ದ.ಕ. ಜಿಲ್ಲೆಯ ಮೂವರಿಗೆ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ರಾಷ್ಟ್ರೀಯ ಪ್ರಶಸ್ತಿ...ಪ್ರಧಾನ ಮಂತ್ರಿ ಯೋಜನೆಗಳಿಗೆ ಮರುನಾಮಕರಣ ಮಾಡದಂತೆ ರಾಜ್ಯಗಳಿಗೆ ಕೇಂದ್ರ ಸರಕಾರದ ಆಗ್ರಹ...VHP ಕಾರ್ಯಕ್ರಮದಲ್ಲಿ ವಿವಾದಾತ್ಮಕ ಹೇಳಿಕೆ: ಸುಪ್ರೀಂಕೋರ್ಟ್ ಕೊಲಿಜಿಯಂ ಮುಂದೆ ನ್ಯಾ. ಶೇಖರ್ ಯಾದವ್ ಹಾಜರಾಗುವ ಸಾಧ್ಯತೆ
ರಾಮನಗರ: ನವಜಾತ ಶಿಶುವನ್ನು ಟಾಯ್ಲೆಟ್ಗೆ ಹಾಕಿ ಫ್ಲಶ್, ಹಾರೋಹಳ್ಳಿಯಲ್ಲಿ ಮನುಕುಲವೇ ಬೆಚ್ಚಿ ಬೀಳುವ ಘಟನೆ
ರಾಮನಗರ, ನವೆಂಬರ್ 28: ಮಾನವ ಕುಲವೇ ಬೆಚ್ಚಿಬೀಳುವಂಥ ಆಘಾತಕಾರಿ ಕೃತ್ಯವೊಂದು ರಾಮನಗರ ಜಿಲ್ಲೆಯ ಹಾರೋಹಳ್ಳಿಯ ಆಸ್ಪತ್ರೆಯೊಂದರಲ್ಲಿ ನಡೆದಿದೆ. ಆಗತಾನೆ ಜನಿಸಿರುವ ಶಿಶುವೊಂದನ್ನು ಶೌಚಾಲಯದ ಗುಂಡಿಗೆ ಹಾಕಿ ಫ್ಲಶ್ ಮಾಡಲಾಗಿದೆ. ಬುಧವಾರ ರಾತ್ರಿ ನಡೆದ ಈ ಅಮಾನವೀಯ ವಿದ್ಯಮಾನ ಇಂದು ಬೆಳಕಿಗೆ ಬಂದಿದ್ದು, ಹಾರೋಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಾರೋಹಳ್ಳಿಯ ಆಸ್ಪತ್ರೆಯಲ್ಲಿ ನಡೆದಿದ್ದೇನು?
ಬುಧವಾರ ರಾತ್ರಿ 10:30 ರ ಸಮಯದಲ್ಲಿ ಘಟನೆ ನಡೆದಿದೆ ಎನ್ನಲಾಗಿದೆ. ಆಸ್ಪತ್ರೆಯ ನೆಲಮಹಡಿಯ ಟಾಯ್ಲೆಟ್ಗೆ ತೆರಳಿದ್ದ ವೈದ್ಯಕೀಯ ಸಿಬ್ಬಂದಿಗೆ ಮಹಿಳೆಯರ ಟಾಯ್ಲೆಟ್ನಲ್ಲಿ ನೀರು ನಿಂತಿರುವುದು ಗಮನಕ್ಕೆ ಬಂದಿದೆ. ನೀರು ಫ್ಲಶ್ ಆಗದ ಕಾರಣ ವೈದ್ಯಕೀಯ ಸಿಬ್ಬಂದಿ ಟಾಯ್ಲೆಟ್ ಅನ್ನು ಸ್ವಚ್ಛಗೊಳಿಸಲು ಸಿಬ್ಬಂದಿಗೆ ಸೂಚನೆ ನೀಡಿದ್ದರು. ಅದರಂತೆ, ಸಿಬ್ಬಂದಿ ವ್ಯಾಕ್ಯೂಮ್‌ನಿಂದ ಕ್ಲೀನ್ ಮಾಡಿದ್ದಾರೆ. ಆಗ, ಏನೋ ವಸ್ತು ಅಡ್ಡ ಇರುವುದು ಪತ್ತೆಯಾಗಿದೆ. ಆರಂಭದಲ್ಲಿ, ಬಟ್ಟೆ ಅಥವಾ ಏನಾದರು ಕೊಳೆ ಇರಬಹುದು ಎಂದು ಅವರು ಶಂಕಿಸಿದ್ದಾರೆ.
ಟಾಯ್ಲೆಟ್ ಶುಚಿಗೊಳಿಸುವ, ಬ್ಲಾಕ್ ನಿರ್ಮೂಲನೆಗೊಳಿಸುವ ಪರಿಕರವನ್ನು ಬಳಸಿ ಒಳಗೆ ಸಿಕ್ಕಿಹಾಕಿಕೊಂಡಿದ್ದ ವಸ್ತುವನ್ನು ಹೊರ ತೆಗೆದಾಗ ಸಿಬ್ಬಂದಿ ಆಘಾತಕ್ಕೊಳಗಾಗಿದ್ದರು. ನವಜಾತ ಶಿಶುವಿನ ದೇಹ ಅವರಿಗೆ ಸಿಕ್ಕಿದೆ. ಶಿಶು ಜನಿಸಿ ಒಂದೆರಡು ದಿನ ಆಗಿರಬಹುದು ಎಂದು ಅಂದಾಜಿಸಲಾಗಿದೆ.
ಟಾಯ್ಲೆಟ್ ಒಳಗೆ ನವಜಾತ ಶಿಶು ಹೇಗೆ ಬಂದಿರಬಹುದು ಎಂದು ಆಸ್ಪತ್ರೆ ಸಿಬ್ಬಂದಿ ಶಾಕ್ ಆಗಿದ್ದಾರೆ. ಯಾವ ತಾಯಿ ಕೂಡ ಹೀಗೆ ಮಾಡಲು ಸಾಧ್ಯವೇ ಎಂದು ಸ್ಥಳದಲ್ಲಿದ್ದವರು ಕಳವಳ ವ್ಯಕ್ತಪಡಿಸಿದ್ದಾರೆ. ಅದೇ ಆಸ್ಪತ್ರೆಯಲ್ಲಿ ಶಿಶುವಿನ ಮೃತದೇಹದ ಮರಣೋತ್ತರ ಪರೀಕ್ಷೆ ನಡೆಸಲಾಗಿದೆ.
ಆಸ್ಪತ್ರೆಗೆ ಬಂದು ಶಿಶುವಿಗೆ ಜನ್ಮ ಕೊಟ್ಟಿರುವುದೇ ಅಥವಾ ಮಗು ಜನಿಸಿದ್ದನ್ನು ಮುಚ್ಚಿಡಲು ಮಾಡಿದ ಕೃತ್ಯವೇ ಎಂಬ ಬಗ್ಗೆ ಸದ್ಯ ತನಿಖೆ ನಡೆಸಲಾಗುತ್ತಿದೆ. ಆಸ್ಪತ್ರೆಯ ಸಿಸಿಟಿವಿ ದೃಶ್ಯಗಳನ್ನು ಪರಿಶೀಲನೆಗೆ ಒಳಪಡಿಸಲಾಗುತ್ತಿದೆ. ಇನ್ನಷ್ಟು ವಿಚಾರಗಳು ತನಿಖೆಯಿಂದ ತಿಳಿದುಬರಬೇಕಿದೆ.