ಉಡುಪಿ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ಜನವರಿ 29ರಿ೦ದ 125 ದಿನಗಳಕಾಲ ನಿರ೦ತರ ಅಹೋರಾತ್ರೆ ಭಜನಾ ಕಾರ್ಯಕ್ರಮವು ಜರಗಲಿದೆ. ಭಜನಾ ಕಾರ್ಯಕ್ರಮವನ್ನು ಕಾಶೀಮಠ ಶ್ರೀಶ್ರೀಸ೦ಯಮೀ೦ದ್ರ ತೀರ್ಥಶ್ರೀಪಾದರು ದೀಪಪ್ರಜ್ವಲನೆ ಮಾಡುವುದರೊ೦ದಿಗೆ ಭಜನಾ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ.
ಉಡುಪಿಯಲ್ಲಿ ನೇತ್ರಜ್ಯೋತಿ ಇನ್ಸ್ಟಿಟ್ಯೂಷನ್ಸ್‌ನ ನೂತನ ಕಟ್ಟಡ ಉದ್ಘಾಟನೆ
ಉಡುಪಿ ಕಿನ್ನಿಮೂಲ್ಕಿ ವೇಗಸ್ ಲೇಔಟ್‌ನಲ್ಲಿ ನಿರ್ಮಿಸಲಾದ ನೇತ್ರಜ್ಯೋತಿ ಚಾರಿಟೇಬಲ್ ಟ್ರಸ್ಟ್ ಆಶ್ರಯದ ನೇತ್ರಜ್ಯೋತಿ ಇನ್ಸ್ಟಿಟ್ಯೂಷನ್ಸ್‌ನ ನೂತನ ಕಟ್ಟಡ ಶುಕ್ರವಾರ ಉದ್ಘಾಟನೆಗೊಂಡಿತು.
ಕಾಠ್ಯಕ್ರಮ ಉದ್ಘಾಟಿಸಿದ ಪೇಜಾವರ ಮಠಾಧೀಶರಾದ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರು, ಶ್ರೀಕೃಷ್ಣ ಗೀತೆಯ ಮೂಲಕ ಹೊಸ ಬೆಳಕನ್ನು ನೀಡಿದ್ದಾನೆ. ಮನುಷ್ಯನಿಗೆ ಭಗವಂತ ನೀಡಿದ ಕಣ್ಣುಗಳಿಗೆ ಧಕ್ಕೆಯುಂಟಾದಾಗ ನೇತ್ರ ವೈದ್ಯರ ಸಹಕಾರ ಅಗತ್ಯ. ಕೃಷ್ಣನ ನಾಡಿನಲ್ಲಿ ಮನೆ ಮಾತಾಗಿರುವ ಡಾ. ಕೃಷ್ಣಪ್ರಸಾದ್ ನೇತೃತ್ವದ ಪ್ರಸಾದ್ ನೇತ್ರಾಲಯ ಅನೇಕ ಮಂದಿಯ ಕಣ್ಣಿನ ಸಮಸ್ಯೆ ನಿವಾರಿಸುವ ಮೂಲಕ ಅವರ ಬಾಳಿನಲ್ಲಿಹೊಸ ಬೆಳಕು ನೀಡಿದೆ ಎಂದರು.
ಸಂಸ್ಥೆಗೆ ಉತ್ತರೋತ್ತರ ಶ್ರೇಯಸ್ಸಾಗಲಿ ಎಂದು ಹಾರೈಸಿದರು. ನೇತ್ರಜ್ಯೋತಿ ಇನ್ ಸ್ಟಿಟ್ಯೂಷನ್ಸ್ ಕಟ್ಟಡವನ್ನು ಪ್ರಧಾನಿ ನರೇಂದ್ರ ಮೋದಿ ಸಹೋದರ ಹಾಗೂ ಗುಜರಾತ್ ವಡನಗರ್ ಸರ್ವೋದಯ ಟ್ರಸ್ಟ್ ಅಧ್ಯಕ್ಷ ಸೋಮುಭಾಯ್ ಮೋದಿ ಉದ್ಘಾಟಿಸಿ, ನೇತ್ರ ಚಿಕಿತ್ಸೆ ಮೂಲಕ ಜನಸಾಮಾನ್ಯರ ಸೇವೆ ಮಾಡುತ್ತಿರುವ ಡಾ.ಕೃಷ್ಣಪ್ರಸಾದ್ ಕಾಯ ಶ್ಲಾಘನೀಯ ಎಂದರು.
