ದ.ಕ. ಜಿಲ್ಲೆಯ ಮೂವರಿಗೆ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ರಾಷ್ಟ್ರೀಯ ಪ್ರಶಸ್ತಿ...ಪ್ರಧಾನ ಮಂತ್ರಿ ಯೋಜನೆಗಳಿಗೆ ಮರುನಾಮಕರಣ ಮಾಡದಂತೆ ರಾಜ್ಯಗಳಿಗೆ ಕೇಂದ್ರ ಸರಕಾರದ ಆಗ್ರಹ...VHP ಕಾರ್ಯಕ್ರಮದಲ್ಲಿ ವಿವಾದಾತ್ಮಕ ಹೇಳಿಕೆ: ಸುಪ್ರೀಂಕೋರ್ಟ್ ಕೊಲಿಜಿಯಂ ಮುಂದೆ ನ್ಯಾ. ಶೇಖರ್ ಯಾದವ್ ಹಾಜರಾಗುವ ಸಾಧ್ಯತೆ
ಅಕ್ರಮ ಸಂಬಂಧ ನಿರಾಕರಿಸಿದ ಮಹಿಳೆ ಶಿರಚ್ಛೇದ, ದೇಹ ತುಂಡು.. ತುಂಡು..
ಕೋಲ್ಕತಾ: ತನ್ನೊಂದಿಗೆ ಅಕ್ರಮ ಸಂಬಂಧಕ್ಕೆ ಒಪ್ಪಲಿಲ್ಲ ಎಂಬ ಒಂದೇ ಕಾರಣಕ್ಕೆ ದೂರ್ತನೋರ್ವ ಮಹಿಳೆಯ ಶಿರಚ್ಛೇದ ಮಾಡಿ ಆಕೆಯ ದೇಹವನ್ನು ತುಂಡು ತುಂಡಾಗಿ ಕತ್ತರಿಸಿ ಬಿಸಾಡಿರುವ ಧಾರುಣ ಘಟನೆ ಪಶ್ಚಿಮ ಬಂಗಾಳ ರಾಜಧಾನಿ ಕೋಲ್ಕತಾದಲ್ಲಿ ನಡೆದಿದೆ.
ಹೌದು.. ಈ ಹಿಂದೆ ಕೋಲ್ಕತಾದ ಟೋಲಿಗಂಜ್ ಪ್ರದೇಶದಲ್ಲಿ ಸುಮಾರು 30 ವರ್ಷದ ಮಹಿಳೆಯ ಕತ್ತರಿಸಿದ ತಲೆ ಪತ್ತೆಯಾಗಿತ್ತು. ಇಲ್ಲಿನ ಗಾಲ್ಫ್ ಗ್ರೀನ್ ಪೊಲೀಸ್ ಠಾಣೆ ವ್ಯಾಪ್ತಿಯ ಗ್ರಹಾಂ ರಸ್ತೆಯ ವ್ಯಾಟ್‌ನಲ್ಲಿ ಕಸದ ರಾಶಿಯಲ್ಲಿ ಮಹಿಳೆ ಶವ ಪತ್ತೆಯಾಗಿ ಈ ಪ್ರಕರಣ ವ್ಯಾಪಕ ಸುದ್ದಿಗೆ ಗ್ರಾಸವಾಗಿತ್ತು.
ಈ ಪ್ರಕರಣದ ತನಿಖೆಗೆ ಕೋಲ್ಕತಾ ಪೊಲೀಸರು ವಿಶೇಷ ತಂಡವನ್ನೇ ರಚಿಸಿದ್ದರು. ಇದೀಗ ಇದೀಗ ಈ ಪ್ರಕರಣವನ್ನು ಕೋಲ್ಕತಾ ಪೊಲೀಸರ ವಿಶೇಷ ತಂಡ ಬೇಧಿಸಿದ್ದು, ಮಹಿಳೆಯ ಸಂಬಂಧಿಯೇ ಆಕೆಯನ್ನು ಕೊಂದು ಶಿರಚ್ಛೇದ ಮಾಡಿ ದೇಹವನ್ನು ತುಂಡು ತುಂಡಾಗಿ ಕತ್ತರಿಸಿ ಕಸದ ರಾಶಿಯಲ್ಲಿ ಎಸೆದು ಹೋಗಿದ್ದಾನೆ ಎಂದು ತಿಳಿದುಬಂದಿದೆ.
