ದ.ಕ. ಜಿಲ್ಲೆಯ ಮೂವರಿಗೆ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ರಾಷ್ಟ್ರೀಯ ಪ್ರಶಸ್ತಿ...ಪ್ರಧಾನ ಮಂತ್ರಿ ಯೋಜನೆಗಳಿಗೆ ಮರುನಾಮಕರಣ ಮಾಡದಂತೆ ರಾಜ್ಯಗಳಿಗೆ ಕೇಂದ್ರ ಸರಕಾರದ ಆಗ್ರಹ...VHP ಕಾರ್ಯಕ್ರಮದಲ್ಲಿ ವಿವಾದಾತ್ಮಕ ಹೇಳಿಕೆ: ಸುಪ್ರೀಂಕೋರ್ಟ್ ಕೊಲಿಜಿಯಂ ಮುಂದೆ ನ್ಯಾ. ಶೇಖರ್ ಯಾದವ್ ಹಾಜರಾಗುವ ಸಾಧ್ಯತೆ
ಅತ್ತ ಅಧಿವೇಶನದಲ್ಲಿ ಚರ್ಚೆ ನಡೆಯುತ್ತಿರುವಾಗಲೇ ಇತ್ತ ಕಲಬುರಗಿಯಲ್ಲಿ ಮತ್ತೋರ್ವ ಬಾಣಂತಿ ಸಾವು
ಕಲಬುರಗಿ, (ಡಿಸೆಂಬರ್ 17): ಕರ್ನಾಟಕದಲ್ಲಿ ಬಾಣಂತಿಯರ ಸಾವು ಪ್ರಕರಣ ತೀವ್ರ ಸ್ವರೂಪ ಪಡೆದುಕೊಂಡಿದೆ. ರಾಯಚೂರು, ಬಳ್ಳಾರಿ ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ಹೆಚ್ಚಾಗಿ ಬಾಣಂತಿಯರ ಸಾವು ಪ್ರಕರಣ ಬೆಳಕಿಗೆ ಬಂದಿದ್ದು, ಈ ಸಂಬಂಧ ಕೆಲ ಅನುಮಾನಗಳ ಉದ್ಭವಿಸಿವೆ. ಹೀಗಾಗಿ ಸರ್ಕಾರ ತನಿಖೆ ನಡೆಸುತ್ತಿದೆ. ಇನ್ನು ಬೆಳಗಾವಿಯಲ್ಲಿ ನಡೆಯುತ್ತಿರುವ ಚಳಿಗಾಲದ ಅಧಿವೇಶನದಲ್ಲೂ ಈ ಪ್ರಕರಣ ಪ್ರತಿಧ್ವನಿಸಿದೆ. ಇದರ ಮಧ್ಯಯೇ ಇತ್ತ ಕಲಬುರಗಿಯಲ್ಲಿ ಮತ್ತೋರ್ವ ಬಾಣಂತಿ ಸಾವಾಗಿದೆ. ಕಲಬುರಗಿ ಜಿಲ್ಲೆಯ ಆಳಂದ ತಾಲೂಕಿನ ಮಟಕಿ ಗ್ರಾಮದ ನಿವಾಸಿ ಭಾಗ್ಯಶ್ರೀ(22) ಮಗುವಿಗೆ ಜನ್ಮ ನೀಡಿ ಬಳಿಕ ಕೊನೆಯುಸಿರೆಳೆದಿದ್ದಾರೆ.
ಆಳಂದ ತಾಲೂಕಿನ ಮಟಕಿ ಗ್ರಾಮದ ನಿವಾಸಿ ಭಾಗ್ಯಶ್ರೀ(22) ಅವರು ಹೆರಿಗೆಗಾಗಿ ನಿನ್ನೆ (ಡಿಸೆಂಬರ್ 17) ಮಧ್ಯಾಹ್ನ ಅಫಜಲಪುರ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದು, ಇಂದು(ಡಿಸೆಂಬರ್ 17) ಬೆಳಗ್ಗೆ 8 ಗಂಟೆಗೆ ಗಂಡು ಮಗುವಿಗೆ ಜನ್ಮನೀಡಿದ್ದಾಳೆ. ನಂತರ ಭಾಗ್ಯಶ್ರೀ ಆರೋಗ್ಯದಲ್ಲಿ ಏರುಪೇರಾಗಿದೆ. ಹೆರಿಗೆ ನಂತರ ರಕ್ತದೊತ್ತಡ ಕಡಿಮೆಯಿದೆ ಎಂದು ಅಫಜಲಪುರ ಸರ್ಕಾರಿ ಆಸ್ಪತ್ರೆ ವೈದ್ಯರು, ಜಿಮ್ಸ್ಗೆ ರವಾನಿಸಿದ್ದಾರೆ. ಆದ್ರೆ, ಚಿಕಿತ್ಸೆ ಫಲಕಾರಿಯಾಗದೇ ಭಾಗ್ಯಶ್ರೀ ಗುಲಬರ್ಗಾ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾಳೆ. ಇದರಿಂದ ಕುಟುಂಬಸ್ಥರು ಆಕ್ರೋಶಗೊಂಡಿದ್ದು, ವೈದ್ಯರ ನಿರ್ಲಕ್ಷ್ಯದಿಂದ ಈ ಸಾವವಾಗಿದೆ ಎಂದು ಆರೋಪಿಸಿದ್ದಾರೆ.
