ಬೆಂಗಳೂರು, ಕೊಪ್ಪಳ ಸೇರಿ ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಲೋಕಾಯುಕ್ತ ದಾಳಿ
ಬೆಂಗಳೂರು, ಡಿಸೆಂಬರ್ 10: ಭ್ರಷ್ಟ ಅಧಿಕಾರಿಗಳ ವಿರುದ್ಧದ ಕಾರ್ಯಾಚರಣೆ ಚುರುಕುಗೊಳಿಸಿರುವ ಲೋಕಾಯುಕ್ತ ಮಂಗಳವಾರ ಬೆಳಂಬೆಳಗ್ಗೆ ಬೆಂಗಳೂರು, ಕೊಪ್ಪಳ ಸೇರಿದಂತೆ ಕರ್ನಾಟಕ ಹಲವು ಜಿಲ್ಲೆಗಳಲ್ಲಿ ದಾಳಿ ನಡೆಸಿದೆ. ಬೆಂಗಳೂರು, ಬೆಂಗಳೂರು ಗ್ರಾಮಾಂತರ, ಗದಗ, ಕಲಬುರುಗಿ, ರಾಯಚೂರು, ಚಿತ್ರದುರ್ಗದಲ್ಲಿ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಬೆಂಗಳೂರಿನಲ್ಲಿ 5 ಕಡೆ ದಾಳಿ ನಡೆಸಿ ಮನೆಗಳಲ್ಲಿ ಪರಿಶೀಲನೆ ನಡೆಸಲಾಗುತ್ತಿದೆ. 10 ಅಧಿಕಾರಿಗಳ ಮನೆ ಮೇಲೆ ದಾಳಿ ಮಾಡಿ ದಾಖಲೆಗಳ ಪರಿಶೀಲನೆ ನಡೆಸಲಾಗುತ್ತಿದೆ.
ಎಲ್ಲೆಲ್ಲಿ ಲೋಕಾಯುಕ್ತ ದಾಳಿ?
-
ಲೋಕೇಶ್ ಬಾಬು, ಬೆಸ್ಕಾಂ ಇಂಜಿಯರ್ ಬೆಂಗಳೂರಿನ ಬಣಸವಾಡಿ ನಿವಾಸಿ
-
ಸುರೇಶ್ ಬಾಬು, ಕಂದಾಯ ಇಲಾಖೆ ಇನ್ಸ್ಪೆಕ್ಟರ್, ಬೆಂಗಳೂರು ನಿವಾಸ
-
ಕೃಷ್ಣಪ್ಪ, ಬಿಬಿಎಂಪಿ ತೆರಿಗೆ ಇನ್ಸ್ಪೆಕ್ಟರ್, ಬೆಂಗಳೂರು ನಿವಾಸ
-
ಸುನೀಲ್ ಕುಮಾರ್, ಜಿಲ್ಲಾ ಆರೋಗ್ಯಾಧಿಕಾರಿ, ಬೆಂಗಳೂರು ಗ್ರಾಮಾಂತರ ಜಿಲ್ಲೆ
-
ನಂಜುಡಯ್ಯ, ಶಸಸ್ತ್ರ ಡಿವೈಎಸ್ಪಿ, ಚೆನ್ನಪಟ್ಟಣ ಪೊಲೀಸ್ ತರಬೇತಿ ಶಾಲೆ
-
ಲಕ್ಷ್ಮಣ್ ಎಸ್, ಡಿಎ ಗದಗ
-
ರಾಮಪ್ಪ, ಕಲಬುರುಗಿ ಮಹಾನಗರ ಪಾಲಿಕೆ ಇಂಜಿನಿಯರ್
-
ರಮೇಶ್, ಅಬಾಕಾರಿ ಇನ್ಸ್ ಪೆಕ್ಟರ್ ರಾಮಚೂರು
-
ಸುರೇಶ್, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ
-
ಸುನೀಲ್ ಬಿಎಚ್ಒ ಬೆಂಗಳೂರು ಗ್ರಾಮಾಂತರ