ದ.ಕ. ಜಿಲ್ಲೆಯ ಮೂವರಿಗೆ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ರಾಷ್ಟ್ರೀಯ ಪ್ರಶಸ್ತಿ...ಪ್ರಧಾನ ಮಂತ್ರಿ ಯೋಜನೆಗಳಿಗೆ ಮರುನಾಮಕರಣ ಮಾಡದಂತೆ ರಾಜ್ಯಗಳಿಗೆ ಕೇಂದ್ರ ಸರಕಾರದ ಆಗ್ರಹ...VHP ಕಾರ್ಯಕ್ರಮದಲ್ಲಿ ವಿವಾದಾತ್ಮಕ ಹೇಳಿಕೆ: ಸುಪ್ರೀಂಕೋರ್ಟ್ ಕೊಲಿಜಿಯಂ ಮುಂದೆ ನ್ಯಾ. ಶೇಖರ್ ಯಾದವ್ ಹಾಜರಾಗುವ ಸಾಧ್ಯತೆ

ಹತ್ತೇ ಹತ್ತು ನಿಮಿಷದಲ್ಲಿ 2.63 ಕೋಟಿಗೆ ಡಾನ್ ಬ್ರಾಡ್ಮನ್​ ಕ್ಯಾಪ್ ಹರಾಜು

ಕ್ರಿಕೆಟ್ ದಂತಕಥೆ ಡಾನ್ ಬ್ರಾಡ್ಮನ್ ಅವರ ಬ್ಯಾಗಿ ಕ್ಯಾಪ್ ಹತ್ತೇ ಹತ್ತು ನಿಮಿಷಗಳಲ್ಲಿ ಬರೋಬ್ಬರಿ 2.63 ಕೋಟಿ ರೂ.ಗೆ ಹರಾಜಾಗಿದೆ. ಸಿಡ್ನಿಯಲ್ಲಿ ನಡೆದ ಹರಾಜು ಕಾರ್ಯಕ್ರಮದಲ್ಲಿ 1947-48ರ ಭಾರತ ವಿರುದ್ಧದ ಸರಣಿಯಲ್ಲಿ ಆಸ್ಟ್ರೇಲಿಯಾದ ಮಾಜಿ ಆಟಗಾರ ಡಾನ್ ಬ್ರಾಡ್ಮನ್ ಧರಿಸಿದ್ದ ಪ್ರಸಿದ್ಧ ‘ಬ್ಯಾಗಿ ಗ್ರೀನ್’ ಹರಾಜಿಗಿಡಲಾಗಿತ್ತು.

ಖ್ಯಾತ ಕ್ರಿಕೆಟಿಗನ ಈ ಅಪರೂಪದ ಕ್ಯಾಪ್ ಹರಾಜಿನಲ್ಲಿ 10 ನಿಮಿಷಗಳಿಗಿಂತ ಕಡಿಮೆ ಅವಧಿಯಲ್ಲಿ $479,700 (ರೂ. 2.63 ಕೋಟಿ) ಗೆ ಮಾರಾಟವಾಗಿದೆ. ಇದೇ ಕ್ಯಾಪ್ ಧರಿಸಿ ಬ್ರಾಡ್ಮನ್​ ಕೇವಲ 6 ಇನ್ನಿಂಗ್ಸ್‌ಗಳಲ್ಲಿ 178.75 ಸರಾಸರಿಯಲ್ಲಿ 715 ರನ್‌ಗಳಿಸಿದ್ದರು. ಇದರಲ್ಲಿ ಮೂರು ಶತಕ ಹಾಗೂ ಒಂದು ದ್ವಿಶತಕವೂ ಸೇರಿದೆ.

ಫಾಕ್ಸ್ ಸ್ಪೋರ್ಟ್ಸ್ ವರದಿಯ ಪ್ರಕಾರ, ಈ ವಿಶಿಷ್ಟ ಕ್ಯಾಪ್ ಅನ್ನು ಸ್ವತಃ ಬ್ರಾಡ್ಮನ್ ಅವರು ಭಾರತೀಯ ಟೂರ್ ಮ್ಯಾನೇಜರ್ ಪಂಕಜ್ “ಪೀಟರ್” ಕುಮಾರ್ ಗುಪ್ತಾ ಅವರಿಗೆ ಉಡುಗೊರೆಯಾಗಿ ನೀಡಿದ್ದರು. ಈ ಕ್ಯಾಪ್​ ಅನ್ನು ಬೊನ್ಹಾಮ್ಸ್ ಹರಾಜಿನಲ್ಲಿಡಲಾಗಿತ್ತು.

ಇದೀಗ 2.63 ಕೋಟಿ ರೂ.ಗೆ ಮಾರಾಟವಾಗುವ ಮೂಲಕ ಕ್ರಿಕೆಟ್ ಇತಿಹಾಸದಲ್ಲೇ ದುಬಾರಿ ಮೊತ್ತಕ್ಕೆ ಹರಾಜಾದ ಕ್ರಿಕೆಟಿಗನ ವಸ್ತು ಎನಿಸಿಕೊಂಡಿದೆ. ಅಂದಹಾಗೆ ಡಾನ್ ಬ್ರಾಡ್ಮನ್ ಕ್ರಿಕೆಟ್ ಇತಿಹಾಸ ಕಂಡಂತಹ ಸರ್ವಶ್ರೇಷ್ಠ ಬ್ಯಾಟ್ಸ್​ಮನ್.

ಆಸ್ಟ್ರೇಲಿಯಾ ಪರ 52 ಟೆಸ್ಟ್‌ಗಳನ್ನಾಡಿದ್ದ ಬ್ರಾಡ್ಮನ್, 2 ತ್ರಿಶತಕ, 12 ದ್ವಿಶತಕ, 29 ಶತಕಗಳು ಮತ್ತು 13 ಅರ್ಧ ಶತಕಗಳೊಂದಿಗೆ 6996 ರನ್‌ಗಳನ್ನು ಗಳಿಸಿದ್ದಾರೆ. ಅಂದರೆ ಅವರ ಬ್ಯಾಟಿಂಗ್ ಸರಾಸರಿ 99.94 ಇತ್ತು. ಇದು ಕ್ರಿಕೆಟ್ ಇತಿಹಾಸದಲ್ಲೇ ಬ್ಯಾಟರ್​ರೊಬ್ಬರ ಗರಿಷ್ಠ ರನ್ ಸರಾಸರಿ ಎಂಬುದು ವಿಶೇಷ.

ಕ್ರಿಕೆಟ್ ಅಂಗಳದಲ್ಲಿ “ದಿ ಡಾನ್” ಎಂದು ಕರೆಸಿಕೊಂಡಿದ್ದ ಬ್ರಾಡ್ಮನ್ 2001ರಲ್ಲಿ ತಮ್ಮ 92ನೇ ವಯಸ್ಸಿನಲ್ಲಿ ನಿಧನರಾದರು. ಆದರೆ 20 ವರ್ಷಗಳ ತಮ್ಮ ಟೆಸ್ಟ್ ಕೆರಿಯರ್​​ನಲ್ಲಿ ನಿರ್ಮಿಸಿದ ದಾಖಲೆಗಳು ಇನ್ನೂ ಸಹ ಅವರನ್ನು ಅಜರಾಮರರನ್ನಾಗಿರಿಸಿದೆ.

No Comments

Leave A Comment