ಜನವರಿ 16ರ ಮಧ್ಯರಾತ್ರೆಯಿ೦ದ 17ರ ಮಧ್ಯರಾತ್ರೆಯವರೆಗೆ ಜಿಲ್ಲೆಯಲ್ಲಿ ಮಧ್ಯ ಮಾರಾಟ ಬ೦ದ್ ಮಾಡುವ೦ತೆ ಶೀರೂರುಮಠದ ಭಕ್ತರು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಎಸ್ಪಿ,ಮತ್ತು ಅಬಕಾರಿ ಜಿಲ್ಲಾಧಿಕಾರಿಯವರಲ್ಲಿ ವಿನ೦ತಿಸಿಕೊ೦ಡಿದ್ದಾರೆ...

ಮತ್ತೆ ಸೈಲೆಂಟ್​, ವೈಲೆಂಟ್​ ಆಟ ಮುಂದುವರಿಸಿದ ಯತ್ನಾಳ್ ಟೀಂ: ಬೆಳಗಾವಿಯಲ್ಲಿ ರೆಬೆಲ್ಸ್ ಮಹತ್ವದ ಸಭೆ

ಬೆಳಗಾವಿ, (ಡಿಸೆಂಬರ್ 17): ಕರ್ನಾಟಕ ಬಿಜೆಪಿಯಲ್ಲಿನ ಬಣ ರಾಜಕೀಯ ಮುಂದುವರಿದಿದೆ. ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ವಿರುದ್ಧ ಬಸನಗೌಡ ಪಾಟೀಲ್ ಯತ್ನಾಳ್ ಟೀಂ ಸೈಲೆಂಟ್​, ವೈಲೆಂಟ್​ ಆಟ ಆಡುತ್ತಲೇ ಇದೆ. ಹೈಕಮಾಂಡ್​ ಎಚ್ಚರಿಕೆ ಕೊಟ್ಟರೂ ಕ್ಯಾರೇ ಎನ್ನದ ಯತ್ನಾಳ್ ಟೀಂ, ತಮ್ಮ ಬಣ ರಾಜಕೀಯ ಮುಂದುವರಿಸಿದೆ. ಹೌದು,ಬಿಜೆಪಿ ರೆಬೆಲ್ ಟೀಮ್ ಮತ್ತೆ ಬೆಳಗಾವಿಯಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ದು, ವಕ್ಫ್ ವಿರುದ್ಧ 2ನೇ ಹಂತದ ಹೋರಾಟದ ಬಗ್ಗೆ ಮಹತ್ವ ಚರ್ಚೆ ನಡೆಸಿದೆ.

ಈ ಬಗ್ಗೆ ಸ್ವತಃ ಯತ್ನಾಳ್ ಬಣದ ಸದಸ್ಯ ರಮೇಶ್ ಜಾರಕಿಹೊಳಿ ಮಾಹಿತಿ ನೀಡಿದ್ದು, ಎರಡನೇ ಹಂತದ ಹೋರಾಟವನ್ನು ಡಿಸೆಂಬರ್ 26 ಮತ್ತು 27ರಂದು ಮಾಡಬೇಕೆಂದುಕೊಂಡಿದ್ದೇವೆ ಎಂದು ಸ್ಪಷ್ಟಪಡಿಸಿದ್ದಾರೆ. ಈ ಮೂಲಕ ಪಕ್ಷದೊಳಗೆ ಇನ್ನೂ ಯಾವುದು ಸರಿ ಹೋಗಿಲ್ಲ ಎನ್ನುವುದಕ್ಕೆ ಇದು ಕೂಡ ಸಾಕ್ಷಿಯಾಗಿದೆ.

ಸಭೆ ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿ ರಮೇಶ್ ಜಾರಕಿಹೊಳಿ, ಎಲ್ಲರು ಊಟಕ್ಕೆ ಸೇರಿದ್ದು, ಎರಡನೇ ಹಂತದ ವಕ್ಫ್ ವಿರುದ್ಧ ಹೋರಾಟದ ಬಗ್ಗೆ ಚರ್ಚೆ ಮಾಡಿದ್ದೇವೆ. ಡಿಸೆಂಬರ್ 26, 27ರಂದು ಎರಡನೇ ಹಂತದ ಹೋರಾಟದ ಬಗ್ಗೆ ಚರ್ಚೆಯಾಗಿದೆ. ಜನರ ಸಮಸ್ಯೆಗಳ ಅಭಿಪ್ರಾಯ ಸಂಗ್ರಹಕ್ಕೆ ರಾಜ್ಯಾದ್ಯಂತ ಹೋರಾಟ ನಡೆಸುತ್ತಿದ್ದೇವೆ . ಮೊದಲ ಹಂತದ ಹೋರಾಟದ ಬಗ್ಗೆ ಜೆಪಿಸಿ ಸಮಿತಿಗೂ ವರದಿ ನೀಡಿದ್ದೇವೆ. ನಮ್ಮ ಹೋರಾಟ ಯಾರ ವಿರುದ್ಧವೂ ಇಲ್ಲ, ಪರವೂ ಇಲ್ಲ. ಶೋಕಾಸ್ ನೋಟಿಸ್​ಗೆ ಯತ್ನಾಳ್ ಉತ್ತರ ಕೊಟ್ಟಿದ್ದಾರೆ.ಎಂದು ಸ್ಪಷ್ಟಪಡಿಸಿದರು.

