆ ಇಲ್ಲ.
ತಪ್ಪು ಮಾಡಿದರೆ ಕಾನೂನು ಪ್ರಕಾರ ಶಿಕ್ಷೆಯಾಗಲಿದೆ ಎಂದು ಹೇಳಿದ್ದರು. ಇದೇ ವೇಳೆ ಮೂವರು ಉದ್ಯಮಿಗಳ ವಂಚನೆ ಪ್ರಕರಣ ಉಲ್ಲೇಖಿಸಿ ನಿರ್ಮಾಲಾ ಸೀತಾರಾಮನ್ ವಶಪಡಿಸಿಕೊಂಡ ಆಸ್ತಿ ಮೌಲ್ಯದ ಮಾಹಿತಿ ನೀಡಿದ್ದರು.ಪರಾರಿಯಾಗಿರುವ ಉದ್ಯಮಿಯ ಸಾಲದ ಒಂದು ಭಾಗವನ್ನು ಪಾವತಿಸಲು 14,131 ಕೋಟಿ ಮೌಲ್ಯದ ಆಸ್ತಿ (ವಿಜಯ್ ಮಲ್ಯಗೆ ಸೇರಿದ ಆಸ್ತಿ) ವಶಪಡಿಸಿಕೊಂಡು ಸಾರ್ವಜನಿಕ ಮತ್ತು ಖಾಸಗಿ ವಲಯದ ಬ್ಯಾಂಕ್‌ಗಳಿಗೆ ಹಸ್ತಾಂತರಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.ಮಲ್ಯ, ಮೆಹುಲ್ ಚೋಕ್ಸಿ ಮತ್ತು ನೀರವ್ ಮೋದಿ ಮೊದಲಾದ ವಾಂಟೆಡ್ ವ್ಯಕ್ತಿಗಳ ಸಾಲವನ್ನು ಮರುಪಾವತಿಸಲು ಜಾರಿ ನಿರ್ದೇಶನಾಲಯವು ಒಟ್ಟು 22,280 ಕೋಟಿ ಮೌಲ್ಯದ ಆಸ್ತಿಯನ್ನು ವಶಕ್ಕೆ ಪಡೆದಿದೆ. ಆರ್ಥಿಕ ಅಪರಾಧಿಗಳ ವಿರುದ್ಧದ ಹೋರಾಟವನ್ನು ಮುಂದುವರಿಸಲು ನಿರ್ಧರಿಸಲಾಗಿದೆ ಎಂದು ಹೇಳಿದ್ದರು.
ನಿರ್ಮಲಾ ಸೀತಾರಾಮನ್ ಅವರ ಈ ಹೇಳಿಕೆ ಸಂಬಂಧ ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಸರಣಿ ಪೋಸ್ಟ್ ಮಾಡಿರುವ ವಿಜಯ್ ಮಲ್ಯಾ ಅವರು, ಸಾಲ-ಬಡ್ಡಿಗಿಂತ 2 ಪಟ್ಟು ಹೆಚ್ಚಿನ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳಲಾಗಿದೆ. ಜಾರಿ ನಿರ್ದೇಶನಾಲಯ ಹಾಗೂ ಬ್ಯಾಂಕ್ ಗಳು ಕಾನೂನುಬದ್ಧವಾಗಿ ಹೇಗೆ ಸಾಲದ ಎರಡು ಪಟ್ಟು ಹಣವನ್ನು ವಸೂಲಿ ಮಾಡಿದೆ? ಇದನ್ನು ಸರ್ಕಾರ ಕಾನೂನು ಬದ್ಧವಾಗಿ ಸಮರ್ಥಿಸಿಕೊಳ್ಳಬೇಕು. ಇಲ್ಲದಿದ್ದರೆ, ಪರಿಹಾರಕ್ಕೆ ನಾನು ಅರ್ಹ. ಇದಕ್ಕಾಗಿ ಕಾನೂನೂ ಹೋರಾಟ ಮುಂದುವರೆಸುತ್ತೇನೆಂದು ಹೇಳಿದ್ದಾರೆ.ಸಾಲ ವಸೂಲಾತಿ ನ್ಯಾಯಮಂಡಳಿ 1200 ಕೋಟಿ ರೂಪಾಯಿ ಬಡ್ಡಿ ಸೇರಿದಂತೆ ಕಿಂಗ್ ಫಿಶರ್ ಏರ್ ಲೈನ್ಸ್ ಸಾಲವನ್ನು 6203 ಕೋಟಿ ರೂಪಾಯಿ ಎಂದು ಅಂದಾಜಿಸಿತ್ತು. ಕಾನೂನು ಜಾರಿ ನಿರ್ದೇಶನಾಲಯದ ಮೂಲಕ ಬ್ಯಾಂಕ್ ಗಳು 14131.60 ಕೋಟಿ ರೂಪಾಯಿ ವಸೂಲಿ ಮಾಡಿಕೊಂಡಿವೆ. ಇಷ್ಟೆಲ್ಲಾ ಆಗಿದ್ದರೂ, ನಾನು ಇನ್ನೂ ಆರ್ಥಿಕ ಅಪರಾಧಿ ಎಂದು ಸಂಸತ್ತಿನಲ್ಲಿ ವಿತ್ತ ಸಚಿವೆ ಘೋಷಣೆ ಮಾಡುತ್ತಾರೆ.
