ಉಡುಪಿಯ ತೆ೦ಕಪೇಟೆಯ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ಭಜನಾ ಶತಮಾನೋತ್ತರ ರಜತ ಮಹೋತ್ಸವದ ಅ೦ಗವಾಗಿ ಜನವರಿ 29ಬುಧವಾರದಿ೦ದ ಜೂನ್ 3ರ ತನಕ 125ದಿನಗಳ ಕಾಲ ನಿರ೦ತರ ಅಹೋರಾತ್ರಿ ಭಜನಾ ಭಜನಾ ಕಾರ್ಯಕ್ರಮವನ್ನು ಬುಧವಾರದ೦ದು ಕಾಶೀ ಮಠಾಧೀಶರಾದ ಶ್ರೀಮದ್ ಶ್ರೀಸ೦ಯಮೀ೦ದ್ರ ತೀರ್ಥಶ್ರೀಪಾದರು ಅದ್ದೂರಿ ಚಾಲನೆ ನೀಡಿದರು......
ಉಡುಪಿಯ ತೆ೦ಕಪೇಟೆಯ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ಭಜನಾ ಶತಮಾನೋತ್ತರ ರಜತ ಮಹೋತ್ಸವದ ಅ೦ಗವಾಗಿ ಜನವರಿ 29ಬುಧವಾರದಿ೦ದ ಜೂನ್ 3ರ ತನಕ 125ದಿನಗಳ ಕಾಲ ನಿರ೦ತರ ಅಹೋರಾತ್ರಿ ಭಜನಾ ಭಜನಾ ಕಾರ್ಯಕ್ರಮವನ್ನು ಬುಧವಾರದ೦ದು ಕಾಶೀ ಮಠಾಧೀಶರಾದ ಶ್ರೀಮದ್ ಶ್ರೀಸ೦ಯಮೀ೦ದ್ರ ತೀರ್ಥಶ್ರೀಪಾದರು ಅದ್ದೂರಿ ಚಾಲನೆ ನೀಡಿದರು......

ಬೈಲೂರು ಶ್ರೀಮಹಿಷಮರ್ದಿನಿ ದೇವಸ್ಥಾನದಲ್ಲಿ ವೈಭವದ ಶತಚಂಡಿಕಾಯಾಗ ಸಂಪನ್ನ

ಉಡುಪಿ:ಬೈಲೂರು ಶ್ರೀ ಮಹಿಷಮರ್ದಿನಿ ದೇವಸ್ಥಾನದಲ್ಲಿ ಡಿ.14ರ ಶನಿವಾರದ೦ದು ಶ್ರೀದೇವಿಯ ಸನ್ನಿಧಿಯಲ್ಲಿ ಪ್ರಥಮ ಬಾರಿಗೆ ನಡೆದ ವೈಭವದ ಶತಚಂಡಿಕಾಯಾಗ ಸಂಪನ್ನ ಗೊಂಡಿತ್ತು.

ಮುಂಜಾನೆ 6 ರಿಂದ ಸಮೂಹಿಕ ದೇವತಾ ಪ್ರಾರ್ಥನೆ, ಸಂಕಲ್ಪ ಪೂಜೆ ಯೊಂದಿಗೆ ಧಾರ್ಮಿಕ ಪೂಜಾ ವಿಧಾನಗಳನ್ನು ದೇವಳದ ತಂತ್ರಿಗಳಾದ ಕೆ.ಸ್. ಕೃಷ್ಣಮೂರ್ತಿ, ರಮಣ ತಂತ್ರಿ ಗಳು ಮಾರ್ಗದರ್ಶನದಲ್ಲಿ ನೂರಾರು ವೈದಿಕರು ನೆಡೆಸಿಕೊಟ್ಟರು.

ಶತಚಂಡಿಕಾಯಾಗದ ಸೇವಾ ಕತೃಗಳಾದ ನೂರಾರು ದಂಪತಿಗಳು ಪೂಜೆಯಲ್ಲಿ ಪಾಲ್ಗೊಂಡರು ನೂತನವಾಗಿ ನಿರ್ಮಿಸಿದ ಬ್ರಹತ್ ಹೋಮ ಕುಂಡದ ಯಜ್ಞ ಮಂಟಪದಲ್ಲಿ ಶತ ಚಂಡಿಕಾ ಯಾಗದ ಪೂರ್ಣಾಹುತಿಯಲ್ಲಿ ಸಮಿತಿ ಅಧ್ಯಕ್ಷ ಮಟ್ಟಾರ್ ರತ್ನಾಕರ್ ಹೆಗ್ಡೆ ದಂಪತಿ,ದೇವಳದ ಮೊಕ್ತೇಸರ ಮುದ್ದಣ್ಣ ಶೆಟ್ಟಿ ದಂಪತಿ, ಪವಿತ್ರಪಾಣಿ ಶ್ರೀನಿವಾಸ ಆಚಾರ್ಯ ದಂಪತಿ,ಆರ್ಥಿಕ ಸಮಿತಿ ಸಂಚಾಲಕ ರಮೇಶ್ ಶೆಟ್ಟಿ ದಂಪತಿಗಳು ಯಾಗದ ಪೂಜೆಯಲ್ಲಿ ಸಹಕರಿಸಿದರು.

