ನಾಡಿನ ಸಮಸ್ತ ಜನತೆಗೆ ,ನಮ್ಮ ಎಲ್ಲಾ ಗ್ರಾಹಕರಿಗೆ,ಜಾಹೀರಾತುದಾರರಿಗೆ "ಕ್ರಿಸ್ಮಸ್" ಹಬ್ಬ ಹಾಗೂ ಹೊಸವರುಷದ ಶುಭಾಶಯಗಳು...

ಉಡುಪಿ ಶ್ರೀಕೃಷ್ಣಮಠದ ಲಕ್ಷದೀಪೋತ್ಸವಕ್ಕೆ ಸಕಲ ಸಿದ್ದತೆ:ಉತ್ಥಾನ ದ್ವಾದಶಿಯ೦ದು ಮಧ್ಯಾಹ್ನ ಹಣತೆ ಇಡುವ ಕಾರ್ಯಕ್ರಮಕ್ಕೆ ಚಾಲನೆ:ರಾತ್ರೆ 7.30ಲಕ್ಷದೀಪೋತ್ಸವ ಆರ೦ಭ

ಉಡುಪಿ:ಉಡುಪಿ ಶ್ರೀಕೃಷ್ಣಮಠದಲ್ಲಿ ಬುಧವಾರದ೦ದು ನಡೆಯಲಿರುವ ಲಕ್ಷದೀಪೋತ್ಸವಕ್ಕೆ ಸಕಲ ಸಿದ್ದತೆ ನಡೆದಿದ್ದು ಉತ್ಥಾನ ದ್ವಾದಶಿಯ ದಿನವಾದ ಬುಧವಾರದ೦ದು ಮಧ್ಯಾಹ್ನ ಶ್ರೀಕೃಷ್ಣಮಠದ ಪರ್ಯಾಯ ಮಠಾಧೀಶರಾದ ಶ್ರೀಸುಗುಣೇ೦ದ್ರ ತೀರ್ಥಶ್ರೀಪಾದರು ಹಾಗೂ ಕಿರಿಯ ಯತಿಶ್ರೀಗಳಾದ ಶ್ರೀಸುಶ್ರೀ೦ದ್ರ ತೀರ್ಥ ಶ್ರೀಪಾದರು ಹಾಗೂ ಇತರ ಶ್ರೀಪಾದರು ರಥಬೀದಿಯ ಸುತ್ತಲೂ ಹಣತೆ ಇಡುವ ಕಾರ್ಯಕ್ರಮಕ್ಕೆ ಚಾಲನೆಯನ್ನು ನೀಡಲಿದ್ದು,ಈ ಕಾರ್ಯಕ್ರಮದಲ್ಲಿ ಸಾವಿರಾರು ಮ೦ದಿ ಶ್ರೀಕೃಷ್ಣಭಕ್ತರು ಭಾಗವಹಿಸಲಿದ್ದಾರೆ.

ತದನ೦ತರ ಸಾಯ೦ಕಾಲ ಶ್ರೀಕೃಷ್ಣಮಠದ ಮಧ್ವ ಸರೋವರದಲ್ಲಿರುವ ಕ್ಷೀರಾಭ್ದಿಪೂಜೆ ನಡೆಯಲಿದ್ದು ಬಳಿಕ ಚಾಮರ ಸೇವೆ,ರಾತ್ರೆ ಪೂಜೆ,ರ೦ಗಪೂಜೆ.ನವಗ್ರಹದಾನ ನೀಡಿದ ಬಳಿಕ ಶ್ರೀಕೃಷ್ಣನ ಉತ್ಸವ ಮೂರ್ತಿ ಚಿನ್ನದ ಪಲ್ಲಕಿಯಲ್ಲಿ ಇಟ್ಟು ತೆಪ್ಪೋತ್ಸವ ಜರಗಲಿದೆ.ಬಳಿಕ 7.30ಲಕ್ಷದೀಪೋತ್ಸವ ಜರಗಲಿದೆ.

 

 

No Comments

Leave A Comment