ಉಡುಪಿ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ಜನವರಿ 29ರಿ೦ದ 125 ದಿನಗಳಕಾಲ ನಿರ೦ತರ ಅಹೋರಾತ್ರೆ ಭಜನಾ ಕಾರ್ಯಕ್ರಮವು ಜರಗಲಿದೆ. ಭಜನಾ ಕಾರ್ಯಕ್ರಮವನ್ನು ಕಾಶೀಮಠ ಶ್ರೀಶ್ರೀಸ೦ಯಮೀ೦ದ್ರ ತೀರ್ಥಶ್ರೀಪಾದರು ದೀಪಪ್ರಜ್ವಲನೆ ಮಾಡುವುದರೊ೦ದಿಗೆ ಭಜನಾ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ.

ಕಾಪು:ಕಾರೊ೦ದು ಬೈಕಿಗೆ ಡಿಕ್ಕಿ ಸವಾರ ಮೂರು ದಿನಗಳ ಬಳಿಕ ಆಸ್ಪತ್ರೆಯಲ್ಲಿ ನಿಧನ

ಕಾಪು:ಕಾಪುವಿನ ಬೆಳಪು ಎ೦ಬಲ್ಲಿ ಕಾರೊ೦ದು ಬೈಕಿಗೆ ಡಿಕ್ಕಿಹೊಡೆದರ ಪರಿಣಾಮವಾಗಿ ಕಾರು ಚಲಾಯಿಸುತ್ತಿದ್ದ ಯುವಕನು ಬೈಕು ಸವಾರನ ಮನೆಗೆತೆರಳಿ 5,000/-ಯನ್ನು ನೀಡಿ ಸ೦ತ್ವಾನ ಹೇಳಿದ್ದು ಇದೀಗ ಬೈಕ್ ಸವಾರನು ಮಣಿಪಾಲದ ಸ್ಥಳೀಯ ಆಸ್ಪತ್ರೆಯೊ೦ದರಲ್ಲಿ ನಿಧನಹೊ೦ದಿರುವ ಘಟನೆಯೊ೦ದು ವರದಿಯಾಗಿದೆ.

ಕಾರು ಚಲಾಯಿಸುತ್ತಿದ್ದ ಯುವಕನು ಕಾಪುವಿನ ಪ್ರತಿಷ್ಠಿತ ಕಾ೦ಗ್ರೆಸ್ ರಾಜಕೀಯ ಮುಖ೦ಡ ಹಾಗೂ ಸಹಕಾರಿ ಧುರೀಣರ ಮಗನೆ೦ದು ತಿಳಿದು ಬ೦ದಿದೆ.

ಇದೀಗ ಬೈಕ್ ಸವಾರ ಮೊಹಮದ್ ಹುಸೇನ್ 38 ಚಿಕಿತ್ಸೆ ಫಲಕಾರಿಯಾಗದೇ ನಿಧನಹೊ೦ದಿದ ಸುದ್ದಿಯನ್ನು ತಿಳಿದು ಕಾರು ಚಲಾಯಿಸುತ್ತಿದ್ದ ಪ್ರಜ್ವಲ್ ತಲೆಮರೆಸಿಕೊ೦ಡಿದ್ದಾನೆ೦ದು ಮೂಲಗಳಿ೦ದ ತಿಳಿದು ಬ೦ದಿದೆ.

ಮೂಲಗಳ ಪ್ರಕಾರ ಕಾರು ಚಾಲಕನಿಗೆ ಶಿರ್ವಠಾಣೆಯಲ್ಲಿ ಠಾಣೆಯಲ್ಲಿಯೇ ಬೇಲ್ ಪಡೆದುಕೊಳ್ಳಲ್ಲುವಲ್ಲಿ ಕಾಣದ ಕೈಗಳಿ೦ದ ಭಾರೀ ಪ್ರಯತ್ನ ನಡೆಯುತ್ತಿದೆ.ಅದರೆ ನ್ಯಾಯಾಲಯಕ್ಕೆ ದ೦ಡಕಟ್ಟಿದರೂ ಈ ಚಾಲಕ ತಪ್ಪು ಒಪ್ಪಿಕೊ೦ಡ೦ತೆ ಮಾತ್ರವಲ್ಲದೇ ನಿರ೦ತರ ನ್ಯಾಯಾಲದ ಕಟಕಟ್ಟೆಗೆ ಅಲೆದಾಟ ಮಾತ್ರ ತಪ್ಪದು ಪೊಲೀಸ್ ಮೂಲಗಳಿ೦ದ ತಿಳಿದು ಬ೦ದಿದೆ.

kiniudupi@rediffmail.com

No Comments

Leave A Comment