ಉಡುಪಿ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ಜನವರಿ 29ರಿ೦ದ 125 ದಿನಗಳಕಾಲ ನಿರ೦ತರ ಅಹೋರಾತ್ರೆ ಭಜನಾ ಕಾರ್ಯಕ್ರಮವು ಜರಗಲಿದೆ. ಭಜನಾ ಕಾರ್ಯಕ್ರಮವನ್ನು ಕಾಶೀಮಠ ಶ್ರೀಶ್ರೀಸ೦ಯಮೀ೦ದ್ರ ತೀರ್ಥಶ್ರೀಪಾದರು ದೀಪಪ್ರಜ್ವಲನೆ ಮಾಡುವುದರೊ೦ದಿಗೆ ಭಜನಾ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ.
ಉಡುಪಿ ಬೈಲೂರು ಶ್ರೀ ಮಹಿಷಮರ್ದಿನಿ ದೇವಸ್ಥಾನ ಶತಚಂಡಿಕಾಯಾಗ – ಹೊರೆಕಾಣಿಕೆ ಶೋಭಾಯಾತ್ರೆ ಸ೦ಪನ್ನ…
ಉಡುಪಿ:ಉಡುಪಿ ಬೈಲೂರಿನ ಶ್ರೀ ಮಹಿಷಮರ್ದಿನಿ ದೇವಸ್ಥಾನದಲ್ಲಿ ಡಿ .9 ರಿಂದ ಡಿ 15ರವರೆಗೆ ನಡೆಯುವ ಶತಚಂಡಿಕಾಯಾಗ ಮತ್ತು ಬ್ರಹ್ಮಮಂಡಲ ಸೇವೆಯ ಪ್ರಯುಕ್ತ ನ 9 ಸೋಮವಾರ ರಂದು ಉಡುಪಿ ಜೋಡುರಸ್ತೆಯ ಬಳಿ ಹೊರೆಕಾಣಿಕೆ ಶೋಭಾಯಾತ್ರೆ ಗೆ ದೇವಳದ ತಂತ್ರಿಗಳಾದ ಕೆ.ಎಸ್. ಕೃಷ್ಣಮೂರ್ತಿ, ರಮಣ ತಂತ್ರಿ ಗಳು ಪ್ರಾರ್ಥನೆ ಮಾಡಿ ಆರತಿ ಬೆಳಗಿಸಿ ಚಾಲನೆ ನೀಡಿ ಶುಭ ಹಾರೈಸಿದರು.
ಹಸಿರು ವಾಣಿ ಹೊರೆಕಾಣಿಕೆ ಮೆರವಣಿಗೆಯಲ್ಲಿ ಮಂಗಳವಾದ್ಯ , ಚಂಡೆ ವಾದನ , ತಟ್ಟೀರಾಯ , ಕೀಲುಕುದುರೆ , ಹುಲಿವೇಷ ಕುಣಿತಾ ಭಜನಾ ತಂಡಗಳು , ಶ್ರೀದೇವಿ , ಆಂಜೆನೇಯ , ಮಹಿಷಾಸುರ , ಶ್ರೀ ಮಹಿಷಮರ್ದಿನಿ , ಯಕ್ಷಗಾನ ವೇಷಗಳು , ಮಹಿಳೆಯರಿಂದ ಪೂರ್ಣ ಕುಂಭ ಸ್ವಾಗತ , ವಿವಿಧ 50 ಕ್ಕೊ ಹೆಚ್ಚಿನ ವಾಹನಗಳಲ್ಲಿ ಹೊರೆ ಕಾಣಿಕೆ ಮೆರವಣಿಗೆ ಉಡುಪಿ ಜೋಡುಕಟ್ಟೆಯಿಂದ , ಬಿಗ್ ಬಜಾರ , ಮಿಷನ್ ಆಸ್ಪತ್ರೆ ರಸ್ತೆಯ ಮೂಲಕ ದೇವಳಕ್ಕೆಸಾಗಿ ಬಂದು ತಲುಪಿತು.
ಸಮಾರಂಭದಲ್ಲಿ ಶತ ಚಂಡಿಕಾಯಾಗ ಸಮಿತಿ ಅಧ್ಯಕ್ಷ ಮಟ್ಟಾರ್ ರತ್ನಾಕರ್ ಹೆಗ್ಡೆ , ದೇವಳದ ಮೊಕ್ತೇಸರ ಮುದ್ದಣ್ಣ ಶೆಟ್ಟಿ , ಹೊರೆಕಾಣಿಕೆ ಉಸ್ತುವಾರಿ ನವೀನ್ ಭಂಡಾರಿ , ಕಾರ್ಯದರ್ಶಿ ನಾರಾಯಣ ದಾಸ್ ಉಡುಪ , ಕೋಶಾಧಿಕಾರಿ ಸುದರ್ಶನ್ ಶೇರಿಗಾರ್ , ಪವಿತ್ರಪಾಣಿ ಶ್ರೀನಿವಾಸ್ ಆಚಾರ್ಯ , ಅರ್ಚಕ ವರದರಾಜ್ ಭಟ್ ,ಆರ್ಥಿಕಸಮಿತಿ ಸಂಚಾಲಕ ರಮೇಶ್ ಶೆಟ್ಟಿ ಕಳ್ಳತ್ತೂರು , ಮುಕ್ತೇಸರಾದ ರಾಜಶೇಖರ್ ಭಟ್ , ಮೋಹನ್ ಆಚಾರ್ಯ , ದುರ್ಗಾಪ್ರಸಾದ್ , ಭಾರತಿ ಜಯರಾಮ ಆಚಾರ್ , ಪ್ರೇಮನಾಥ್ , ಸುರೇಶ ಶೆಟ್ಟಿ , ಸುಭಾಸ್ ಭಂಡಾರಿ , ಅರುಣ್ ಶೆಟ್ಟಿಗಾರ್ , ನಗರ ಸಭೆ ಸದಸ್ಯ ಕೃಷ್ಣರಾವ್ ಕೊಡಂಚ , ಕಿರಣ್ ಕುಮಾರ್ ಬೈಲೂರು , ರತ್ನಾಕರ ಏನ್ ಶೆಟ್ಟಿ , ಸುಬ್ರಹಮಣ್ಯ ತಂತ್ರಿ ಹಾಗೂ ವಿವಿಧ ಸಮಿತಿಯ ಪಧಾದಿಕಾರಿಗಳು ಉಪಸ್ಥಿತರಿದ್ದರು.
ನಾಡೋಜ ಡಾ ಜಿ ಶಂಕರ್ ದೇವಳಕ್ಕೆ ಭೇಟಿ ನೀಡಿ ದೇವರ ದರ್ಶನ ಗೈದರು ಅವರನ್ನು ದೇವಳದ ವತಿಯಿಂದ ಪ್ರಸಾದ ದೊಂದಿಗೆ ಗೌರವಿಸಲಾಯಿತು.
ವೈದಿಕರಿಂದ ತೋರಣ ಮುಹೂರ್ತ, ಉಗ್ರಾಣ ಮುಹೂರ್ತ ಉದ್ಘಾಟನೆ ಗೊಂಡಿತ್ತು .ಧಾರ್ಮಿಕ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಶ್ರೀಕಾಂತ್ ಶೆಟ್ಟಿ ಕಾರ್ಕಳ ಇವರಿಂದ ಉಪನ್ಯಾಸ ನೆಡೆಯಿತು.