ಜನವರಿ 16ರ ಮಧ್ಯರಾತ್ರೆಯಿ೦ದ 17ರ ಮಧ್ಯರಾತ್ರೆಯವರೆಗೆ ಜಿಲ್ಲೆಯಲ್ಲಿ ಮಧ್ಯ ಮಾರಾಟ ಬ೦ದ್ ಮಾಡುವ೦ತೆ ಶೀರೂರುಮಠದ ಭಕ್ತರು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಎಸ್ಪಿ,ಮತ್ತು ಅಬಕಾರಿ ಜಿಲ್ಲಾಧಿಕಾರಿಯವರಲ್ಲಿ ವಿನ೦ತಿಸಿಕೊ೦ಡಿದ್ದಾರೆ...

ಭಾಗವತ ಬಾಳೆಹದ್ದ ಕೃಷ್ಣ ಹೆಗಡೆ ನಿಧನ-ತೀವ್ರ ಸಂತಾಪ

ಉಡುಪಿ :  ರಾಗ ತಪಸ್ವಿ, ಗಾನ ಯೋಗಿ ಎಂದೆ ಪ್ರಸಿದ್ಧರಾಗಿದ್ದ ಹಿರಿಯ ಭಾಗವತ ಬಾಳೆಹದ್ದ ಕೃಷ್ಣ ತಿಮ್ಮಯ್ಯ ಹೆಗಡೆ (94) ಡಿ.1ರಂದು ನಿಧನರಾದರು. ಕರ್ನಾಟಕ ಯಕ್ಷಗಾನ ಅಕಾಡೆಮಿ ಪ್ರಶಸ್ತಿ ಪುರಸ್ಕತರಾದ ಇವರು ಪತ್ನಿ ಹಾಗೂ ಪುತ್ರಿಯನ್ನು ಅಗಲಿದ್ದಾರೆ.

ಶಿರಸಿ ಸಮೀಪದ ಬಾಳೆಹದ್ದದಲ್ಲಿ ಜನಿಸಿದ ಕೃಷ್ಣ ಭಾಗವತರು ಏಳು ದಶಕಗಳಿಗೂ ಅಧಿಕ ಕಾಲ ಯಕ್ಷಗಾನ ಪದ್ಯ ಹಾಡುತ್ತಾ ಹೊಸ ಹೊಸ ರಾಗಗಳನ್ನು ಅನ್ವೇಷಿಸುತ್ತಾ ಸಂಗೀತಕ್ಕಾಗಿಯೇ ತಮ್ಮನ್ನು ಸಮರ್ಪಿಸಿ ಕೊಂಡಿದ್ದರು. ಹೊಸ್ತೋಟ ಮಂಜುನಾಥ ಭಾಗವತರೂ ಸೇರಿದಂತೆ ಆ ಕಾಲದ ಹಿರಿಯ ಕಲಾವಿದರೊಂದಿಗೆ ನಿಕಟ ಒಡನಾಟ ಹೊಂದಿದ್ದ ಹೆಗಡೆ ಅವರು, ಯಕ್ಷಗಾನ ಪದ್ಯಗಳಿಗೆ ಹೊಸ ಹೊಸ ರಾಗಗಳನ್ನು ಸಂಯೋಜಿಸುತ್ತಾ ಪ್ರತೀ ವರ್ಷ ನೂರಾರು ತಾಳಮದ್ದಲೆಗಳಲ್ಲಿ ಭಾಗವಹಿಸುತ್ತಿದ್ದರು.

ಎರಡು ವರ್ಷಗಳ ಹಿಂದೆ ಭಾಗವತ, ಸಂಗೀತಜ್ಞರಾಗಿದ್ದ ಪುತ್ರ ತಿಮ್ಮಪ್ಪ ಹೆಗಡೆಯನ್ನು ಕಳೆದುಕೊಂಡಿದ್ದರು. 2018ರಲ್ಲಿ ಯಕ್ಷಗಾನ ಕಲಾರಂಗ ಇವರಿಗೆ ಪ್ರಶಸ್ತಿ ನೀಡಿ ಗೌರಸಿತ್ತು. ಕೃಷ್ಣ ಹೆಗಡೆ ಅವರ ನಿಧನಕ್ಕೆ ಸಂಸ್ಥೆಯ ಅಧ್ಯಕ್ಷ ಎಂ. ಗಂಗಾಧರ ರಾವ್, ಕಾರ್ಯದರ್ಶಿ ಮುರಲಿ ಕಡೆಕಾರ್ ತೀವ್ರ ಸಂತಾಪ ಸೂಚಿಸಿದ್ದಾರೆ.

No Comments

Leave A Comment