ನಾಡಿನ ಸಮಸ್ತ ಜನತೆಗೆ ,ನಮ್ಮ ಎಲ್ಲಾ ಗ್ರಾಹಕರಿಗೆ,ಜಾಹೀರಾತುದಾರರಿಗೆ "ಕ್ರಿಸ್ಮಸ್" ಹಬ್ಬ ಹಾಗೂ ಹೊಸವರುಷದ ಶುಭಾಶಯಗಳು...

ವೈಟ್​ ಬೋರ್ಡ್​​ ಟ್ರಾವೆಲ್ಸ್​​ ಮಾಲೀಕರಿಗೆ ಸಾರಿಗೆ ಇಲಾಖೆ ಶಾಕ್​: ಐಷಾರಾಮಿ 25 ಕಾರುಗಳು ಸೀಜ್​

ಬೆಂಗಳೂರು: ಡಿ.18: ಟ್ರಾವೆಲ್ಸ್ ಮಾಲೀಕರು ಐಷಾರಾಮಿ ವೈಟ್ ಬೋರ್ಡ್ ಕಾರುಗಳನ್ನು   ಸೆಲೆಬ್ರಿಟಿಗಳಿಗೆ ಬಾಡಿಗೆಗೆ ನೀಡುತ್ತಿದ್ದಾರೆ. ಇದರಿಂದ ಸಾರಿಗೆ ಇಲಾಖೆಗೆ ಕೋಟ್ಯಂತರ ರೂ. ನಷ್ಟ ಉಂಟಾಗುತ್ತಿದೆ. ಹಾಗಾಗಿ ಸಾರಿಗೆ ಇಲಾಖೆ ಆ ಕಾರುಗಳನ್ನು ಸೀಜ್ ಮಾಡುವ ಮೂಲಕ ಟ್ರಾವೆಲ್ಸ್ ಮಾಲೀಕರಿಗೆ ಶಾಕ್​ ನೀಡಿದೆ.

ಎಲ್ಲೆಲ್ಲಿ ಕಾರ್ಯಾಚರಣೆ?

ಯಶವಂತಪುರ, ರಾಜಾಜಿ ನಗರ, ಮತ್ತಿಕೆರೆ, ಪೀಣ್ಯ, ಮಲ್ಲೇಶ್ವರಂ ಸೇರಿದಂತೆ ಅಕ್ಕಪಕ್ಕದ ಏರಿಯಾಗಳಲ್ಲಿ ಪ್ರತಿ ತಂಡದಲ್ಲೂ ಸಾರಿಗೆ ಇಲಾಖೆಯ ಇನ್ಸ್‌ಪೆಕ್ಟರ್​​​ ಒಳಗೊಂಡಂತೆ ಒಟ್ಟು 9 ತಂಡಗಳಿಂದ ಕಾರ್ಯಾಚರಣೆ ಮಾಡಲಾಗಿದೆ.

ಟ್ರಾವೆಲ್ಸ್ ಮಾಲೀಕರು ಔಡಿ, ಬಿಎಂಡಬ್ಲೂ, ಬೆನ್ಜ್, ವೋಲ್ವೋ ಸೇರಿದಂತೆ ಸಾಕಷ್ಟು ಐಷಾರಾಮಿ ವೈಟ್ ಬೋರ್ಡ್ ಕಾರುಗಳನ್ನು ಸೆಲೆಬ್ರಿಟಿಗಳಿಗೆ ಯೆಲ್ಲೋ ಬೋರ್ಡ್ ರೀತಿಯಲ್ಲಿ ಬಾಡಿಗೆಗೆ ನೀಡುತ್ತಿದ್ದಾರೆ. ನಿಯಮದ ಪ್ರಕಾರ ವೈಟ್ ಬೋರ್ಡ್ ಕಾರು ಇರುವುದು ಸ್ವಂತ ಬಳಕೆಗೆ. ಆದರೆ, ವೈಟ್ ಬೋರ್ಡ್ ಐಷಾರಾಮಿ ಕಾರುಗಳನ್ನು ದೊಡ್ಡ ಸಿನಿಮಾ ನಟರು ಸೇರಿದಂತೆ ಸೆಲೆಬ್ರಿಟಿಗಳಿಗೆ ಬಾಡಿಗೆ ನೀಡಲು ಬಳಕೆ ಮಾಡಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ರಾಜ್ಯ ಸಾರಿಗೆ ಇಲಾಖೆಗೆ ಕೋಟ್ಯಂತರ ರೂ. ನಷ್ಟ ಉಂಟಾಗುತ್ತಿದೆ. ಹಾಗಾಗಿ ಇಂದು ಆ ಕಾರುಗಳನ್ನು ಸೀಜ್ ಮಾಡಲಾಗಿದೆ.

ಇನ್ನು ಈ ವೇಳೆ ತೆರಿಗೆ ಕಟ್ಟದ, ವೈಟ್ ಬೋರ್ಡ್​​ನಲ್ಲಿ ಬೇರೆ ಬೇರೆ ರಾಜ್ಯದ ವಾಹನಗಳು ಅನಧಿಕೃತವಾಗಿ ಬೆಂಗಳೂರಿನಲ್ಲಿ ಸಂಚಾರ ‌ಮಾಡುತ್ತಿರುವ ಮತ್ತು ಟ್ರಾವೆಲ್ಸ್ ನಡೆಸುತ್ತಿರುವ ವೈಟ್ ಬೋರ್ಡ್ ಕಾರುಗಳನ್ನು ಸೀಜ್ ಮಾಡಿದ್ದಾರೆ.

No Comments

Leave A Comment