“ದೇಶ ಮಾರಲು ಬಿಡುವುದಿಲ್ಲ” ಭಿತ್ತಿ ಪತ್ರ ಹಿಡಿದು ವಿಪಕ್ಷಗಳ ಪ್ರತಿಭಟನೆ, ಅದಾನಿ ವಿಷಯವಾಗಿ ಜೆಪಿಸಿ ತನಿಖೆಗೆ ಆಗ್ರಹ
ನವದೆಹಲಿ: ಅದಾನಿ ವಿಷಯವನ್ನಿಟ್ಟುಕೊಂಡು ಸಂಸತ್ ನಲ್ಲಿ ನಡೆಸುತ್ತಿರುವ ಪ್ರತಿಭಟನೆ ಗುರುವಾರದಂದೂ ಮುಂದುವರೆದಿದೆ.
ಸಂಸತ್ ಭವನದ ಎದುರು ದೇಶ ಮಾರಲು ಬಿಡುವುದಿಲ್ಲ ಎಂಬ ಭಿತ್ತಿ ಪತ್ರಗಳನ್ನು ಹಿಡಿದು ಘೋಷಣೆಗಳನ್ನು ಕೂಗಿರುವ ವಿಪಕ್ಷಗಳ ಸಂಸದರು, ಅದಾನಿ ವಿಷಯವಾಗಿ ಜಂಟಿ ಸಂಸದೀಯ ಸಮಿತಿ ತನಿಖೆ ನಡೆಸಲು ಒತ್ತಾಯಿಸಿದ್ದಾರೆ.
ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕ ಗಾಂಧಿ ವಾಧ್ರ, ಕಾಂಗ್ರೆಸ್, ಡಿಎಂಕೆ ಹಾಗೂ ಎಡಪಕ್ಷಗಳ ಸಂಸದರು ಮಕರ್ ದ್ವಾರದ ಮೆಟ್ಟಿಲುಗಳ ಮೇಲೆ ನಿಂತು ಪ್ರತಿಭಟನೆ ನಡೆಸಿ ದೇಶವನ್ನು ಮಾರಾಟ ಮಾಡಲು ಬಿಡುವುದಿಲ್ಲ ಎಂದು ಹೇಳಿದ್ದಾರೆ.
ಮೋದಿ ಮತ್ತು ಅದಾನಿ ನಡುವಿನ ಆಪಾದಿತ ಒಡನಾಟದ ವಿರುದ್ಧ ಘೋಷಣೆಗಳನ್ನು ಎತ್ತಿದರು ಮತ್ತು ಈ ವಿಷಯದ ಬಗ್ಗೆ ಜಂಟಿ ಸಂಸದೀಯ ಸಮಿತಿ (ಜೆಪಿಸಿ) ತನಿಖೆ ನಡೆಸಬೇಕೆಂದು ಒತ್ತಾಯಿಸಿದರು.
ಬುಧವಾರ, ಹಲವಾರು ಪ್ರತಿಪಕ್ಷದ ಸಂಸದರು ಸಂಸತ್ತಿನ ಆವರಣದಲ್ಲಿ ಒಂದು ಕೈಯಲ್ಲಿ ಕೆಂಪು ಗುಲಾಬಿ ಮತ್ತೊಂದು ಕೈಲಿ ತ್ರಿವರ್ಣ ಧ್ವಜವನ್ನು ಹಿಡಿದು ಸ್ವಾಗತಿಸಿದರು. ಆಡಳಿತ ಪಕ್ಷವನ್ನು ಸದನದ ಕಾರ್ಯಗಳು, ಅದಾನಿ ವಿಷಯ ಸೇರಿದಂತೆ ಎಲ್ಲಾ ಸಮಸ್ಯೆಗಳು ಚರ್ಚೆಯಲ್ಲಿ ಒಳಗೊಳ್ಳುವುದನ್ನು ನೋಡಿಕೊಳ್ಳುವಂತೆ ಆಡಳಿತಾರೂಢ ಸಂಸದರನ್ನು ಒತ್ತಾಯಿಸಿದರು.