ನವೆ೦ಬರ್ 25ರಿ೦ದ ಉಡುಪಿಯ ಕಲ್ಯಾಣಪುರ ಶ್ರೀವೆ೦ಕಟರಮಣ ದೇವಸ್ಥಾನದಲ್ಲಿ ವಾಡಿಕೆಯ೦ತೆ ಜರಗಲಿರುವ ಭಜನಾ ಸಪ್ತಾಹ ಮಹೋತ್ಸವವು ಆರ೦ಭಗೊ೦ಡಿದ್ದು ,ಇದು 97ನೇ ವರ್ಷದ ಭಜನಾ ಸಪ್ತಾಹ ಮಹೋತ್ಸವವಾಗಿರುತ್ತದೆ........ಡಿಸೆಂಬರ್ 1 ರಿಂದ 19ರವರೆಗೆ ಸಂಸತ್ತಿನ ಚಳಿಗಾಲದ ಅಧಿವೇಶನ

ಕಾರ್ಕಳ: ದ್ವೇಷ ಹರಡುವ ಆರೋಪ ; ಹಿಂ.ಜಾ.ವೇ. ಮುಖಂಡನ ಮೇಲೆ ಕೇಸ್ ದಾಖಲು

ಕಾರ್ಕಳ: ಹಿಂದೂ ಜಾಗರಣ ವೇದಿಕೆಯ ಮುಖಂಡ ಕಾರ್ಕಳದ ಶ್ರೀಕಾಂತ್ ಶೆಟ್ಟಿ‌ ಎಂಬುವವರ ಮೇಲೆ ಕಾರ್ಕಳ ಪೊಲೀಸ್ ಠಾಣೆಯಲ್ಲಿ ಕೇಸು ದಾಖಲು ಆಗಿದೆ.

 ಬೇರೆ ಬೇರೆ ಸಮುದಾಯಗಳ ನಡುವೆ ವೈರತ್ವ, ದ್ವೇಷ ಹಾಗೂ ವೈಮನಸ್ಸಿನ ಭಾವನೆಗಳನ್ನು ಉಂಟು ಮಾಡುವ ವೀಡಿಯೋವನ್ನು ಚಿತ್ರೀಕರಿಸಿ, ಅಶಾಂತಿ ಸೃಷ್ಠಿಸುವ ಉದ್ದೇಶದಿಂದ ವೀಡಿಯೋ ವೈರಲ್‌ ಮಾಡಿದ್ದಾರೆ .

ಎಂಬ ಆರೋಪದಡಿ ಕಾರ್ಕಳ ನಗರ ಪೊಲೀಸ್‌ ಠಾಣೆಯಲ್ಲಿ ಅಪರಾಧ ಕ್ರಮಾಂಕ: 188/2024 ಕಲಂ:  ಕಲಂ: 353(2) BNSನಂತೆ ಪ್ರಕರಣ ದಾಖಲಾಗಿರುತ್ತದೆ.

No Comments

Leave A Comment