ವಿಜಯೇಂದ್ರನ ಬಿಎಸ್​ವೈ ಮಗನಾಗಿ ನೋಡಬಾರದು

ವಿಜಯೇಂದ್ರ ಬಣ ಸಭೆ ಮಾಡಿರುವ ಬಗ್ಗೆ ಪ್ರತಿಕ್ರಿಯಿಸಿದ ಜಾರಕಿಹೊಳಿ, ಆ ಹೋರಾಟದಲ್ಲಿ ಇರುವವರ ಫೋಟೊಗಳನ್ನ ನೋಡಿ. 12 ಜನರೂ ಮಾಜಿ ಶಾಸಕರು ಇದ್ದಾರೆ. ಅಧ್ಯಕ್ಷರಿದ್ದಾರೆ ಎಂಬ ಕಾರಣಕ್ಕೆ ಅವರೆಲ್ಲ ಹೋಗಿದ್ದಾರೆ. ಅಧ್ಯಕರು ಹೋರಾಟಕ್ಕೆ ಹೋಗಿ ಅಂದಿದ್ದಕ್ಕೆ ಹೋಗಿದ್ದಾರೆ. ಯಡಿಯೂರಪ್ಪರ ಮೇಲೆ ನಮಗೆ ಬಹಳ ಗೌರವವಿದೆ. ಯಡಿಯೂರಪ್ಪರು ಸೈಕಲ್​ನಲ್ಲಿ ಸುತ್ತಿ ಪಕ್ಷ ಕಟ್ಟಿದ್ದಾರೆ. ಯಡಿಯೂರಪ್ಪ ಅವರೇ ಫೋನ್ ಮಾಡಿ ಹೇಳ್ತಿದ್ದಾರೆ. ಬಿ.ಎಸ್​.ಯಡಿಯೂರಪ್ಪನವರು ರಾಷ್ಟ್ರೀಯ ನಾಯಕರು. ವಿಜಯೇಂದ್ರ ಪಕ್ಷದಲ್ಲಿ ಮೊದಲಿಗ ಅಲ್ಲ. ವಿಜಯೇಂದ್ರ‌ರನ್ನ ಯಡಿಯೂರಪ್ಪ ಮಗ ಅಂತ ನೋಡಬಾರದು. ವಿಜಯೇಂದ್ರ‌ ಪಕ್ಷದ ರಾಜ್ಯಾಧ್ಯಕ್ಷ ಎಂದು ನೋಡಬೇಕು ಎಂದರು.

ವಿಜಯೇಂದ್ರ ಆಯೋಜಿಸಿದ್ದ ಔತಣಕೂಟಕ್ಕೆ ರೆಬೆಲ್ ಟೀಂ ಗೈರು

ನಿನ್ನೆ(ಡಿಸೆಂಬರ್ 17) ರಾತ್ರಿ ಬೆಳಗಾವಿ ಹೊರವಲಯದ ಹೋಟೆಲ್​ನಲ್ಲಿ ಬಿವೈ ವಿಜಯೇಂದ್ರ ಪಕ್ಷದ ಶಾಸಕರು, ಎಂಎಲ್​​ಸಿಗಳಿಗೆ ಡಿನ್ನರ್​ ವ್ಯವಸ್ಥೆ ಮಾಡಿದ್ದರು. ಕಲಾಪದ ನಡುವೆಯೂ ಒಬ್ಬೊಬ್ಬರಾಗಿ ಭೋಜನ ಕೂಟಕ್ಕೆ ಆಗಮಿಸಿದ್ದು ಉಂಟು. ಆದ್ರೆ ಯತ್ನಾಳ್, ರಮೇಶ್​ ಜಾರಕಿಹೊಳಿ ಸೇರಿ ಹಲವು ನಾಯಕರು ಡಿನ್ನರ್​ಗೆ ಬರಲೇ ಇಲ್ಲ. ಮೇಲ್ನೋಟಕ್ಕೆ ಎಲ್ಲವೂ ಸರಿ ಇದೆ ಎಂದು ಬಿಜೆಪಿ ನಾಯಕರು ಬಹಿರಂಗವಾಗಿ ಹೇಳಿಕೆ ಕೊಡುತ್ತಿದ್ದರೂ ಸಹ ಪಕ್ಷದೊಳಗೆ ಇನ್ನೂ ಯಾವುದು ಸರಿ ಹೋಗಿಲ್ಲ ಎನ್ನುವುದಕ್ಕೆ ಇದು ಕೂಡ ಸಾಕ್ಷಿ ಆಗಿದೆ.

ಈ ಬೆಳವಣಿಗೆ ನಡುವೆ ಬಿಎಸ್​ವೈ, ಬಿವೈವಿ ವಿರುದ್ಧ ಸಮರ ಸಾರಿದ ಯತ್ನಾಳ್​, ನಾನು, ರಮೇಶ್​ ಜಾರಕಿಹೊಳಿ ಯಾವುದಕ್ಕೂ ಹೋಗೋದಿಲ್ಲ, ಇಲ್ಲಿ ಕರೆಯುತ್ತಾರೆ, ಯಡಿಯೂರಪ್ಪ ಮತ್ತು ವಿಜಯೇಂದ್ರ ಚೇಲಾಗಳನ್ನ ಬಿಟ್ಟು ಮಾನಿಟರ್ ಮಾಡ್ತಾರೆ ಎಂದು ಮತ್ತೆ ಆಕ್ರೋಶ ಹೊರಹಾಕಿದ್ದಾರೆ.

No Comments

Leave A Comment