ಸೋದರ ಮಾವನ ಬಂಧನ
ಮಹಿಳೆ ರುಂಡವನ್ನು ವಶಪಡಿಸಿಕೊಂಡಿದ್ದ ಪೊಲೀಸರು ಬಳಿಕ ತನಿಖೆ ಮಾಡಿ ಆಕೆ ಕಟ್ಟಡ ಕಾರ್ಮಿಕಳಾಗಿ ಕೆಲಸ ಮಾಡುತ್ತಿದ್ದ 30 ವರ್ಷದ ಮಹಿಳೆ ಎಂದು ಗುರುತು ಪತ್ತೆ ಮಾಡಿದ್ದರು. ಬಳಿಕ ಆಕೆಯ ಸಂಬಂಧಿಕರು, ಸ್ನೇಹಿತರು ಮತ್ತು ಪರಿಚಿತರನ್ನು ತನಿಖೆಗೆ ಒಳಪಡಿಸಿದಾಗ ಆಕೆಯ ಸೋದರ ಮಾವ ‘ಅತಿಉರ್ ರೆಹಮಾನ್ ಲಸ್ಕರ್’ ಎಂಬಾತ ಆಕೆಯ ಹಿಂದೆ ಬಿದ್ದಿದ್ದ ವಿಚಾರ ತಿಳಿದುಬಂದಿದೆ. ಈ ವೇಳೆ ಪೊಲೀಸರು ಆತನನ್ನು ವಶಕ್ಕೆ ಪಡೆದು ತೀವ್ರ ವಿಚಾರಣೆ ನಡೆಸಿದಾಗ ಆತ ತಾನು ಮಾಡಿದ ಘೋರ ಕೃತ್ಯವನ್ನು ಬಹಿರಂಗಪಡಿಸಿದ್ದಾನೆ.
ಅಕ್ರಮ ಸಂಬಂಧ ನಿರಾಕರಿಸಿದ್ದ ಮಹಿಳೆ
ಮೂಲತಃ ತಾನೂ ಕೂಡ ಕಟ್ಟಡ ಕಾರ್ಮಿಕನಾಗಿರುವ ಅತಿಉರ್ ರೆಹಮಾನ್ ಲಸ್ಕರ್ ಪೊಲೀಸರ ಬಳಿ ತಪ್ಪೊಪ್ಪಿಗೆ ಹೇಳಿಕೆ ನೀಡಿದ್ದು, 2 ವರ್ಷಗಳ ಹಿಂದೆ ಆಕೆ ತನ್ನ ಗಂಡನನ್ನು ತೊರೆದು ಬಂದಿದ್ದಳು. ಅಂದಿನಿಂದ ಆಕೆ ನನ್ನೊಂದಿಗೆ ನಿತ್ಯ ಕಟ್ಟಡ ಕೆಲಸಕ್ಕೆ ಬರುತ್ತಿದ್ದಳು. ಆಕೆಯ ಪರಿಚಯವಾದಾಗಿನಿಂದಲೂ ನಾನು ಆಕೆಯನ್ನು ಪರಿಪರಿಯಾಗಿ ನನ್ನೊಂದಿಗೆ ಸಂಬಂಧ ಹೊಂದಲು ಕೇಳಿಕೊಳ್ಳುತ್ತಿದ್ದೆ. ಆದರೆ ಆಕೆ ನಿರಾಕರಿಸುತ್ತಾ ಬಂದಿದ್ದಳು. ಒಂದು ದಿನ ಇದೇ ವಿಚಾರವಾಗಿ ನಮ್ಮಿಬ್ಬರ ನಡುವೆ ಜಗಳ ಕೂಡ ಆಗಿತ್ತು. ಅಂದಿನಿಂದ ಆಕೆ ನನ್ನ ಮೊಬೈಲ್ ನಂಬರ್ ಅನ್ನು ಕೂಡ ಬ್ಲಾಕ್ ಮಾಡಿದ್ದಳು.
