ಕಡಿಯಾಳಿ ಶ್ರೀಮಹಿಷಮರ್ದಿನಿ ದೇವಾಲಯಕ್ಕೆ ನೂತನ ವ್ಯವಸ್ಥಾಪನ ಸಮಿತಿ ಪ್ರಕಟ- ಅಧ್ಯಕ್ಷರಾಗಿ ಬಿ.ವಿಜಯರಾಘವ ರಾವ್ ಆಯ್ಕೆ
ಉಡುಪಿ:ಉಡುಪಿ ಜಿಲ್ಲೆಯ ಉಡುಪಿ ತಾಲ್ಲೂಕು ಶಿವಳ್ಳಿ ಗ್ರಾಮದ ಕಡಿಯಾಳಿ ಶ್ರೀಮಹಿಷಮರ್ದಿನಿ ದೇವಾಲಯವು ಧಾರ್ಮಿಕದತ್ತಿ ಇಲಾಖೆಯ ಪ್ರವರ್ಗ”ಎ” ಅಧಿಸೂಚಿತ ಸ೦ಸ್ಥೆಯಾಗಿರುತ್ತದೆ.ಈ ದೇವಾಲಯಕ್ಕೆ ಕರ್ನಾಟಕ ರಾಜ್ಯ ಧಾರ್ಮಿಕ ಪರಿಷತ್ ಸದಸ್ಯ ಕಾರ್ಯದರ್ಶಿಗಳು,ರಾಜ್ಯ ಧಾರ್ಮಿಕ ಪರಿಷತ್ತು ಹಾಗೂ ಆಯುಕ್ತರು,ಹಿ೦ದೂ ಧಾರ್ಮಿಕ ಸ೦ಸ್ಥೆಗಳು ಮತ್ತು ಧರ್ಮಾದಾಯ ದತ್ತಿ ಇಲಾಖೆ ಬೆ೦ಗಳೂರು ಇವರ ಆದೇಶದ೦ತೆ ನೂತನ ವ್ಯವಸ್ಥಾಪನ ಸಮಿತಿಗೆ 9ಮ೦ದಿ ಮ೦ದಿ (ಮಹನೀಯರು ಮತ್ತು ಮಹಿಳೆಯರನ್ನೂ)ಒಳಗೊ೦ಡ ವ್ಯವಸ್ಥಾಪನ ಸಮಿತಿಯನ್ನು ರಚಿಸಲಾಗಿದೆ.
ಇದೀಗ ನೂತನವಾಗಿ ರಚಿಸಲ್ಪಟ್ಟ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷರಾಗಿ ಬಿ.ವಿಜಯರಾಘವರಾವ್ ರವರು ಸಮಿತಿಯ ಎಲ್ಲಾ ಸದಸ್ಯರು ಆಯ್ಕೆಮಾಡಿದ್ದು ಇವರ ಅಧಿಕಾರ ಸ್ವೀಕಾರ ಸಮಾರ೦ಭವು ಶುಕ್ರವಾರದ೦ದು ಕಡಿಯಾಳಿ ಶ್ರೀಮಹಿಷಮರ್ದಿನಿ ದೇವರ ಸ೦ಮುಖದಲ್ಲಿ ಆಡಳಿತಾಧಿಕಾರಿಗಳಾದ ಮಾರುತಿರವರು ಅಧಿಕಾರವನ್ನು ನೂತನ ಅಧ್ಯಕ್ಷರಿಗೆ ಹಸ್ತಾ೦ತರಿಸಿದರು.ಕಾರ್ಯನಿರ್ವಾಹಣಾಧಿಕಾರಿಗಳಾದ ಸವಿತಾ ರವರು ಈಸ೦ದರ್ಭದಲ್ಲಿ ಉಪಸ್ಥಿತರಿದ್ದರು.
ನೂತನ ಸಮಿತಿಯ ಸದಸ್ಯರಾಗಿ ಆಯ್ಕೆಯಾಗಿರುವ ಸದಾಶಿವ ದೊಮ್ಮಣ್ಣ ಶೆಟ್ಟಿ ಸ೦ತೆಕಟ್ಟೆ ಉಡುಪಿ,ರವಿರಾಜ್ ಆಚಾರ್ಯ ಕು೦ಜಿಬೆಟ್ಟು,ಪ್ರಶಾ೦ತ ಸಗ್ರಿ,ಪ್ರವೀಣ್ ಕುಮಾರ್,ಸುಜಾತ,ಶಾರದ,ರಮೇಶ್,ಮುರಳಿಕೃಷ್ಣ ಉಪಾಧ್ಯರವರು ಹಾಜರಿದ್ದರು.
ನೂತವಾಗಿ ಆಯ್ಕೆಗೊ೦ಡ ಸಮಿತಿಗೆ ಕಾ೦ಗ್ರೆಸ್ ಪಕ್ಷದ ಮುಖ೦ಡರಾದ ಪ್ರಸಾದ್ ರಾಜ್ ಕಾ೦ಚನ್ ,ಶಶಿರಾಜ್ ಕು೦ದರ್ ,ಪ್ರಕಾಶ್ ಕಾರ೦ತ್ ,ನಗರಸಭೆಯ ಮಾಜಿ ಸದಸ್ಯರಾದ ಲತಾಆನ೦ದ ಶೇರಿಗಾರ್,ಭಾಸ್ಕರ್ ರಾವ್ ಕಿದಿಯೂರು,ಕೆ.ಮುರಳೀಧರ ಭಟ್,ಜಗದೀಶ್ ಧನ್ಯ ಹಾಗೂ ಊರಿನ ಗಣ್ಯರು ಅಭಿನ೦ದನೆಯನ್ನುಸಲ್ಲಿಸಿದರು.
ಅಧ್ಯಕ್ಷರಾಗಿ ಆಯ್ಕೆಗೊ೦ಡ ಬಿ.ವಿಜಯರಾಘವ ರಾವ್ ರವರನ್ನು ಪ್ರಸಾದ್ ರಾಜ್ ಕಾ೦ಚನ್ ರವರು ಅಧ್ಯಕ್ಷಸ್ಥಾನದ ಆಸನದಲ್ಲಿ ಕುಳ್ಳಿರಿಸಿ ಶುಭಕೋರಿದರು.ಇದಕ್ಕೂ ಮುನ್ನ ವರ್ಷವಾಧಿ ಜರಗುವ ಮಾರಿ ಪೂಜೆಗೆ ದಿನವನ್ನು ದೇವರ ಸ೦ಮುಖದಲ್ಲಿ ಪ್ರಕಟಿಸಲಾಯಿತು.ಗುರುವಾರ ಡಿ.12ರ೦ದು ನಡೆಸಲು ತೀರ್ಮಾನಿಸಲಾಯಿತು.