ನವೆ೦ಬರ್ 25ರಿ೦ದ ಉಡುಪಿಯ ಕಲ್ಯಾಣಪುರ ಶ್ರೀವೆ೦ಕಟರಮಣ ದೇವಸ್ಥಾನದಲ್ಲಿ ವಾಡಿಕೆಯ೦ತೆ ಜರಗಲಿರುವ ಭಜನಾ ಸಪ್ತಾಹ ಮಹೋತ್ಸವವು ಆರ೦ಭಗೊ೦ಡಿದ್ದು ,ಇದು 97ನೇ ವರ್ಷದ ಭಜನಾ ಸಪ್ತಾಹ ಮಹೋತ್ಸವವಾಗಿರುತ್ತದೆ........ಡಿಸೆಂಬರ್ 1 ರಿಂದ 19ರವರೆಗೆ ಸಂಸತ್ತಿನ ಚಳಿಗಾಲದ ಅಧಿವೇಶನ
ರಮ್ಯಾ, ಉಪೇಂದ್ರ ನಟನೆಯ ‘ರಕ್ತ ಕಾಶ್ಮೀರ’ ಸಿನಿಮಾ ಶೀಘ್ರದಲ್ಲೇ ಬಿಡುಗಡೆ
ನಟಿ ರಮ್ಯಾ ಅವರು ಸಿನಿಮಾವನ್ನು ಬಿಟ್ಟರೂ ಅವರನ್ನು ಸಿನಿಮಾ ಬಿಡುತ್ತಿಲ್ಲ. ಹೌದು, ರಮ್ಯಾ ನಟಿಸಿರುವ ಒಂದು ಸಿನಿಮಾ ಈಗ ಬಿಡುಗಡೆ ಸಜ್ಜಾಗಿದೆ. ಇದನ್ನು ಹೊಸ ಸಿನಿಮಾ ಎನ್ನಬೇಕೋ ಅಥವಾ ಹಳೇ ಸಿನಿಮಾ ಎನ್ನಬೇಕು ಎಂಬುದು ಪ್ರೇಕ್ಷಕರಿಗೆ ಬಿಟ್ಟಿದ್ದು. ಯಾಕೆಂದರೆ, ಈ ಸಿನಿಮಾ ಸೆಟ್ಟೇರಿದ್ದು ಹಲವು ವರ್ಷಗಳ ಹಿಂದೆ. ಒಂದಷ್ಟು ಕಾರಣಗಳಿಂದ ಈ ಚಿತ್ರದ ಕೆಲಸಗಳು ಬಿಳಂಬ ಆಗಿದ್ದವು. ಈಗ ತೆರೆಗೆ ಬರಲು ಸಜ್ಜಾಗಿದೆ. ‘ರಕ್ತ ಕಾಶ್ಮೀರ’ ಎಂಬ ಶೀರ್ಷಿಕೆ ಇರುವ ಈ ಚಿತ್ರದಲ್ಲಿ ಉಪೇಂದ್ರ ಮತ್ತು ರಮ್ಯಾ ಅವರು ಜೋಡಿಯಾಗಿ ನಟಿಸಿದ್ದಾರೆ.
‘ಎಂಡಿಎಂ ಪ್ರೊಡಕ್ಷನ್’ ಬ್ಯಾನರ್ನಲ್ಲಿ ‘ರಕ್ತ ಕಾಶ್ಮೀರ’ ಸಿನಿಮಾ ನಿರ್ಮಾಣ ಆಗಿದೆ. ಹಿರಿಯ ನಿರ್ದೇಶಕ ಎಸ್.ವಿ. ರಾಜೇಂದ್ರ ಸಿಂಗ್ ಬಾಬು ಅವರು ನಿರ್ದೇಶನ ಮಾಡಿದ್ದಾರೆ. ಉಪೇಂದ್ರ ಮತ್ತು ರಮ್ಯಾ ಮುಖ್ಯಪಾತ್ರದಲ್ಲಿ ನಟಿಸಿದ್ದು, ಈಗ ಸಿನಿಮಾದ ಕೆಲಸಗಳು ಕೊನೇ ಹಂತದಲ್ಲಿ ಇವೆ. ಆದಷ್ಟು ಬೇಗ ಸಿನಿಮಾವನ್ನು ಬಿಡುಗಡೆ ಮಾಡಬೇಕು ಎಂದು ಚಿತ್ರತಂಡ ನಿರ್ಧರಿಸಿದೆ.
ಪಾಕ್ ಆಕ್ರಮಿತ ಕಾಶ್ಮೀರವನ್ನು ವಾಪಸ್ ಪಡೆಯುವ ಬಗ್ಗೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ನೀಡಿದ ಹೇಳಿಕೆಯನ್ನು ‘ರಕ್ತ ಕಾಶ್ಮೀರ’ ಸಿನಿಮಾದಲ್ಲಿ ಬಳಸಿಕೊಳ್ಳಲಾಗಿದೆ ಎಂದು ಚಿತ್ರತಂಡ ತಿಳಿದಿದೆ. ಇದು ಈ ಸಿನಿಮಾದ ಮುಖ್ಯ ಕಥಾಹಂದರ ಕೂಡ ಹೌದು. ದೇಶದ ಗಡಿಯಲ್ಲಿ ಮಾತ್ರವಲ್ಲದೇ ಬೆಂಗಳೂರಿನಲ್ಲೂ ಉಗ್ರಗಾಮಿಗಳ ಹಾವಳಿ ಇದೆ. ಅದರ ನಿರ್ಮೂಲನೆಯ ಕುರಿತ ಕಥೆಯನ್ನು ‘ರಕ್ತ ಕಾಶ್ಮೀರ’ ಸಿನಿಮಾದಲ್ಲಿ ತೋರಿಸಲಾಗುವುದು.
‘ರಕ್ತ ಕಾಶ್ಮೀರ’ ಸಿನಿಮಾಗೆ ಎಸ್.ವಿ. ರಾಜೇಂದ್ರ ಸಿಂಗ್ ಬಾಬು ಅವರು ನಿರ್ದೇಶನ ಮಾಡುವುದರ ಜೊತೆಗೆ ಕಥೆ, ಚಿತ್ರಕಥೆ ಬರೆದಿದ್ದಾರೆ. ಎಂ.ಎಸ್. ರಮೇಶ್ ಅವರ ಸಂಭಾಷಣೆ ಈ ಸಿನಿಮಾಗಿದೆ. ಗುರುಕಿರಣ್ ಅವರು ಸಂಗೀತ ನಿರ್ದೇಶನ ಮಾಡಿದ್ದಾರೆ. ಉಪೇಂದ್ರ, ರಮ್ಯಾ ದಿವ್ಯ ಸ್ಪಂದನಾ ಜೊತೆ ದೊಡ್ಡಣ್ಣ, ಕುರಿ ಪ್ರತಾಪ್, ಓಂ ಪ್ರಕಾಶ್ ರಾವ್ ಮುಂತಾದವರು ಅಭಿನಯಿಸಿದ್ದಾರೆ. ಈ ಮೊದಲು ಈ ಚಿತ್ರಕ್ಕೆ ‘ಭೀಮೂಸ್ ಬ್ಯಾಂಗ್ ಬ್ಯಾಂಗ್ ಕಿಡ್ಸ್’ ಎಂದು ಶೀರ್ಷಿಕೆ ಇಡಲಾಗಿತ್ತು. ಈಗ ‘ರಕ್ತ ಕಾಶ್ಮೀರ’ ಎಂದು ಟೈಟಲ್ ಬದಲಾಯಿಸಲಾಗಿದೆ.