ಇಂದು ಮುಂಜಾನೆ ಅಫಜಲಪುರದ ತಾಲೂಕು ಆಸ್ಪತ್ರೆಯಲ್ಲಿ ಭಾಗ್ಯಶ್ರೀಗೆ ಹೆರಿಗೆಯಾಗಿತ್ತು. ಭಾಗ್ಯಶ್ರೀಗೆ ಇದು ಎರಡನೇ ಹೆರಿಗೆ. ಅತಿಯಾದ ರಕ್ತಸ್ರಾವ, ಲೋ ಬಿಪಿಯಾಗಿತ್ತು. ಹೀಗಾಗಿ ಜಿಮ್ಸ್ ಆಸ್ಪತ್ರೆಗೆ ರವಾನಿಸಲಾಗಿತ್ತು. ಜಿಮ್ಸ್ ಗೆ ಕರೆದುಕೊಂಡು ಬಂದುಅಡ್ಮಿಟ್ ಮಾಡಲಾಗಿದ್ದು, ಎರಡು ಯುನಿಟ್ ರಕ್ತ ಸಹ ಏರಿಸಲಾಗಿದೆ. ಆದರೂ ಲೋ ಬಿಪಿಯಿಂದ ಮೃತಟ್ಟಿದ್ದಾಳೆ ಎಂದು ತಿಳಿದುಬಂದಿದೆ. ವೈದ್ಯರ ನಿರ್ಲಕ್ಷ್ಯವೇ ಬಾಣಂತಿ ಸಾವಿಗೆ ಕಾರಣ ಎಂದು ಕುಟುಂಬಸ್ಥರು ಆರೋಪಿಸಿದ್ದು, ಜಿಮ್ಸ್ ಆಸ್ಪತ್ರೆ ವೈದ್ಯರನ್ನ ತರಾಟೆಗೆ ತೆಗೆದುಕೊಂಡಿದ್ದಾರೆ.
ಅಧಿವೇಶನದಲ್ಲೂ ಪ್ರತಿಧ್ವನಿಸಿದ ಬಾಣಂತಿಯರ ಸಾವು ಪ್ರಕರಣ
ಬಳ್ಳಾರಿ ಜಿಲ್ಲಾ ಆಸ್ಪತ್ರೆಯಲ್ಲಿ (BIMS) ಬಾಣಂತಿಯ ಸಾವು ವಿಚಾರವಾಗಿ ಪ್ರಸ್ತು ಬೆಳಗಾವಿಯ ಸುವರ್ಣ ಸೌಧದಲ್ಲಿ ನಡೆಯಿತ್ತಿರುವ ಚಳಿಗಾಲದ ಅಧಿವೇಶನದಲ್ಲೂ ಪ್ರತಿಧ್ವನಿಸಿದೆ. ಈ ವಿಚಾರವಾಗಿ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಪರಿಷತ್ನಲ್ಲಿ ಉತ್ತರ ನೀಡಿದ್ದು, ನವೆಂಬರ್ 11 ರಿಂದ ಬಿಮ್ಸ್ ಆಸ್ಪತ್ರೆಯಲ್ಲಿ ಬಾಣಂತಿಯರ ಸಾವಾಗಿದೆ ಎಂದು ಹೇಳಿದ್ದಾರೆ.
ನವೆಂಬರ್ 9, 10 ಮತ್ತು 11 ಮೂರು ದಿನಗಳಲ್ಲಿ 34 ಸಿಸೇರಿಯನ್ ಶಸ್ತ್ರಚಿಕಿತ್ಸೆಗಳಾಗಿವೆ. ಶಸ್ತ್ರಚಿಕಿತ್ಸೆ ಬಳಿಕ ಏಳು ಮಂದಿ ಬಾಣಂತಿಯರಿಗೆ ತೊಂದರೆಯಾಗಿದ್ದು, ಇದರಲ್ಲಿ ಐವರು ಮೃತಪಟ್ಟಿದ್ದಾರೆ. ಘಟನೆ ವರದಿಯಾದ ಕೂಡಲೇ ನುರಿತ ವೈದ್ಯರ ತಂಡವನ್ನು ರಚನೆ ಮಾಡಿ, ತನಿಖೆ ನಡೆಸಲಾಯಿತು. ಐವಿ ರಿಂಗರ್ ಲ್ಯಾಕ್ಟೇಟ್ ದ್ರಾವಣದ 1 ಹೊಸ ಬ್ಯಾಚ್ ಅನ್ನು ನವೆಂಬರ್ 9 ರಂದು ಬಳಸಲಾಗಿದೆ. ಇದರಿಂದ ತೊಂದರೆಯಾಗಿರಬಹುದು ಎಂದು ವೈದ್ಯರ ತಂಡ ಹೆಚ್ಚು ಸಂಶಯವನ್ನು ವ್ಯಕ್ತಪಡಿಸಿದರು ಎಂದು ತಿಳಿಸಿದರು