ಉಡುಪಿ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ಜನವರಿ 29ರಿ೦ದ 125 ದಿನಗಳಕಾಲ ನಿರ೦ತರ ಅಹೋರಾತ್ರೆ ಭಜನಾ ಕಾರ್ಯಕ್ರಮವು ಜರಗಲಿದೆ. ಭಜನಾ ಕಾರ್ಯಕ್ರಮವನ್ನು ಕಾಶೀಮಠ ಶ್ರೀಶ್ರೀಸ೦ಯಮೀ೦ದ್ರ ತೀರ್ಥಶ್ರೀಪಾದರು ದೀಪಪ್ರಜ್ವಲನೆ ಮಾಡುವುದರೊ೦ದಿಗೆ ಭಜನಾ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ.
ಮಂಗಳೂರು ಏರ್ಪೋರ್ಟ್ ನಿರ್ಲಕ್ಷ್ಯದಿಂದ ಅದ್ಯಪಾಡಿಯಲ್ಲಿ ಭೂಕುಸಿತ; ಸ್ಥಳೀಯರ ಆರೋಪ
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಫೆಂಗಲ್ ಚಂಡಮಾರುತದ ಅಬ್ಬರ ಹೆಚ್ಚಾಗಿದೆ. ಭಾರೀ ಮಳೆಯಿಂದಾಗಿ ಬಜ್ಪೆ ಸಮೀಪದ ಅದ್ಯಪಾಡಿಯಲ್ಲಿ ಭೂಕುಸಿತ ಉಂಟಾಗಿದೆ. ಬಜ್ಪೆ -ಅದ್ಯಪಾಡಿಯ ಸಂಪರ್ಕ ಕಡಿತವಾಗಿದೆ. ಅದ್ಯಪಾಡಿಯಲ್ಲಿ ಉಂಟಾಗಿರುವ ಭೂಕುಸಿತಕ್ಕೆ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ನಿರ್ಲಕ್ಷ್ಯವೇ ಕಾರಣ ಎಂದು ಸ್ಥಳೀಯರು ಆರೋಪ ಮಾಡಿದ್ದಾರೆ.
ಮಂಗಳೂರು ವಿಮಾನ ನಿಲ್ದಾಣ ಕೆಳಭಾಗದ ಅದ್ಯಪಾಡಿ ಪ್ರದೇಶದಲ್ಲಿ ವಿಮಾನ ನಿಲ್ದಾಣ ಭಾಗದಿಂದ ಮಣ್ಣಿನ ನೀರು ಹರಿದುಬಂದಿದೆ. ಇದರಿಂದ ಗುಡ್ಡದ ಕೆಳಭಾಗದ ಉಮಾನಾಥ ಸಾಲಿಯಾನ್ ಎಂಬುವವರ ಮನೆಗೆ ಹಾನಿಯಾಗಿದೆ. ಅದ್ಯಪಾಡಿಯ ಉಮಾನಾಥ ಸಾಲಿಯಾನ್ ಅವರ ಮನೆಯ ಮುಂಭಾಗದ ಅಂಗಳದಲ್ಲಿ ಕೆಸರು ತುಂಬಿದ ನೀರು ತುಂಬಿಕೊಂಡಿದೆ.
ಮಂಗಳೂರು ಏರ್ಪೋರ್ಟ್ ನಿರ್ಲಕ್ಷದಿಂದ ಭೂಕುಸಿತವಾಗಿದೆ ಎಂದು ಸ್ಥಳೀಯರು ಆರೋಪ ಮಾಡಿದ್ದು, ಸ್ಥಳಕ್ಕೆ ಭೇಟಿ ನೀಡಿದ ತಹಶಿಲ್ದಾರ್ಗೆ ದೂರು ನೀಡಿದ್ದಾರೆ. ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ವಿರುದ್ಧ ಸ್ಥಳೀಯರ ಆಕ್ರೋಶ ವ್ಯಕ್ತವಾಗಿದ್ದು, ಚಂಡಮಾರುತದಿಂದ ವಿಮಾನ ನಿಲ್ದಾಣದ ರನ್ ವೇಯಲ್ಲಿ ನೀರು ತುಂಬಿಕೊಂಡಿತ್ತು. ಅವೈಜ್ಞಾನಿಕವಾಗಿ ನೀರನ್ನು ಏರ್ಪೋರ್ಟ್ ಪ್ರಾಧಿಕಾರ ಹೊರಗೆ ಬಿಟ್ಟಿದೆ. ಏಕಾಏಕಿ ಒಂದೇ ಕಡೆ ನೀರು ಬಿಟ್ಟಿದ್ದರಿಂದ ಅವಘಡ ಉಂಟಾಗಿದೆ. ಇದರಿಂದಾಗಿಯೇ ಭೂಕುಸಿತ ಉಂಟಾಗಿ ಪ್ರವಾಹದ ನೀರು ನುಗ್ಗಿದೆ ಎಂದು ಆರೋಪಿಸಿದ್ದಾರೆ.
ಇದರಿಂದಾಗಿ ಬಜ್ಪೆ-ಅದ್ಯಪಾಡಿಯ ಸಂಪರ್ಕ ಕಡಿತವಾಗಿದೆ. ಮಂಗಳೂರು ವಿಮಾನನಿಲ್ದಾಣ ರನ್ ವೇ ಕಳಗಿನ ಅದ್ಯಪಾಡಿ ಪ್ರದೇಶದಲ್ಲಿ ವಿಮಾನ ನಿಲ್ದಾಣ ಭಾಗದಿಂದ ಹರಿದುಬಂದ ಮಣ್ಣು ನೀರಿನಿಂದ ಭಾರೀ ಸಮಸ್ಯೆ ಎದುರಾಗಿದೆ. ಮನೆಯ ಮುಂಭಾಗದ ಅಂಗಳದಲ್ಲಿ ಮಣ್ಣು, ಕೆಸರು ತುಂಬಿಕೊಂಡಿದೆ.