ನವೆ೦ಬರ್ 25ರಿ೦ದ ಉಡುಪಿಯ ಕಲ್ಯಾಣಪುರ ಶ್ರೀವೆ೦ಕಟರಮಣ ದೇವಸ್ಥಾನದಲ್ಲಿ ವಾಡಿಕೆಯ೦ತೆ ಜರಗಲಿರುವ ಭಜನಾ ಸಪ್ತಾಹ ಮಹೋತ್ಸವವು ಆರ೦ಭಗೊ೦ಡಿದ್ದು ,ಇದು 97ನೇ ವರ್ಷದ ಭಜನಾ ಸಪ್ತಾಹ ಮಹೋತ್ಸವವಾಗಿರುತ್ತದೆ........ಡಿಸೆಂಬರ್ 1 ರಿಂದ 19ರವರೆಗೆ ಸಂಸತ್ತಿನ ಚಳಿಗಾಲದ ಅಧಿವೇಶನ
ಬಿಜೆಪಿಯವರ ಆಡಳಿತದ ಎಲ್ಲಾ ಹಗರಣಗಳು ತನಿಖೆಯಾಗಿ ಅದರ ವರದಿ ಬರಲಿದ್ದು ಅದನ್ನು ಮರೆಮಾಚಲು ವಖ್ಫ್ ಭೂಮಿ ಆಕ್ರಮ ವಿಚಾರದಲ್ಲಿ ಅನಗತ್ಯ ಗಲಾಟೆ ಎಬ್ಬಿಸುತ್ತಿರುವ ಬಿಜೆಪಿ ನಾಯಕರು:ಸುರೇಶ್ ಶೆಟ್ಟಿ ಬನ್ನಂಜೆ
ರಾಜ್ಯದಲ್ಲಿ ಹಿಂದೆ ಬಿಜೆಪಿ ಸರ್ಕಾರ ಆಡಳಿತದಲ್ಲಿ ಇರುವಾಗ ಲಕ್ಷಾಂತರ ಕೋಟಿ ಹಣವನ್ನು ಇವರು ಲೂಟಿ ಮಾಡಿದ್ದರು ಅಷ್ಟು ಮಾತ್ರವಲ್ಲದೆ ಪ್ರತಿಯೊಬ್ಬ ಗುತ್ತಿಗೆದಾರರಿಂದ ಶೇಕಡ 40% ರಷ್ಟು ₹ಹಣವನ್ನು ಪಡೆದು ದಬ್ಬಾಳಿಕೆ ನಡೆಸುತ್ತಿದ್ದ ಈ ಬಿಜೆಪಿಯವರು ಕೋವಿಡ್ ಹಗರಣದಲ್ಲಿ ಸಾವಿರಾರು ಕೋಟಿ ಹಣವನ್ನು ಲೂಟಿ ಮಾಡಿರುತ್ತಾರೆ ಇವರ ಲಕ್ಷಾಂತರ ಕೋಟಿ ಲೂಟಿಯ ತನಿಖೆಯನ್ನು ಈಗಿನ ಕಾಂಗ್ರೆಸ್ ಸರಕಾರ ನಡೆಸುತ್ತಿದ್ದು ಅಷ್ಟು ಮಾತ್ರವಲ್ಲದೆ ಉಡುಪಿ ಶಾಸಕ ಯಶ್ ಪಾಲ್ ಸುವರ್ಣ ಇವರ ನೇತೃತ್ವದ ಮಹಾಲಕ್ಷ್ಮಿ ಕೋ ಆಪರೇಟಿವ್ ಬ್ಯಾಂಕ್ ನಲ್ಲಿ ಗ್ರಾಹಕರಿಗೆ ಕೋಟಿ,ಕೋಟಿ,ಹಣ ವಂಚನೆಯಾಗಿದ್ದು ಇದು ಬಿಜೆಪಿಯ ರಾಷ್ಟ್ರೀಯ ಹಾಗೂ ರಾಜ್ಯ ನಾಯಕರ ನಿದ್ದೆಗೆಡಿಸಿದೆ ಇದನ್ನು ಮರೆಮಾಚಲು ಎಲ್ಲ ರೈತರ ಪಹಣಿಯಲ್ಲಿ ವಖ್ಫ್ ಹೆಸರು ನಮೂದಿಸಿ ಜನಸಾಮಾನ್ಯರನ್ನು ಮೋಸಗೊಳಿಸಲು ಪ್ರಯತ್ನಿಸುತ್ತಿದ್ದಾರೆ ಈ ಹಿಂದೆ ಈ ಬಿಜೆಪಿಯವರು ಮಾಡಿದ್ದ ಈ ಕರ್ಮಕಾಂಡವನ್ನು ಮರೆ ಮಾಚಿ ಕಾಂಗ್ರೆಸ್ ಪಕ್ಷದ ವಿರುದ್ಧ ಪ್ರತಿಭಟನೆ ನಾಟಕವನ್ನು ಆಡುತ್ತಿದ್ದಾರೆ.
ಇಂತಹ ದುಷ್ಟ ಶಕ್ತಿಗಳ ವಿರುದ್ಧ ನಮ್ಮ ಮತದಾರರು ಎಚ್ಚೆತ್ತುಕೊಂಡು ಸಾರ್ವಜನಿಕರು ಇವರಿಗೆ ತಕ್ಕ ಪಾಠವನ್ನು ಕಲಿಸಬೇಕಾಗಿದೆ ಹಿಂದುತ್ವದ ಹೆಸರಲ್ಲಿ ಸಾವಿರಾರು ಕೋಟಿ ನುಂಗಿ ಹಿಂದುಗಳನ್ನೇಮೂಲೆಗುಂಪು ಮಾಡುತ್ತಿರುವ ಇಂತಹ ದುಷ್ಟ ಬಿಜೆಪಿಯ ನಾಯಕರ ಅಗತ್ಯತೆ ನಮ್ಮ ದೇಶಕ್ಕೆ ಹಾಗೂ ರಾಜ್ಯಕ್ಕೆ ಮಾತ್ರವಲ್ಲದೆ ನಮ್ಮ ಜಿಲ್ಲೆಗೂ ಬೇಕಾಗಿಲ್ಲ ಜನಸಾಮಾನ್ಯರು ಈ ಡೋಂಗಿ ಬಿಜೆಪಿ ನಾಯಕರ ವಿರುದ್ಧ ಎಚ್ಚೆತ್ತುಕೊಳ್ಳಬೇಕು ಎಂದು ಉಡುಪಿ ಬ್ಲಾಕ್ ಕಾಂಗ್ರೆಸ್ ರಾಜೀವ ಗಾಂಧಿ ಪಂಚಾಯತ್ ರಾಜ್ ಸಂಘಟನೆ ಇದರ ಅಧ್ಯಕ್ಷರಾದ ಸುರೇಶ್ ಶೆಟ್ಟಿ ಬನ್ನಂಜೆ ಇವರು ತಿಳಿಸಿರುತ್ತಾರೆ.