ನವೆ೦ಬರ್ 25ರಿ೦ದ ಉಡುಪಿಯ ಕಲ್ಯಾಣಪುರ ಶ್ರೀವೆ೦ಕಟರಮಣ ದೇವಸ್ಥಾನದಲ್ಲಿ ವಾಡಿಕೆಯ೦ತೆ ಜರಗಲಿರುವ ಭಜನಾ ಸಪ್ತಾಹ ಮಹೋತ್ಸವವು ಆರ೦ಭಗೊ೦ಡಿದ್ದು ,ಇದು 97ನೇ ವರ್ಷದ ಭಜನಾ ಸಪ್ತಾಹ ಮಹೋತ್ಸವವಾಗಿರುತ್ತದೆ........ಡಿಸೆಂಬರ್ 1 ರಿಂದ 19ರವರೆಗೆ ಸಂಸತ್ತಿನ ಚಳಿಗಾಲದ ಅಧಿವೇಶನ
ಪ್ರಿಯಾಂಕ ಗಾಂಧಿ ಲೋಕಸಭೆ ಪ್ರವೇಶ- ಮೋದಿ ಹಾಗೂ ಅಮಿತ್ ಶಾ ಮತ್ತು ಕಾಂಗ್ರೆಸ್ ಪಕ್ಷದ ವಿರೋಧಿಗಳಲ್ಲಿ ನಡುಕ:ಸುರೇಶ್ ಶೆಟ್ಟಿ ಬನ್ನಂಜೆ
ಉಡುಪಿ:ಪ್ರಿಯಾಂಕ ಗಾಂಧಿಯವರು ದಾಖಲೆ ಮತಗಳ ಅಂತರದಿಂದ ಜಯಗಳಿಸಿ ಲೋಕಸಭೆ ಪ್ರವೇಶಿಸಿದ ಕೂಡಲೇ ಪ್ರಧಾನಿ ಮೋದಿ ಹಾಗೂ ಗೃಹ ಸಚಿವ ಅಮಿತ್ ಶಾ ಮತ್ತು ಕಾಂಗ್ರೆಸ್ ಪಕ್ಷದ ವಿರೋಧಿ ಪಕ್ಷಗಳಿಗೆ ನಡುಕ ಉಂಟಾಗಿದೆ ನಿನ್ನೆ ಪ್ರಿಯಾಂಕಾ ಗಾಂಧಿ ಅವರು ಲೋಕಸಭೆಯಲ್ಲಿ ಸಂವಿಧಾನದ ಬಗ್ಗೆ ಮಾತನಾಡುತ್ತಾ ಸಂವಿಧಾನ ಅಂದರೆ ಏನು ಎಂಬುದನ್ನು ಬಿಜೆಪಿಯ ನಾಯಕರಿಗೆ ಮನವರಿಕೆ ಮಾಡಿದ್ದಾರೆ.
ಸಂವಿಧಾನದ ರಕ್ಷಣೆಗೆ ನಾವು ಕಾಂಗ್ರೆಸ್ಸಿಗರು ಯಾವತ್ತೂ ಬದ್ಧ ಎಂಬ ಮಾತನ್ನು ರಾಹುಲ್ ಗಾಂಧಿ ಮತ್ತು ಪ್ರಿಯಾಂಕ ಗಾಂಧಿಯವರು ಇಡೀ ದೇಶಕ್ಕೆ ತಿಳಿಸಿದ್ದಾರೆ. ಬಿಜೆಪಿ ನಾಯಕರುಗಳು ಸಂವಿಧಾನವನ್ನು ಬದಲಾಯಿಸುವ ಯತ್ನಕ್ಕೆ ಮಾನ್ಯ ರಾಹುಲ್ ಗಾಂಧಿ ಹಾಗೂ ಪ್ರಿಯಾಂಕ ಗಾಂಧಿಯವರು ಕಾಂಗ್ರೆಸ್ ಪಕ್ಷ ಕಾಂಗ್ರೆಸ್ ಮಿತ್ರ ಪಕ್ಷಗಳು ತಡೆಗೋಡೆಯಾಗಿ ನಿಂತಿರುತ್ತಾರೆ ಇದರಿಂದ ಬಿಜೆಪಿಯ ಕೇಂದ್ರ ನಾಯಕರು ಕಂಗೆಟ್ಟು ಹೋಗಿದ್ದಾರೆ.
ಬಿಜೆಪಿ ನಾಯಕರ ರೈತ ವಿರೋಧಿ ನೀತಿ ಹಾಗೂ ಯುವ ಜನರಿಗೆ ಉದ್ಯೋಗ ನೀಡುವಲ್ಲಿ ವಿಫಲರಾದ ಮತ್ತು ಭ್ರಷ್ಟಾಚಾರದ ಹೆಸರಲ್ಲಿ ಈ ಡಿ ಹಾಗೂ ಐಟಿ ದಾಳಿ ನಡೆಸಿ ಅವರನ್ನು ತಮ್ಮ ಪಕ್ಷಕ್ಕೆ ಸೇರಿಸಿದ ಕೆಲವು ನಾಯಕರನ್ನು ಸ್ವಚ್ಛ ಗೊಳಿಸಿ ಸ್ವಚ್ಛರಿತ್ರರು ಎಂದು ಘೋಷಿಸಿದ ಕೇಂದ್ರದ ಬಿಜೆಪಿ ನಾಯಕರ ನಡೆಯನ್ನು ಲೋಕಸಭೆಯಲ್ಲಿ ಪ್ರಿಯಾಂಕಾ ಗಾಂಧಿ ಅವರು ಖಂಡಿಸಿದ್ದು.ಇದು ಬಿಜೆಪಿಯವರ ಪಾಲಿಗೆ ನುಂಗಲಾರದ ತುತ್ತಾಗಿದೆ.
ಮುಂದಿನ ದಿನಗಳಲ್ಲಿ ಬಿಜೆಪಿಯವರ ಕಳೆದ 11 ವರ್ಷದ ಈ ಕೆಟ್ಟ ಆಡಳಿತದ ಬಗ್ಗೆ ಲೋಕಸಭೆಯಲ್ಲಿ ಎದುರಿಸಿ ನಿಂತು ನಮ್ಮ ದೇಶದ ಜನಸಾಮಾನ್ಯರಿಗೆ ಅವರು ನ್ಯಾಯ ಒದಗಿಸುವುದು ಖಚಿತ.ಅವರ ಮಾತಿಗೆ ಉತ್ತರ ಕೊಡಲಾಗದೆ ಬಿಜೆಪಿ ನಾಯಕರು ಚಡಪಡಿಸುತ್ತಿದ್ದಾರೆ೦ದು ಉಡುಪಿ ಬ್ಲಾಕ್ ಕಾಂಗ್ರೆಸ್ ರಾಜೀವ ಗಾಂಧಿ ಪಂಚಾಯತ್ ರಾಜ್ ಸಂಘಟನೆ ಇದರ ಅಧ್ಯಕ್ಷರಾದ ಸುರೇಶ್ ಶೆಟ್ಟಿ ಬನ್ನಂಜೆ ತಿಳಿಸಿರುತ್ತಾರೆ.