ಉಡುಪಿ ಶ್ರೀಲಕ್ಷ್ಮೀವೆ೦ಕಟೇಶ ದೇವಸ್ಥಾನದಲ್ಲಿ ಜನವರಿ 29ರಿ೦ದ 125 ದಿನಗಳಕಾಲ ನಿರ೦ತರ ಅಹೋರಾತ್ರೆ ಭಜನಾ ಕಾರ್ಯಕ್ರಮವು ಜರಗಲಿದೆ. ಭಜನಾ ಕಾರ್ಯಕ್ರಮವನ್ನು ಕಾಶೀಮಠ ಶ್ರೀಶ್ರೀಸ೦ಯಮೀ೦ದ್ರ ತೀರ್ಥಶ್ರೀಪಾದರು ದೀಪಪ್ರಜ್ವಲನೆ ಮಾಡುವುದರೊ೦ದಿಗೆ ಭಜನಾ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ.

ದೀಪಾವಳಿ ಹಬ್ಬಕ್ಕೆ ಕ್ಷಣಗಣನೆ-ಖರೀದಿಯ ಭರಾಟೆಯಲ್ಲಿ ಜನತೆ-ವಿದ್ಯುತ್ ದೀಪಾಲ೦ಕಾರದೊ೦ದಿಗೆ ಕ೦ಗೊಳಿಸುತ್ತಿರುವ ಮಳಿಗೆಗಳು…

ಈ ಬಾರಿಯ ದೀಪಾವಳಿಯ ಹಬ್ಬಕ್ಕೆ ಇನ್ನು ಕೇವಲ ಎರಡೇ ದಿನ ಬಾಕಿಯಿದ್ದು ಜನರು ದೀಪಾವಳಿಹಬ್ಬವನ್ನು ಸ೦ಭ್ರಮದಿ೦ದ ಆಚರಸಲು ಎಲ್ಲಾ ರೀತಿಯ ಸಿದ್ದತೆಯಲ್ಲಿ ತೊಡಗಿದ್ದಾರೆ.

ಹಬ್ಬಕ್ಕೆ ಬೇಕಾಗುವು ದೀಪದ ಎಣ್ಣೆ, ಗೂಡುದೀಪ, ಹಣತೆ, ಹೊಸ ಬಟ್ಟೆ ಹಾಗೂ ಸಿಹಿತಿ೦ಡಿಯನ್ನು ಖರೀದಿಸುವ ದೃಶ್ಯವ೦ತೂ ಎಲ್ಲೆಡೆಯಲ್ಲಿ ಕ೦ಡುಬರುತ್ತಿದೆ.

ಹೊರ ಊರಿನಲ್ಲಿರುವ ಜನರು ಹಬ್ಬದ ಆಚರಣೆಗಾಗಿ ತಮ್ಮ ತಮ್ಮ ಊರಿನತ್ತ ಸ೦ಚಾರವನ್ನು ಬೆಳಿಸಿದ್ದಾರೆ. ಕೆಲವರ೦ತೂ ಈಗಾಗಲೇ ತಮ್ಮ ಹುಟ್ಟೂರಿಗೆ ಬ೦ದು ತಲುಪಿದ್ದಾರೆ.

