ಜನವರಿ 16ರ ಮಧ್ಯರಾತ್ರೆಯಿ೦ದ 17ರ ಮಧ್ಯರಾತ್ರೆಯವರೆಗೆ ಜಿಲ್ಲೆಯಲ್ಲಿ ಮಧ್ಯ ಮಾರಾಟ ಬ೦ದ್ ಮಾಡುವ೦ತೆ ಶೀರೂರುಮಠದ ಭಕ್ತರು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಎಸ್ಪಿ,ಮತ್ತು ಅಬಕಾರಿ ಜಿಲ್ಲಾಧಿಕಾರಿಯವರಲ್ಲಿ ವಿನ೦ತಿಸಿಕೊ೦ಡಿದ್ದಾರೆ...
ಶೀರೂರು ಮಠಾಧೀಶರಾದ ಶ್ರೀ ವೇದವರ್ಧನತೀರ್ಥ ಶ್ರೀಪಾದ ಪ್ರಥಮ ಪರ್ಯಾಯಕ್ಕೆ ಡಿ.6ರ೦ದು ಬಾಳೆಮುಹೂರ್ತ
ಉಡುಪಿ:ಭಾವಿ ಪರ್ಯಾಯ ಶೀರೂರು ಮಠದ ಪರ್ಯಾಯ ಪೂರ್ವ ಮುಹೂರ್ತಗಳಲ್ಲಿ ಪ್ರಥಮವಾದ ಬಾಳೆಮುಹೂರ್ತ ಡಿ. 6ರಂದು ಬೆಳಿಗ್ಗೆ 7 ಗಂಟೆಗೆ ವೃಶ್ಚಿಕ ಲಗ್ನ ಸುಹೂರ್ತದಲ್ಲಿ ನಗರದ ಪೂರ್ಣಪ್ರಜ್ಞ ಕಾಲೇಜು ಬಳಿಯ ಶೀರೂರು ಮಠದ ತೋಟದಲ್ಲಿ ನಡೆಯಲಿದೆ ಎಂದು ಶೀರೂರು ಮಠದ ದಿವಾನ ಡಾ. ಉದಯ ಸರಳತ್ತಾಯ ತಿಳಿಸಿದರು.
ಸೋಮವಾರ ಪತ್ರಿಕಾ ಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಆಚಾರ್ಯ ಮಧ್ವರು ಮತ್ತು ಭಾವಿಸಮೀರ ಶ್ರೀ ವಾದಿರಾಜರು ಹಾಕಿಕೊಟ್ಟ ಸಂಪ್ರದಾಯದಂತೆ ಕೃಷ್ಣನ ಪೂಜೆ ಕೇವಲ ಬಿಂಬದಲ್ಲಿ ಮಾತ್ರ ನಡೆಯದೇ ಚೇತನರೂಪಿ ಜನಸಾಮಾನ್ಯರಲ್ಲೂ ಕೃಷ್ಣನನ್ನು ಕಾಣುವ ಕ್ರಮವಾಗಿ ಅನ್ನದಾನಕ್ಕೆ ಪ್ರಾಮುಖ್ಯತೆ ನೀಡಲಾಗಿದೆ. ಅದಕ್ಕೆ ಪೂರಕವಾಗಿ ಪರ್ಯಾಯ ಸಂದರ್ಭದಲ್ಲಿ ಬಾಳೆಎಲೆಗಳಿಗಾಗಿ ಬಾಳೆತೋಟ ನಿರ್ಮಿಸುವ, ಬಾಳೆಎಲೆಯಲ್ಲಿ ಕೃಷ್ಣನಿಗೆ ನೈವೇದ್ಯ ಸಮರ್ಪಿಸಿ ಅದನ್ನು ಪ್ರಸಾದ ರೂಪವಾಗಿ ಭಕ್ತರಿಗೆ ವಿತರಿಸುವ ಆಶಯ ಬಾಳೆಮುಹೂರ್ತ ಹೊಂದಿದೆ.
ಉಡುಪಿ ಕೃಷ್ಣನಿಗೆ ಯತಿಗಳು ಮಾತ್ರ ಅರ್ಚಿಸುವ ಸಂಪ್ರದಾಯವಿದ್ದು, ಕೃಷ್ಣಸೇವೆಯ ಮೂಲಕ ಭಗವಂತನ ಆರಾಧನೆಯಲ್ಲಿ ಸಮಸ್ತರೂ ಪಾಲ್ಗೊಳ್ಳುವ ಆಶಯಕ್ಕೆ ಪೂರಕವಾಗಿ ಶ್ರೀಮಠದ ಸುಮಾರು ಒಂದು ಎಕರೆ ಜಾಗದಲ್ಲಿ ಭಕ್ತರಿಂದಲೇ ಒಂದು ಸಾವಿರ ಬಾಳೆಕಂದುಗಳನ್ನು ನೆಟ್ಟು ಪೋಷಿಸಿ, ಪರ್ಯಾಯ ಕಾಲದಲ್ಲಿ ಅದನ್ನು ಬಳಸುವ ಆಶಯವನ್ನು 2026ರ ಜ. 18ರಂದು ಪ್ರಥಮ ಪರ್ಯಾಯ ದೀಕ್ಷೆ ಸ್ವೀಕರಿಸಲಿರುವ ಶೀರೂರು ಮಠಾಧೀಶ ಶ್ರೀ ವೇದವರ್ಧನತೀರ್ಥ ಶ್ರೀಪಾದರು ಹೊಂದಿದ್ದಾರೆ ಎಂದು ಸರಳತ್ತಾಯ ವಿವರಿಸಿದರು.
ಡಿ.6ರ ಬೆಳಿಗ್ಗೆ 5.30 ಗಂಟೆಗೆ ಶೀರೂರು ಮಠದ ಉಪಾಸ್ಯ ದೇವರಾದ ಶ್ರೀ ಅನ್ನವಿಠಲ ಸನ್ನಿಧಾನದಲ್ಲಿ ಪ್ರಾರ್ಥನೆ ಸಲ್ಲಿಸಿ, ಶ್ರೀ ಅನಂತೇಶ್ವರ- ಚಂದ್ರೇಶ್ವರ, ಕೃಷ್ಣ ಮುಖ್ಯಪ್ರಾಣ ಹಾಗೂ ವೃಂದಾವನ ದರ್ಶನಗೈದು ಪ್ರಆರ್ಥನೆ ಸಲ್ಲಿಸಿ ಮರಳಿ ಶೀರೂರು ಮಠಕ್ಕಾಗಮಿಸಿ, ಮಠದಿಂದ ಶೀರೂರು ಮಠಕ್ಕೆ ಬಾಳೆಕಂದುಗಳನ್ನು ವೇದವಾದ್ಯ ಘೋಷ, ಭಜನೆಯೊಂದಿಗೆ ಮೆರವಣಿಗೆಯಲ್ಲಿ ತೆರಳಿ, ನೆಡಲಾಗುವುದು.
ಸುಮಾರು 1000 ಸಾವಿರ ಸಸಿಗಳನ್ನು ಶೀರೂರು ಮಠದ ತೋಟದಲ್ಲಿ ಹಾಗೂ 14 ಸಾವಿರ ಸಸಿಗಳನ್ನು ಹಿರಿಯಡ್ಕ ಸಮೀಪದ ಶೀರೂರು ಮೂಲಮಠದಲ್ಲಿ ನೆಡಲುದ್ದೇಶಿಸಲಾಗಿದೆ ಎಂದು ಉದಯ ಸರಳತ್ತಾಯ ತಿಳಿಸಿದರು.