ಇದರಿಂದ ನಾನು ಆಕ್ರೋಶಗೊಂಡು ಒಂದು ದಿನ ಯಾರೂ ಇಲ್ಲದ ಸಂದರ್ಭದಲ್ಲಿ ನಿರ್ಮಾಣ ಹಂತದ ಕಟ್ಟಡಕ್ಕೆ ಕರೆದೊಯ್ದು ಆಕೆಯನ್ನು ಮತ್ತೆ ಬಲವಂತ ಮಾಡಿದೆ. ಆದರೆ ಆಕೆ ನಿರಾಕರಿಸಿದಾಗ ಆಕೆಯನ್ನು ಕತ್ತು ಹಿಸುಕಿ ಕೊಂದು ಹಾಕಿದೆ. ಬಳಿಕ ಪೊಲೀಸರಿಗೆ ಸಿಕ್ಕಿ ಬೀಳುವ ಭಯದಿಂದ ಆಕೆಯ ರುಂಡವನ್ನು ಕತ್ತರಿಸಿ, ಆಕೆಯ ದೇಹವನ್ನು ತುಂಡು ತುಂಡಾಗಿ ಬೇರ್ಪಡಿಸಿ ಪಾಲಿಥಿನ್ ಕವರ್ ಗೆ ಹಾಕಿಕೊಂಡು ಬೇರೆ ಬೇರೆ ಸ್ಥಳಗಳಲ್ಲಿ ಎಸೆದು ಬಂದಿದ್ದೆ ಎಂದು ಹೇಳಿದ್ದಾನೆ.
ರುಂಡ ಎಳೆದಾಡುತ್ತಿದ್ದ ನಾಯಿಗಳು
ಇದಾದ ಬಳಿಕ ಟೋಲಿಗಂಜ್ ಬಳಿ ಮಹಿಳೆಯ ರುಂಡ ಪತ್ತೆಯಾಗಿತ್ತು. ಕಸದಲ್ಲಿ ಬಿದ್ದಿದ್ದ ರುಂಡವನ್ನು ನಾಯಿಗಳು ಎಳೆದಾಡುತ್ತಿದ್ದಾಗ ಸ್ಥಳೀಯರು ಇದನ್ನು ಗಮನಿಸಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕಾಗಮಿಸಿದ ಪೊಲೀಸರು ರಂಡವನ್ನು ವಶಪಡಿಸಿಕೊಂಡು ಶ್ವಾನದಳದ ಮೂಲಕ ತನಿಖೆ ಆರಂಭಿಸಿದಾಗ ದೇಹದ ಇತರೆ ಭಾಗಗಳು ಪತ್ತೆಯಾಗಿವೆ. ಅಪರಾಧ ನಡೆದ ಕೇವಲ 12 ಗಂಟೆಗಳಲ್ಲೇ ದೇಹದ ಎಲ್ಲ ಭಾಗಗಳನ್ನು ಶೇಖರಿಸಿದ್ದಾರೆ. ಅಲ್ಲಿ ಸಿಕ್ಕ ಪುರಾವೆಗಳ ಆಧಾರದ ಮೇಲೆ ದಕ್ಷಿಣ 24 ಪರಗಣ ಜಿಲ್ಲೆಯ ಡೈಮಂಡ್ ಹಾರ್ಬರ್‌ನಲ್ಲಿ ಆರೋಪಿಯನ್ನು ಅವನ ಹುಟ್ಟೂರು ಬಸುಲ್ದಂಗಾದಲ್ಲಿ ಬಂಧಿಸಿದ್ದಾರೆ.