ಶ್ರೀ ದೇವಿಗೆ ವಿಶೇಷ ಅಲಂಕಾರದೊ೦ದಿಗೆ ಸಂಪೂರ್ಣ ದೇವಾಲಯವನ್ನು ವಿಶೇಷ ಹೂಗಳಿಂದ ಅಲಂಕಾರ ಮಾಡಲಾಗಿತ್ತು. ಚಂಡಿಕಾಯಾಗದ ಪೂರ್ಣಾಹುತಿಯ ಬಳಿಕ ಶ್ರೀದೇವಿಯ ಸಹಸ್ರ ನಾಮಾವಳಿ ಪಠಣೆ, ಸಮೂಹಿಕ ಕುಂಕುಮ ಅರ್ಚನೆ,ಮಹಾಪೂಜೆ, ಪಲ್ಲಪೂಜೆ, ಸುವಾಸಿನೀ ಆರಾಧನೆ, ದಂಪತಿ ಪೂಜೆ, ಕನ್ನಿಕಾ ಪೂಜೆ ನೆಡೆಯಿತು.

ಸಾರ್ವಜನಿಕ ಮಹಾ ಅನ್ನಸಂತರ್ಪಣೆಯಲ್ಲಿ ಸುಮಾರು 15 ಸಾವಿರಕ್ಕೂ ಹೆಚ್ಚಿನ ಭಕ್ತರೂ ಶ್ರೀದೇವರ ಭೋಜನ ಪ್ರಸಾದ ಸ್ವೀಕರಿಸಿದರು.

ಸಮಾರಂಭದಲ್ಲಿ ಶಾಸಕ ಯಶಪಾಲ್ ಸುವರ್ಣ, ನಗರ ಸಭೆಯ ಅಧ್ಯಕ್ಷ ಪ್ರಭಾಕರ್ ಪೂಜಾರಿ, ಶತ ಚಂಡಿಕಾಯಾಗದ ಹೊರೆಕಾಣಿಕೆ ಉಸ್ತುವಾರಿ ನವೀನ್ ಭಂಡಾರಿ , ಕಾರ್ಯದರ್ಶಿ ನಾರಾಯಣ ದಾಸ್ ಉಡುಪ , ಕೋಶಾಧಿಕಾರಿ ಸುದರ್ಶನ್ ಶೇರಿಗಾರ್ , ಅರ್ಚಕ ವರದರಾಜ್ ಭಟ್, ಮುಕ್ತೇಸರಾದ ರಾಜಶೇಖರ್ ಭಟ್ , ಮೋಹನ್ ಆಚಾರ್ಯ , ದುರ್ಗಾಪ್ರಸಾದ್ , ಭಾರತಿ ಜಯರಾಮ ಆಚಾರ್ , ಪ್ರೇಮನಾಥ್ , ಸುರೇಶ ಶೆಟ್ಟಿ , ಸುಭಾಸ್ ಭಂಡಾರಿ , ಅರುಣ್ ಶೆಟ್ಟಿಗಾರ್ , ಶಾಂತ ಶೇರಿಗಾರ್ , ಪ್ರವೀಣ್ ಕುಮಾರ್ , ಹರೀಶ್ ಸುವರ್ಣ , ನಗರ ಸಭೆ ಸದಸ್ಯ ಕೃಷ್ಣರಾವ್ ಕೊಡಂಚ , ಕಿರಣ್ ಕುಮಾರ್ ಬೈಲೂರು ,ಸುಬ್ರಹ್ಮಣ್ಯ ತಂತ್ರಿ ಹಾಗೂ ವಿವಿಧ ಸಮಿತಿಯ ಪಧಾದಿಕಾರಿಗಳು ಉಪಸ್ಥಿತರಿದ್ದರು .

kiniudupi@rediffmail.com

No Comments

Leave A Comment