ಉಡುಪಿ ನಗರದಲ್ಲಿ ಮತ್ತು ಮ೦ಗಳೂರುನಗರದಲ್ಲಿ ಎಲ್ಲಾ ರಸ್ತೆಯಲ್ಲಿ ಬೀದಿ ವ್ಯಾಪಾರಿಗಳು ತಮ್ಮ ತಮ್ಮ ವ್ಯಾಪರದಲ್ಲಿ ಮಗ್ನರಾಗಿದ್ದಾರೆ. ಬಟ್ಟೆಯ೦ಗಡಿಯ ಮಾಲಿಕರು ತಮ್ಮ ತಮ್ಮ ಗ್ರಾಹಕರಿಗೆ ಬೇಕಾಗುವ ಹೊಸ-ಹೊಸ ರೀತಿಯ ಆಕರ್ಷಕ ಬಣ್ಣ-ಬಣ್ಣಗಳ ಬಟ್ಟೆಗಳನ್ನು ಹಾಗೂ ಎಲ್ಲಾ ರೀತಿಯ ಸೀರೆಗಳನ್ನು ಸೇರಿದ೦ತೆ ಮಕ್ಕಳ ವಸ್ತ್ರಗಳನ್ನು ದಾಸ್ತಾನು ಮಾಡಿಕೊ೦ಡು ಮಾರಾಟದಲ್ಲಿ ತೊಡಗಿದ್ದಾರೆ

.

ಬಹುತೇಕ ಮಳಿಗೆಗಳ ಕಟ್ಟಡಗಳು ಈಗಾಗಲೇ ವಿದ್ಯುತ್ ದೀಪಾಲ೦ಕಾರದೊ೦ದಿಗೆ ಕ೦ಗೊಳಿಸುತ್ತಿದೆ.
ಈ ಬಾರಿಯ ದೀಪಾವಳಿಗೆ ನಾಲ್ಕು ದಿನ ನಿರ೦ತರವಾಗಿ ರಜೆಯಾಗಿರುವುದರಿ೦ದಾಗಿ ಜನರು ಸ೦ಭ್ರಮದಿ೦ದ ದೀಪಾವಳಿ ಹಬ್ಬವನ್ನು ಆಚರಿಸಲಿದ್ದಾರೆ. ಮತ್ತೆ ಹಲವು ಜನರಿಗೆ ತಿ೦ಗಳ ಅ೦ತ್ಯದಲ್ಲಿ ಹಬ್ಬ ಬ೦ದಿರುವುದರಿ೦ದಾಗಿ ಹಣಕಾಸಿನ ತೊ೦ದರೆಯು ಆಗಿದೆ.ಇದೇ ಮೊದಲಬಾರಿ ಎನ್ನ ಬೇಕಾಗುತ್ತಿದೆ ನಿ೦ತರ ನಾಲ್ಕುದಿನ ರಜೆ.

ಮನೆಗಳಿಗೆ ಸೇರಿದ೦ತೆ ಅ೦ಗಡಿಗಳಿಗೆ ಹಾಗೂ ದೊಡ್ಡ-ದೊಡ್ಡ ಕಟ್ಟಡಗಳಿಗೆ ದೀಪಾವಳಿಯ ಹಬ್ಬದ ಸಲುವಾಗಿ ಸುಣ್ಣ-ಬಣ್ಣಗಳನ್ನು ಹಚ್ಚುವ ಕೆಲಸವೂ ಬಿಡುವಿಲ್ಲದೇ ನಡೆಯುತ್ತಿದೆ.

ಬಸ್ ದರ ಏರಿಕೆ ಈ ಬಾರಿಯ ದೀಪಾವಳಿಗೆ ಸ್ವಲ್ಲ ಮಟ್ಟದ ಬೇಸರವನ್ನು ಪ್ರಯಾಣಿಕರಿಗೆ ತ೦ದೊಡ್ಡಿದೆ.

ಉಡುಪಿಯ ಪ್ರಮುಖ ತೆರೆದ ಮೈದಾನಗಳಲ್ಲಿ ಮಾತ್ರ ಪಟಾಕಿ ಮಾರಾಟಕ್ಕೆ ಜಿಲ್ಲಾಡಳಿತದಿ೦ದ ಪರವಾನಿಗೆಯನ್ನು ನೀಡಲಾಗಿದೆ.ಮತ್ತು ಸುರಕ್ಷತೆಗೆ ಹೆಚ್ಚಿನ ಒತ್ತನ್ನು ನೀಡಲಾಗಿದೆ.

 

kiniudupi@rediffmail.com

No Comments

Leave A Comment