ಉಡುಪಿ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ಜನವರಿ 29ರಿ೦ದ 125 ದಿನಗಳಕಾಲ ನಿರ೦ತರ ಅಹೋರಾತ್ರೆ ಭಜನಾ ಕಾರ್ಯಕ್ರಮವು ಜರಗಲಿದೆ. ಭಜನಾ ಕಾರ್ಯಕ್ರಮವನ್ನು ಕಾಶೀಮಠ ಶ್ರೀಶ್ರೀಸ೦ಯಮೀ೦ದ್ರ ತೀರ್ಥಶ್ರೀಪಾದರು ದೀಪಪ್ರಜ್ವಲನೆ ಮಾಡುವುದರೊ೦ದಿಗೆ ಭಜನಾ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ.
ಉಡುಪಿಯಲ್ಲಿ ಕೆನರಾ ಬ್ಯಾಂಕ್ ಸಂಸ್ಥಾಪಕರ ದಿನಾಚರಣೆ
ಉಡುಪಿ:ಕೆನರಾ ಬ್ಯಾಂಕ್ ಸಂಸ್ಥಾಪಕ ಅಮ್ಮೆಂಬಳ ಸುಬ್ಬರಾವ್ ಪೈ ಯವರ ಜನ್ಮದಿನವನ್ನು ಕೆನರಾ ಬ್ಯಾಂಕ್ ನಿವೃತ್ತ ಅಧಿಕಾರಿಗಳ ಸಂಘಟನೆ,ಉಡುಪಿ ಘಟಕ ದ ವತಿಯಿಂದ ಸಂಸ್ಥಾಪಕರ ದಿನವನ್ನಾಗಿ ನವೆಂಬರ್ 19 ರಂದು ಉಡುಪಿಯ ಹಿಂದಿ ಪ್ರಚಾರ ಸಮಿತಿಯ ಸಭಾಂಗಣದಲ್ಲಿ ಆಚರಿಸಲಾಯಿತು.
ಪ್ರದೀಪ ಆರ್ ಭಕ್ತ ರವರು ಸಮಾರಂಭದ ಅಧ್ಯ್ಷತೆಯನ್ನು ವಹಿಸಿದ್ದರು.ಪ್ರಾರ್ಥನೆಯ ಬಳಿಕ ಶ್ರೀ ಸುಧೀಂದ್ರ ಭಂಡಾರಿ ಯವರು ಸ್ವಾಗತಿಸಿದರು. ನಂತರ ದೀಪಬೆಳಗಿಸಿ ಸಂಸ್ಥಾಪಕರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಲಾಯ್ತು.
ಮಾರುತಿ ಪ್ರಭು ರವರು ಸುಬ್ಬರಾವ್ ಪೈಯವರ ಜೀವನಚರಿತ್ರೆಯ ಕುರಿತು ಮಾತನಾಡಿದರು.ಮೋಹನದಾಸ ನಾಯಕ್ ರವರು ಸಂಘಟನೆಯು ಕಳೆದ ಹತ್ತು ವರ್ಷಗಳಿಂದ ಸಂಸ್ಥಾಪಕರ ದಿನಾಚರಣೆ ಅಂಗವಾಗಿ ಕನ್ನಡ ಮಾಧ್ಯಮದ ಸರಕಾರಿ ಶಾಲೆಗಳಿಗೆ ರೂ 12.25 ಲಕ್ಷ ವೆಚ್ಚದಲ್ಲಿ ನೀಡಿದ ಕೊಡುಗೆಗಳ ಬಗ್ಗೆ ವಿವರಿಸಿದರು.
ಈ ಸಂದರ್ಭದಲ್ಲಿ ನಂಚಾರು ಸರಕಾರಿ ಕಿರಿಯ ಪ್ರಾಥಮಿಕ ಶಾಲೆಗೆ ಆಟೋಟ ಸಾಮಗ್ರಿಗಳನ್ನು ಹಾಗು ಹೊಳೆಬಾಗಿಲು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಗಣಿತ ಕಿಟ್ ಗಳನ್ನು ವಿತರಿಸಲಾಯಿತು.ಇದರೊಂದಿಗೆ ಸಂಸ್ಥಾಪಕರ ಜೀವನಚರಿತ್ರೆ ಆಧಾರಿತ ಪುಸ್ತಕವನ್ನೂ ನೀಡಲಾಯ್ತು. ಈ ಎರಡೂ ಶಾಲೆಯ ಮುಖ್ಯೋಪಾಧ್ಯಾಯಿನಿಯರು ಶಾಲಾ ಮಕ್ಕಳ ಅವಶ್ಯಕ ಬೇಡಿಕೆಯನ್ನು ಈಡೇರಿಸಿದ್ದಕ್ಕಾಗಿ ಸಂಘಟನೆಯ ಸಹಕಾರವನ್ನು ಶ್ಲಾಘಿಸಿದರು.
ಯೋಗೀಶ್ ಭಟ್ ರವರು ಸದಸ್ಯರ ಅನುಕೂಲಕ್ಕಾಗಿ ಸಂಘಟನೆಯ ಸ್ವಯಂಸೇವಕರು ಮಾಡುತ್ತಿರುವ ನಿಸ್ವಾರ್ಥಸೇವೆಯನ್ನು ಸ್ಮರಿಸಿ ಅಭಿನಂದಿಸಿದರು.
ಅಧ್ಯಕ್ಷ ಪ್ರದೀಪ ಭಕ್ತರು ಶಿಕ್ಷಕರು ಗ್ರಾಮೀಣ ಶಾಲೆ ಯಲ್ಲಿ ಕಲಿಯುತ್ತಿರುವ ವಿದ್ಯಾರ್ಥಿಗಳಲ್ಲಿರುವ ಪ್ರತಿಭೆ ಗಳನ್ನು ಗುರುತಿಸಿ ಬೆಳಕಿಗೆ ತರುವಲ್ಲಿ ಮುತುವರ್ಜಿವಹಿಸಬೇಕೆಂದು ನುಡಿದರು.
ಮಾರುತಿ ಪ್ರಭು ರವರು ಕಾರ್ಯಕ್ರಮವನ್ನು ನಿರ್ವಹಿಸಿದರು. ಕೊನೆಯಲ್ಲಿ ಸುಧೀಂದ್ರ ಭಂಡಾರಿಯವರು ವಂದಿಸಿದರು. ಸಂಘಟನೆಯ ಸದಸ್ಯರು,ಸಹಸದಸ್ಯರು ಉಪಸ್ಥಿತರಿದ್ದರು.