ಉಡುಪಿ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ಜನವರಿ 29ರಿ೦ದ 125 ದಿನಗಳಕಾಲ ನಿರ೦ತರ ಅಹೋರಾತ್ರೆ ಭಜನಾ ಕಾರ್ಯಕ್ರಮವು ಜರಗಲಿದೆ. ಭಜನಾ ಕಾರ್ಯಕ್ರಮವನ್ನು ಕಾಶೀಮಠ ಶ್ರೀಶ್ರೀಸ೦ಯಮೀ೦ದ್ರ ತೀರ್ಥಶ್ರೀಪಾದರು ದೀಪಪ್ರಜ್ವಲನೆ ಮಾಡುವುದರೊ೦ದಿಗೆ ಭಜನಾ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ.
ಉಡುಪಿಯ ಶ್ರೀಚಂದ್ರಮೌಳೇಶ್ವರ ವಾರ್ಷಿಕ ದೇವರ ಉತ್ಸವಕ್ಕೆ ಧ್ವಜಾರೋಹಣ
ಉಡುಪಿ:ಉಡುಪಿಯ ಶ್ರೀಚಂದ್ರಮೌಳೇಶ್ವರ ವಾರ್ಷಿಕ ದೇವರ ಉತ್ಸವದ ಅಂಗವಾಗಿ ಕೊಡಿ ಏರುವ (ಧ್ವಜಾರೋಹಣ)ಧಾರ್ಮಿಕ ಕಾರ್ಯಕ್ರಮ ಇಂದು ಭಾನುವಾರ ಬೆಳಿಗ್ಗೆ ಸಂಪನ್ನ ಗೊಂಡಿತು.ಉತ್ಸವವು ಡಿಸೆಂಬರ್ 3 ರಂದು ನಡೆಯಲಿದೆ. ಪರ್ಯಾಯಯತಿಗಳು ಈ ಸ೦ದರ್ಭದಲ್ಲಿ ಉಪಸ್ಥಿತರಿರಲಿದ್ದಾರೆ.