ಉಡುಪಿ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ಜನವರಿ 29ರಿ೦ದ 125 ದಿನಗಳಕಾಲ ನಿರ೦ತರ ಅಹೋರಾತ್ರೆ ಭಜನಾ ಕಾರ್ಯಕ್ರಮವು ಜರಗಲಿದೆ. ಭಜನಾ ಕಾರ್ಯಕ್ರಮವನ್ನು ಕಾಶೀಮಠ ಶ್ರೀಶ್ರೀಸ೦ಯಮೀ೦ದ್ರ ತೀರ್ಥಶ್ರೀಪಾದರು ದೀಪಪ್ರಜ್ವಲನೆ ಮಾಡುವುದರೊ೦ದಿಗೆ ಭಜನಾ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ.
ಉಡುಪಿ ನಗರಸಭೆಯ ಸಭಾ೦ಗಣದಲ್ಲಿ ಮಾಜಿ ಅಧ್ಯಕ್ಷರಾದ ದಿವ೦ಗತ ಎ೦. ಸೋಮಶೇಖರ್ ಭಟ್ ರವರ ಭಾವಚಿತ್ರ ಅನಾವರಣ
ಉಡುಪಿ:ನ,25. ನಗರ ಸಭೆಯ ಮಾಜಿ ಅಧ್ಯಕ್ಷರಾದ ದಿ . ಮಲ್ಪೆ ಸೋಮಶೇಖರ್ ಭಟ್ ರವರ ಭಾವಚಿತ್ರ ಅನಾವರಣ ಕಾರ್ಯಕ್ರಮ ಇತ್ತೀಚಿಗೆ ನೆಡೆಯಿತು.
ಜನ ಸಂಘ ಹಾಗೂ ಬಿಜೆಪಿ ಮುಖಂಡ ರಾದ ದಿ .( ಸೋಮಣ್ಣ ) ಮಲ್ಪೆ ಸೋಮಶೇಖರ್ ಭಟ್ ಈ ಹಿಂದೆ ಉಡುಪಿ ನಗರ ಸಭೆಯ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ ಸೇವೆಯನ್ನು ಪರಿಗಣಿಸಿ ನಗರಸಭೆಯ ಸಭಾಂಗಣದಲ್ಲಿ ದಿ .( ಸೋಮಣ್ಣ ) ರವರ ಭಾವ ಚಿತ್ರ ಅನಾವರಣವನ್ನು ಉಡುಪಿ ಶಾಸಕರಾದ ಯಶಪಾಲ್ ಸುವರ್ಣ ನೆರವೇರಿಸಿದರು.
ವೇದಿಕೆಯಲ್ಲಿ ನಗರಸಭೆಯ ಅಧ್ಯಕ್ಷರಾದ ಪ್ರಭಾಕರ್ ಪೂಜಾರಿ , ಉಪಾಧ್ಯಕ್ಷೆ ರಜನಿ ಹೆಬ್ಬಾರ್ , ಸ್ಥಾಯೀ ಸಮಿತಿಯ ಅಧ್ಯಕ್ಷರಾದ ಸುಂದರ್ ಕಲ್ಮಾಡಿ , ಮಾಜಿ ಅಧ್ಯಕ್ಷರಾದ ಚಿತ್ತರಂಜನ್ ಹೆಗ್ಡೆ ,ಕಿರಣ್ ಕುಮಾರ್ ಬೈಲೂರು ,ನಗರ ಸಭೆಯ ಮಾಜಿ ಸದಸ್ಯರಾದ ಆನ೦ದ ಶೆಟ್ಟಿ ,ಹಾಲಿ ನಗರಸಭಾ ಸದಸ್ಯರಾದ ರಶ್ಮಿ ಚಿತ್ತರಂಜನ್ ಭಟ್ , ವಿಜಯ್ ಕೊಡವೂರು , ಗಿರೀಶ್ ಅಂಚನ್ , ಮೋಹನ್ ಉಪದ್ಯಾಯ , ಹಾಗೂ ನಗರಸಭೆಯ ಅಧಿಕಾರಿಗಳು ಹಾಗೂ ಸೋಮಶೇಖರ್ ಭಟ್ ರವರ ಸುಪುತ್ರರಾದ ಚಿತ್ತರ೦ಜನ್ ಭಟ್,ವಲ್ಲಭ ಭಟ್ ರವರು ಉಪಸ್ಥಿತರಿದ್ದರು.