ಜನವರಿ 16ರ ಮಧ್ಯರಾತ್ರೆಯಿ೦ದ 17ರ ಮಧ್ಯರಾತ್ರೆಯವರೆಗೆ ಜಿಲ್ಲೆಯಲ್ಲಿ ಮಧ್ಯ ಮಾರಾಟ ಬ೦ದ್ ಮಾಡುವ೦ತೆ ಶೀರೂರುಮಠದ ಭಕ್ತರು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಎಸ್ಪಿ,ಮತ್ತು ಅಬಕಾರಿ ಜಿಲ್ಲಾಧಿಕಾರಿಯವರಲ್ಲಿ ವಿನ೦ತಿಸಿಕೊ೦ಡಿದ್ದಾರೆ...
ಉಡುಪಿ ಶ್ರೀಕೃಷ್ಣನದರ್ಶನ ಪಡೆದ ನ್ಯಾಯಾಧೀಶರ ತಂಡ
ಉಡುಪಿ: ಜಿಲ್ಲಾ ನ್ಯಾಾಯಾಲಯದ ಆವರಣದಲ್ಲಿ ಉಡುಪಿ ನ್ಯಾಾಯಾಲಯ ಮತ್ತು ವಕೀಲರ ಸಂಘದ 125 ನೇ ವರ್ಷದ ಶತಮಾನೋತ್ತರ ರಜತ ಮಹೋತ್ಸವ ಕಾರ್ಯಕ್ರಮಕ್ಕೆೆ ಆಗಮಿಸಿದ ನ್ಯಾಾಯಾಧೀಶರು ಶ್ರೀಕೃಷ್ಣ ಮಠಕ್ಕೆೆ ರವಿವಾರ ಭೇಟಿ ನೀಡಿದರು.
ಸುಪ್ರೀಂ ಕೋರ್ಟ್ ನ್ಯಾಾಯಮೂರ್ತಿ ಅರವಿಂದ್ ಕುಮಾರ್,ಹೈಕೋರ್ಟ್ ನ್ಯಾಾಯಮೂರ್ತಿ ಎನ್.ವಿ.ಅಂಜಾರಿಯಾ,ಹೈಕೋರ್ಟ್ ನ್ಯಾಾಯಾಧೀಶರಾದ ಎಂ.ಜಿ.ಉಮಾ,ರಾಮಚಂದ್ರ ಡಿ.ಹುದ್ದಾಾರ್, ಟಿ.ವೆಂಕಟೇಶ್ ನಾಯ್‌ಕ್, ಹೈಕೋರ್ಟ್ ರಿಜಿಸ್ಟ್ರಾಾರ್ ಜನರಲ್ ಕೆ.ಎಸ್.ಭರತ್ ಕುಮಾರ್,ಅಡ್ವಕೇಟ್ ಜನರಲ್ ಶಶಿಕಿರಣ್ ಎಸ್.ಶೆಟ್ಟಿಿ, ಉಡುಪಿ ಜಿಲ್ಲಾಾ ಸತ್ರ ನ್ಯಾಾಯಾಧೀಶರಾದ ಕಿರಣ್ ಎಸ್.ಗಂಗಣ್ಣನವರ್ ಭೇಟಿ ನೀಡಿ ಪರ್ಯಾಯಪುತ್ತಿಿಗೆ ಶ್ರೀ ಪರ್ಯಾಯ ಶ್ರೀಪಾದರಿಂದ ಅನುಗ್ರಹ ಮಂತ್ರಾಾಕ್ಷತೆ ಪಡೆದುಕೊಂಡು ಕೋಟಿಗೀತಾಲೇಖನ ಯಜ್ಞದ ದೀಕ್ಷೆಯನ್ನು ಪಡೆದುಕೊಂಡರು.