ನವೆ೦ಬರ್ 25ರಿ೦ದ ಉಡುಪಿಯ ಕಲ್ಯಾಣಪುರ ಶ್ರೀವೆ೦ಕಟರಮಣ ದೇವಸ್ಥಾನದಲ್ಲಿ ವಾಡಿಕೆಯ೦ತೆ ಜರಗಲಿರುವ ಭಜನಾ ಸಪ್ತಾಹ ಮಹೋತ್ಸವವು ಆರ೦ಭಗೊ೦ಡಿದ್ದು ,ಇದು 97ನೇ ವರ್ಷದ ಭಜನಾ ಸಪ್ತಾಹ ಮಹೋತ್ಸವವಾಗಿರುತ್ತದೆ........ಡಿಸೆಂಬರ್ 1 ರಿಂದ 19ರವರೆಗೆ ಸಂಸತ್ತಿನ ಚಳಿಗಾಲದ ಅಧಿವೇಶನ

ಉಡುಪಿ ಶ್ರೀಕೃಷ್ಣಮಠದಲ್ಲಿ ಯತಿ ಸಮಾಗಮ

ಉಡುಪಿ: ಪರ್ಯಾಯಮಠಾಧೀಶರಾದ ಪರಮ ಪೂಜ್ಯ ಪುತ್ತಿಗೆ ಶ್ರೀಪಾದರ ಆಹ್ವಾನದ ಮೇರೆಗೆ ಪೂಜ್ಯ ಹರಿಹರಪುರಮಠಾಧೀಶರಾದ ಸ್ವಯಂಪ್ರಕಾಶ ಸಚ್ಚಿಚಿದಾನಂದ ಸರಸ್ವತಿಮಹಾಸ್ವಾಮಿಗಳು ಮತ್ತು ತಿರುಚಿ ಮಹಾಸಂಸ್ಥಾನದ ಮಠಾಧೀಶರಾದ ಪೂಜ್ಯ ಜಯೇಂದ್ರ ಸರಸ್ವತಿ ಮಹಾಸ್ವಾಮಿಗಳು ಉಡುಪಿಗೆ ಆಗಮಿಸಿ ಶ್ರೀಕೃಷ್ಣದರ್ಶನ ಪಡೆದುಕೊಂಡರು.

ಶ್ರೀಮಠದಿಂದ ಸಾಂಪ್ರದಾಯಿಕ ಗೌರವಾದರಗಳೊಂದಿಗೆ ಯತಿದ್ವಯರನ್ನು ಸ್ವಾಗತಿಸಲಾಯಿತು.

 

ಬಳಿಕಪೂಜ್ಯ ಪರ್ಯಾಯ ಶ್ರೀಪಾದರು ಕಿರಿಯ ಶ್ರೀಪಾದರ ಜೊತೆಗೆ ಉಭಯ ಶ್ರೀಗಳವರಿಗೂ ಶ್ರೀಕೃಷ್ಣ ಪ್ರಸಾದವನ್ನು ನೀಡಿದರು.

ಶ್ರೀಪಾದರು ತಮ್ಮ ಆಶೀರ್ವಚನದಲ್ಲಿ ಸರ್ವಜನೋಪಯೋಗಿಯಾದ ಕೋಟಿ ಗೀತಾಲೇಖನಯಜ್ಞ ಸಾಮಾಜಿಕ ಕ್ರಾಂತಿಯಾಗಿ ಬೆಳೆದರ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ಉಭಯ ಶ್ರೀಪಾದಂಗಳವರು ಪೂಜಾದಿಕಾರ್ಯಗಳನ್ನು ನೆರವೇರಿಸಿ ಭವ್ಯ ಗೀತಮಂದಿರದ ದರ್ಶನ ಪಡೆದು ಮುಂದೆ ಗೀತಾಮಂದಿರದಲ್ಲಿನಡೆಯುವ ಗೀತಾಯೋಜನೆಗಳ ಮಾಹಿತಿಯನ್ನು ಪಡೆದುಕೊಂಡು ಸಂತಸಪಟ್ಟರು.

No Comments

Leave A Comment