ಇಡಿ ಮತ್ತು ಬ್ಯಾಂಕ್‌ಗಳು ಎರಡು ಪಟ್ಟು ಹೆಚ್ಚು ಸಾಲವನ್ನು ಹೇಗೆ ಸರಿದೂಗಿಸಿಕೊಂಡಿದೆ ಎಂಬುದನ್ನು ಕಾನೂನುಬದ್ಧವಾಗಿ ಸಮರ್ಥಿಸದಿದ್ದರೆ, ನಾನು ಪರಿಹಾರಕ್ಕೆ ಅರ್ಹನಾಗಿರುತ್ತೇನೆ, ಈ ಹೋರಾಟವನ್ನು ನಾನು ಮುಂದುವರಿಸುತ್ತೇನೆ.ಕಿಂಗ್‌ಫಿಶರ್ ಏರ್‌ಲೈನ್ಸ್ ಸಾಲಗಳ ಗ್ಯಾರಂಟಿಯಾಗಿ ನನ್ನ ಬಾಧ್ಯತೆಗಳ ಬಗ್ಗೆ ನಾನು ಹೇಳಿರುವ ಮಾತನ್ನು ಕಾನೂನುಬದ್ಧವಾಗಿ ಪರಿಶೀಲಿಸಬಹುದಾಗಿದೆ. ಆದರೂ ಸಾಲದ ತೀರ್ಪಿನ ಮೇಲೆ ನನ್ನಿಂದ 8000 ಕೋಟಿ ರೂ.ಗೂ ಹೆಚ್ಚು ಹಣವನ್ನು ವಸೂಲಿ ಮಾಡಲಾಗಿದೆ. ನನ್ನನ್ನು ಮುಕ್ತವಾಗಿ ನಿಂದಿಸುವವರು ಸೇರಿದಂತೆ ಯಾರಾದರೂ ಎದ್ದುನಿಂತು ಈ ಘೋರ ಅನ್ಯಾಯವನ್ನು ಪ್ರಶ್ನಿಸುತ್ತಾರೆಯೇ? ಹೆಚ್ಚು ದೂಷಿಸಲ್ಪಟ್ಟ ನನ್ನನ್ನು ಬೆಂಬಲಿಸಲು ಧೈರ್ಯದ ಅಗತ್ಯವಿದೆ. ದುಃಖಕರವೆಂದರೆ ನನಗೆ ವಿಶೇಷವಾಗಿ ನ್ಯಾಯಕ್ಕಾಗಿ ಯಾವುದೇ ಧೈರ್ಯವಿಲ್ಲ.
ಸರ್ಕಾರ ಮತ್ತು ನನ್ನ ಅನೇಕ ಟೀಕಾಕಾರರು ನನಗೆ ಉತ್ತರಿಸಲು ಸಿಬಿಐ ಕ್ರಿಮಿನಲ್ ಪ್ರಕರಣಗಳಿವೆ ಎಂದು ಹೇಳಬಹುದು. ಸಿಬಿಐ ಯಾವ ಕ್ರಿಮಿನಲ್ ಪ್ರಕರಣಗಳನ್ನು ದಾಖಲಿಸಿದೆ? ಅವರಿಂದ ನಾನು ಒಂದೇ ಒಂದು ರೂಪಾಯಿ ಸಾಲ ಪಡೆದಿಲ್ಲ, ಕಳ್ಳತನ ಮಾಡಿಲ್ಲ, ಆದರೆ, ಕೆಎಫ್‌ಎ ಸಾಲದ ಗ್ಯಾರಂಟಿಯಾಗಿ ನಾನು ಸಿಬಿಐನಿಂದ ಐಡಿಬಿಐ ಬ್ಯಾಂಕ್ ಅಧಿಕಾರಿಗಳು ಸೇರಿದಂತೆ ಅನೇಕರು ಸೇರಿ ಐಡಿಬಿಐ ಬ್ಯಾಂಕ್‌ನಿಂದ ರೂ 900 ಕೋಟಿ ಸಾಲವನ್ನು ವಂಚನೆಯಿಂದ ತಮ್ಮ ಕ್ರೆಡಿಟ್ ಸಮಿತಿ ಮತ್ತು ಮಂಡಳಿಯಿಂದ ಅನುಮೋದಿಸಿದ್ದಾರೆ ಎಂದು ಆರೋಪಿಸಿದ್ದಾರೆ. ಇದರ ಸಂಪೂರ್ಣ ಸಾಲ ಮತ್ತು ಬಡ್ಡಿ ಮರುಪಾವತಿ ಆಗಿದೆ. 9 ವರ್ಷಗಳ ನಂತರ ವಂಚನೆ ಮತ್ತು ಹಣದ ದುರುಪಯೋಗದ ಯಾವುದೇ ನಿರ್ಣಾಯಕ ಪುರಾವೆಗಳು ಯಾಕೆ ಯಾರ ಬಳಿಯೂ ಇಲ್ಲ ಎಂದು ಪ್ರಶ್ನೆ ಮಾಡಿದ್ದಾರೆ.