ಅಂಬಲಪಾಡಿ ಜಿ.ಶಂಕರ್ ಫ್ಯಾಮಿಲಿ ಟ್ರಸ್ಟ್ ಪ್ರವರ್ತಕ ನಾಡೋಜ ಡಾ.ಜಿ.ಶಂಕರ್ ಅವರು ಕಾಲೇಜ್ ಆಫ್ ಫಿಸಿಯೊಥೆರಪಿ ಉದ್ಘಾಟಿಸಿ ಗುಣಮಟ್ಟದ ಶಿಕ್ಷಣವನ್ನು ಶಿಸ್ತುಬದ್ಧ ವಾತಾವರಣದಲ್ಲಿ ನೇತ್ರಜ್ಯೋತಿ ಸಂಸ್ಥೆ ನೀಡುತ್ತಿದೆ. ಈ ಈ ಸಂದರ್ಭ ಟೀಕೆ, ಪ್ರಶಂಸೆಗಳು ಸಹಜ. ವ್ಯಕ್ತಿ ಮಾಡುವ ಕಾವ್ಯ ಉಳಿಯತ್ತದೆ. ಟೀಕೆ ಅಳಿಯುತ್ತದೆ ಎಂದರು. ಕಾಲೇಜ್ ಆಫ್ ಅಲೈಡ್ ಹೆಲ್ತ್ ಸೈನ್ಸಸ್‌ನ್ನು ಸಂಸದ ಕೋಟ ಶ್ರೀನಿವಾಸ ಪೂಜಾರಿ, ಅನಾಟಮಿ ವಿಭಾಗವನ್ನು ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘ ಅಧ್ಯಕ್ಷ ಕಲ್ಲಡ್ಕ ಡಾ. ಪ್ರಭಾಕರ ಭಟ್ ಮತ್ತು ಫಿಸಿಯೊಲಾಜಿ ವಿಭಾಗವನ್ನು ಕಾಪು ಶಾಸಕ ಗುರ್ಮೆ ಸುರೇಶ ಶೆಟ್ಟಿ ಉದ್ಘಾಟಿಸಿ, ಶುಭ ಹಾರೈಸಿದರು. ಅಭ್ಯಾಗತರಾಗಿ ಉಡುಪಿ ಶಾಸಕ ಯಶಪಾಲ್
ಸುವಣ್, ವಿಧಾನ ಪರಿಷತ್ ಸದಸ್ಯ ಡಾ.ಧನಂಜಯ ಸರ್ಜಿ, ನಗರಸಭಾಧ್ಯಕ್ಷ ಪ್ರಭಾಕರ ಪೂಜಾರಿ, ಮಾಜಿ ಶಾಸಕ ಕೆ.ರಘುಪತಿ ಭಟ್, ನಗರಸಭಾ ಸದಸ್ಯ ವಿಜಯ ಪೂಜಾರಿ, ಮನೋವೈದ್ಯ ಡಾ.ಪಿ.ವಿ.ಭಂಡಾರಿ, ಜ್ಯೋತಿಷಿ ಕಬ್ಬಾಡಿ ಜಯರಾಮ ಆಚಾರ್ಯ, ಕೆಪಿಸಿಸಿ ಕಾರ್ಯದರ್ಶಿ ಎಂ.ಎ.ಗಫೂರ್, ಲೋಕೋಪಯೋಗಿ ಇಲಾಖೆ ನಿವೃತ್ತ ಅಧಿಕಾರಿ ಟಿ.ಸುಕುಮಾರ್, ಶಶಿಧರ ರಾವ್, ಉದ್ಯಮಿ ಮುನಿಯಾಲು ಉದಯಕುಮಾರ್ ಶೆಟ್ಟಿ ಆಗಮಿಸಿದ್ದರು. ನೇತ್ರಜ್ಯೋತಿ ಜಾರಿಟೇಬಲ್ ವಿಶ್ವಸ್ಥ ರಘುರಾಮ ರಾವ್, ನಿರ್ದೇಶಕಿ ರಶ್ಮಿ ಕೃಷ್ಣಪ್ರಸಾದ್ ಇದ್ದರು. ಟ್ರಟ್ ಆಡಳಿತ ನಿರ್ದೇಶಕ ಹಾಗೂ ಖ್ಯಾತ ನೇತ್ರ ತಜ್ಞ ಡಾ.ಕೃಷ್ಣಪ್ರಸಾದ್ ಸ್ವಾಗತಿಸಿ, ಕಳೆದ 8 ವರ್ಷಗಳಲ್ಲಿ ಆವಿಭಜಿತ ದ.ಕ. ಮಾತ್ರವಲ್ಲದೇ ರಾಜ್ಯ ಹೊರ ರಾಜ್ಯಗಳಲ್ಲಿ ಸುಮಾರು 10 ಲಕ್ಷ ಮಂದಿಯ ಕಣ್ಣು ತಪಾಸಣೆ ನಡೆಸಿ, 2 ಲಕ್ಷ ಮಂದಿಗೆ ಉಚಿತ ಕನ್ನಡಕ ವಿತರಿಸಲಾಗಿದೆ ಎಂದರು.
ಈ ಸಂದರ್ಭದಲ್ಲಿ ಸಂಸ್ಥೆಯ ಬೆಳವಣಿಗೆಯಲ್ಲಿ ಸಹಕರಿಸಿದ ಮನೋವೈದ್ಯ ಡಾ.ಪಿ.ವಿ.ಭಂಡಾರಿ, ವಕೀಲರಾದ ಉಮೇಶ ಶೆಟ್ಟಿ ಕಳತ್ತೂರು ಮತ್ತು ಅ ಶೆಟ್ಟಿ, ಉದ್ಯಮಿಗಳಾದ ಅರುಣ್ ಆರು ಶೆಟ್ಟಿ ಮತ್ತು ರಾಜೇಶ್ ಕಾರಂತ ಅವರನ್ನು ಸನ್ಮಾನಿಸಲಾಯಿತು.