ಜನವರಿ 18ರಿ೦ದ ಶೀರೂರು ಮಠಾಧೀಶರಾದ ಶ್ರೀವೇದವರ್ಧನ ಶ್ರೀಪಾದರ ಪ್ರಥಮ ಪರ್ಯಾಯ ಆರ೦ಭ-ಅದ್ದೂರಿಯ ಧಾನ್ಯ, ಶಿಖರ ಮುಹೂರ್ತ ಸ೦ಪನ್ನ…..ಉಡುಪಿ ಮೋಟಾರ್ಸ್ ನಲ್ಲಿ ಯಮಹಾ ಕಂಪೆನಿಯ ನೂತನ ರೆಟ್ರೋ ಮೊಡೆಲ್ ಬೈಕ್ ‘XSR 155 ಮಾರುಕಟ್ಟೆಗೆ ಬಿಡುಗಡೆ

ಹೊಸ ವ್ಯಾಪಾರ ಆರಂಭಿಸಿದ ಡೊನಾಲ್ಡ್ ಟ್ರಂಪ್

ಅಮೆರಿಕದ ಹೊಸ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತೊಂದು ನವೀನ ವ್ಯವಹಾರ ಆರಂಭಿಸಿದ್ದಾರೆ. ಹೊಸದಾಗಿ ಎಲೆಕ್ಟ್ರಿಕ್ ಗಿಟಾರ್ ವ್ಯಾಪಾರವನ್ನು ಪ್ರಾರಂಭಿಸಿದ್ದು, ಈ ಗಿಟಾರ್‌ಗಳನ್ನು ವಿಶೇಷವಾಗಿ ವಿನ್ಯಾಸಗೊಳಿಸಲಾಗಿದೆ. ಈ ವ್ಯವಹಾರವನ್ನು ಸಾಮಾಜಿಕ ಮಾಧ್ಯಮದಲ್ಲಿ ಟ್ರಂಪ್ ಘೋಷಿಸಿದ್ದಾರೆ.

ಅಮೆರಿಕದ ಧ್ವಜ ಮತ್ತು ಹದ್ದಿನ ಆಕೃತಿಗಳು ಈ ಗಿಟಾರ್ ನಲ್ಲಿ ಆಕರ್ಷಕವಾಗಿ ಕಾಣುತ್ತವೆ. ‘ಮೇಕ್ ಅಮೇರಿಕಾ ಗ್ರೇಟ್ ಅಗೇನ್’ ಎಂಬ ಘೋಷವಾಕ್ಯಗಳನ್ನು ಕೂಡ ಗಿಟಾರ್‌ನಲ್ಲಿ ಕಾಣಬಹುದು. ಇದಲ್ಲದೆ ಅವುಗಳಲ್ಲಿ ಕೆಲವು ಗಿಟಾರ್‌ಗಳಿಗೆ ಟ್ರಂಪ್ ಸಹಿ ಮಾಡಿದ್ದಾರೆ.

ಟ್ರಂಪ್ ಅವರ ಆಟೋಗ್ರಾಫ್ ಹೊಂದಿರುವ ಎಲೆಕ್ಟ್ರಿಕ್ ಗಿಟಾರ್‌ಗಳಿಗೆ ವಿಶೇಷ ಬೆಲೆ ನಿಗದಿಪಡಿಸಲಾಗಿದೆ. ಟ್ರಂಪ್ ಸಹಿ ಮಾಡಿರುವ ಗಿಟಾರ್ ಗಳ ಬೆಲೆ 10 ಸಾವಿರ ಡಾಲರ್ (8.45 ಲಕ್ಷ ರೂ.) ಎಂದು ಘೋಷಿಸಲಾಗಿದ್ದು, ಸಹಿ ಹಾಕಿದ ಗಿಟಾರ್​ ಕೇವಲ 275 ಮಾತ್ರ ಇವೆ ಎಂದು ಹೇಳಲಾಗಿದೆ.

ಒಟ್ಟು ನಾಲ್ಕು ಬಗೆಯ ಗಿಟಾರ್‌ಗಳನ್ನು ಮಾರಾಟ ಮಾಡುವುದಾಗಿ ‘ಟ್ರಂಪ್ ಗಿಟಾರ್ಸ್’ ವೆಬ್‌ಸೈಟ್ ಬಹಿರಂಗಪಡಿಸಿದೆ. ಈ ಹಿಂದೆ ಟ್ರಂಪ್ ಬೈಬಲ್ ಮತ್ತು ವಾಚ್‌ಗಳ ವ್ಯಾಪಾರವನ್ನು ಪ್ರಾರಂಭಿಸಿದ್ದರು.

No Comments

Leave A Comment