ಜನವರಿ 16ರ ಮಧ್ಯರಾತ್ರೆಯಿ೦ದ 17ರ ಮಧ್ಯರಾತ್ರೆಯವರೆಗೆ ಜಿಲ್ಲೆಯಲ್ಲಿ ಮಧ್ಯ ಮಾರಾಟ ಬ೦ದ್ ಮಾಡುವ೦ತೆ ಶೀರೂರುಮಠದ ಭಕ್ತರು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಎಸ್ಪಿ,ಮತ್ತು ಅಬಕಾರಿ ಜಿಲ್ಲಾಧಿಕಾರಿಯವರಲ್ಲಿ ವಿನ೦ತಿಸಿಕೊ೦ಡಿದ್ದಾರೆ...

ಗಡಿಯಲ್ಲಿ ಶಾಂತಿ ಇಲ್ಲದೆ ಇದ್ದರೆ ಭಾರತ-ಚೀನಾ ಸಂಬಂಧ ಸಹಜವಾಗಿರಲು ಸಾಧ್ಯವಿಲ್ಲ: ಲೋಕಸಭೆಯಲ್ಲಿ ಜೈಶಂಕರ್

ನವದೆಹಲಿ: ಗಡಿ ವಿವಾದವನ್ನು ಅಂತ್ಯಗೊಳಿಸಲು ನ್ಯಾಯಯುತ ಮತ್ತು ಪರಸ್ಪರ ಸ್ವೀಕಾರಾರ್ಹ ಒಪ್ಪಂದಕ್ಕೆಬರಲು ಚೀನಾದೊಂದಿಗೆ ಮಾತುಕತೆ ನಡೆಸಲು ಭಾರತ ಬದ್ಧವಾಗಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವ ಎಸ್ ಜೈಶಂಕರ್ ಅವರು ಮಂಗಳವಾರ ಹೇಳಿದ್ದಾರೆ.

ಇಂದು ಲೋಕಸಭೆಯಲ್ಲಿ ಭಾರತ-ಚೀನಾ ಗಡಿ ಪರಿಸ್ಥಿತಿ ಕುರಿತು ಮಾತನಾಡಿದ ಜೈಶಂಕರ್ ಅವರು, ಚೀನಾದ ಕ್ರಮಗಳಿಂದಾಗಿ ಗಡಿಯಲ್ಲಿ ಶಾಂತಿ ಸ್ಥಾಪನೆ ಸಾಧ್ಯವಾಗುತ್ತಿಲ್ಲ ಮತ್ತು ಉದ್ವಿಗ್ನ ಪರಿಸ್ಥಿತಿ ಮುಂದುವರೆದಿದ್ದು, 2020 ರಿಂದ ಭಾರತ-ಚೀನಾ ಸಂಬಂಧ ಸಹಜವಾಗಿಲ್ಲ ಎಂದು ಹೇಳಿದರು.

“2020 ರ ಏಪ್ರಿಲ್-ಮೇನಲ್ಲಿ ಪೂರ್ವ ಲಡಾಖ್‌ನಲ್ಲಿ ಚೀನಾ ಹೆಚ್ಚಿನ ಸಂಖ್ಯೆಯ ಸೈನಿಕರನ್ನು ನಿಯೋಜಿಸಿತ್ತು. ಇದರಿಂದ ನಮಗೆ ಗಸ್ತು ತಿರುಗಲು ತೊಂದರೆಯಾಗಿತ್ತು ಮತ್ತು ಹಲವಾರು ಬಾರಿ ಉಭಯ ದೇಶಗಳ ಸೇನೆ ಮುಖಾಮುಖಿಯಾದವು ಎಂದರು.

No Comments

Leave A Comment